ಸರ್ವಜ್ಞರ ತ್ರಿಪದಿಗಳು ಸಾಮಾಜಿಕ ಪರಿವರ್ತನೆಗೆ ನಾಂದಿ

| Published : Feb 21 2024, 02:07 AM IST / Updated: Feb 21 2024, 02:08 AM IST

ಸಾರಾಂಶ

ಸಾವಿರಕ್ಕೂ ಹೆಚ್ಚು ತ್ರಿಪದಿ ರಚಿಸಿ, ಸಮಾಜದೊಳಗಿನ ಡಾಂಬಿಕ, ಮೌಢ್ಯ, ಕೀಳರಿಮೆ, ಬೇಧ ಭಾವವನ್ನು ತೊಲಗಿಸಲು ಶ್ರಮಿಸಿದವರು.ಇಂತಹ ದಾರ್ಶನಿಕ ಶರಣರ ವೈಚಾರಿಕತೆ ನಾವೆಲ್ಲರೂ ತಲೆಬಾಗಿ ಅವರ ಹಾದಿಯಲ್ಲಿ ನಡೆದು ಸಮ-ಸಮಾಜ ನಿರ್ಮಾಣದಲ್ಲಿ ತೊಡಗಿಸಿಕೊಳ್ಳೋಣ

ಕನಕಗಿರಿ: ಸರ್ವಜ್ಞರ ತ್ರಿಪದಿಗಳು ಸಾಮಾಜಿಕ ಪರಿವರ್ತನೆಗೆ ನಾಂದಿಯಾಗಿವೆಎಂದು ಕುಂಬಾರ ಸಮಾಜದ ಮುಖಂಡ ಸಿಂಧು ಬಲ್ಲಾಳ ಹೇಳಿದರು.

ಅವರು ಪಟ್ಟಣದ ನವಲಿ ರಸ್ತೆಯಲ್ಲಿನ ಸರ್ವಜ್ಞ ವೃತ್ತದಲ್ಲಿ ಹಮ್ಮಿಕೊಂಡಿದ್ದ ಸರ್ವಜ್ಞ ಜಯಂತಿ ನಿಮಿತ್ತ ಅವರ ಭಾವಚಿತ್ರಕ್ಕೆ ಪೂಜೆಸಲ್ಲಿಸಿ ಮಂಗಳವಾರ ಮಾತನಾಡಿದರು.

೧೬ನೇ ಶತಮಾನದಿಂದಲೂ ಸಾವಿರಾರು ತ್ರಿಪದಿಗಳನ್ನು ರಚಿಸಿದ ಸರ್ವಜ್ಞರ ಸರಳತೆ ಇಡೀ ಸಮಾಜವೇ ಬೆರಾಗಾಗುವಂತೆ ಮಾಡಿತ್ತು. ಸಾವಿರಕ್ಕೂ ಹೆಚ್ಚು ತ್ರಿಪದಿ ರಚಿಸಿ, ಸಮಾಜದೊಳಗಿನ ಡಾಂಬಿಕ, ಮೌಢ್ಯ, ಕೀಳರಿಮೆ, ಬೇಧ ಭಾವವನ್ನು ತೊಲಗಿಸಲು ಶ್ರಮಿಸಿದವರು.ಇಂತಹ ದಾರ್ಶನಿಕ ಶರಣರ ವೈಚಾರಿಕತೆ ನಾವೆಲ್ಲರೂ ತಲೆಬಾಗಿ ಅವರ ಹಾದಿಯಲ್ಲಿ ನಡೆದು ಸಮ-ಸಮಾಜ ನಿರ್ಮಾಣದಲ್ಲಿ ತೊಡಗಿಸಿಕೊಳ್ಳೋಣ ಎಂದರು.

ಬಿಜೆಪಿ-ಕಾಂಗ್ರೇಸ್ ಪಕ್ಷದ ಮುಖಂಡರು ಪೂಜಾ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಸರ್ವಜ್ಞರ ಭಾವಚಿತ್ರಕ್ಕೆ ಪುಷ್ಪ ನಮನ ಸಲ್ಲಿಸಿದರು.

ಪ್ರಮುಖರಾದ ವೀರಭದ್ರಪ್ಪ ಕುಂಬಾರ, ಷಣ್ಮುಖಪ್ಪ, ಶರಣಪ್ಪ, ಪ್ರಕಾಶ ಚಕ್ರಸಾಲಿ, ಮಹಾಂತೇಶ, ಮರಿಯಪ್ಪ, ಮಂಜುನಾಥ, ಹನುಮಂತರೆಡ್ಡಿ, ಶೇಷಪ್ಪ ಪೂಜಾರ, ಸಣ್ಣ ಕನಕಪ್ಪ, ನರಸಪ್ಪ ಕುರುಗೋಡ, ಮಹಾಂತೇಶ ಸಜ್ಜನ ಸೇರಿದಂತೆ ಕುಂಬಾರ ಸಮಾಜದ ಮಹಿಳೆಯರು ಇದ್ದರು.