ಕೂಡಿ ಬಾಳುವುದೇ ನಿಜವಾದ ಧರ್ಮ: ಈಶ್ವರಾನಂದಪುರಿ ಸ್ವಾಮೀಜಿ ಅಭಿಮತ

| Published : May 16 2024, 12:45 AM IST

ಕೂಡಿ ಬಾಳುವುದೇ ನಿಜವಾದ ಧರ್ಮ: ಈಶ್ವರಾನಂದಪುರಿ ಸ್ವಾಮೀಜಿ ಅಭಿಮತ
Share this Article
  • FB
  • TW
  • Linkdin
  • Email

ಸಾರಾಂಶ

ಕೂಡಿ ಬಾಳುವುದೇ ನಿಜವಾದ ಧರ್ಮವಾಗಿದೆ. ಬೀರದೇವರು ಕೂಡಿ ಬಾಳುವುದನ್ನು ಹೇಳಿಕೊಟ್ಟಿದ್ದಾರೆ ಎಂದು ಕೆಲ್ಲೋಡು ಈಶ್ವರಾನಂದಪುರಿ ಸ್ವಾಮೀಜಿ ನುಡಿದಿದ್ದಾರೆ.

ಮಲೇಬೆನ್ನೂರು: ಕೂಡಿ ಬಾಳುವುದೇ ನಿಜವಾದ ಧರ್ಮವಾಗಿದೆ. ಬೀರದೇವರು ಕೂಡಿ ಬಾಳುವುದನ್ನು ಹೇಳಿಕೊಟ್ಟಿದ್ದಾರೆ ಎಂದು ಕೆಲ್ಲೋಡು ಈಶ್ವರಾನಂದಪುರಿ ಸ್ವಾಮೀಜಿ ನುಡಿದರು. ಮಲೇಬೆನ್ನೂರು ಸಮೀಪದ ಕುಣೆಬೆಳಕೆರೆ ಗ್ರಾಮದಲ್ಲಿ ಬುಧವಾರ ಆಯೋಜಿಸಿದ್ದ ಬೀರಲಿಂಗೇಶ್ವರ ಸಮುದಾಯ ಭವನ ಲೋಕಾರ್ಪಣೆ, ವಿವಿಧ ದೇವರುಗಳ ಪ್ರಾಣ ಪ್ರತಿಷ್ಠಾಪನೆ ಹಾಗೂ ಧರ್ಮಸಭೆ ಸಾನ್ನಿಧ್ಯ ವಹಿಸಿ ಸಂದೇಶ ನೀಡಿದ ಅವರು, ಕೂಡಿ ಬಾಳುವುದಕ್ಕೆ ಅನೇಕ ವ್ತಾಖ್ಯಾನ ಇವೆ. ಅಂಥ ಸಾಮರಸ್ಯದಿಂದ ಬಾಳುವುದು ಜನರಲ್ಲಿ ರೂಢಿಯಾಗಬೇಕಿದೆ. ಕೂಡಿ ಬಾಳುವ ಸಂಗತಿ ಮಹದೇವನಿಗೆ ತಿಳಿದಿರುವುದು ಮಾನವರಿಗೆ ತಿಳಿಯದಿರುವುದು ವಿಷಾದನೀಯ ಸಂಗತಿಯಾಗಿದೆ ಎಂದು ಹೇಳಿದರು.

ಮನುಷ್ಯ ಸಜ್ಜನರ ಸಂಗ ಮಾಡಿದಷ್ಟು ಉನ್ನತ ಸ್ಥಾನಕ್ಕೆ ಏರುವ ಸಂದರ್ಭ ಇವೆ. ಛಿದ್ರ ಕುಟುಂಬಗಳು ಒಂದಾಗಿ ಜೀವನ ನಡೆಸುವುದೇ ನೈಜ ಧರ್ಮವಾಗಿದೆ. ಆಗ ಬಸವಣ್ಣನವರ ಸಾಮಾಜಿಕ ಕ್ರಾಂತಿಗೆ ಅರ್ಥ ಬರುತ್ತದೆ. ಆದರೆ, ಬೆಂಗಳೂರಿನಂಥ ಪಟ್ಟಣದಲ್ಲಿ ಮೂರು ಕುಟುಂಬಗಳು ಒಂದಾಗಿರುವುದು ವಿರಳ, ಪೂಜೆ, ಅಭಿಷೇಕ, ಮಂಗಳಾರತಿ, ನೈವೇದ್ಯಗಳು ಒಂದೇ ತೆರನಾಗಿವೆ. ದೇವರ ದೃಷ್ಠಿಯಲ್ಲಿ ಯಾರೂ ಮೇಲಲ್ಲ ಕೀಳಲ್ಲ. ಕುಣೆಬೆಳಕೆರೆ ಬೀರಪ್ಪ ಅರ್ಧ ಮತ್ತು ಮುಗಳಗೆರೆ ಬೀರಪ್ಪನಿಗೆ ಅರ್ಧ ಕಾಣಿಕೆ ನೀಡುವುದು ಉತ್ತಮ ಸಂಪ್ರದಾಯವಾಗಿದೆ ಎಂದರು.

ಸಮಾರಂಭದಲ್ಲಿ ಸಂಸದ ಜಿ.ಎಂ. ಸಿದ್ದೇಶ್ವರ್, ಹನಗವಾಡಿ ವೀರೇಶ್, ಪೊಲೀಸ್ ಅಧಿಕಾರಿ ದೇವೇಂದ್ರಪ್ಪ, ಚಂದ್ರಶೇಖರ್ ಪಜಾರ್, ಮುರಿಗೆಣ್ಣನವರ್, ಎನ್.ಶ್ರೀನಿವಾಸ್, ಆನಂದಪ್ಪ, ಯೋಗಿಸ್ವಾಮಿ, ಬಸಯ್ಯ, ಚಂದ್ರಶೇಖರ್ ಹಾಗೂ ಹೊಸಮುಗಳಗೇರಿ, ಮುಕ್ತೇನಹಳ್ಳಿ, ಭಾನುವಳ್ಳಿ, ಬನ್ನಿಕೋಡು, ಸಲಹನಹಳ್ಳಿ, ಕೋಟೆಹಾಳ್, ಮಲೇಬೆನ್ನೂರು, ಕುಂಬಳೂರು, ಬೆಳ್ಳೂಡಿ, ಹರಿಹರ, ಪುರೋಹಿತ ವರ್ಗದವರು, ಸಾವಿರಾರು ಭಕ್ತರು, ಗ್ರಾಮಸ್ಥರು ಇದ್ದರು. ದಾನಿಗಳನ್ನು ಗೌರವಿಸಲಾಯಿತು. ಅನ್ನ ಸಂತರ್ಪಣೆ ನಡೆಯಿತು.

- - - -೧೫ಎಂಬಿಆರ್೧: ಧರ್ಮಸಬೆಯನ್ನು ಈಶ್ವರಾನಂದಪುರಿ ಸ್ವಾಮೀಜಿ ಉದ್ಘಾಟಿಸಿದರು.