ಸಾರಾಂಶ
ಕನ್ನಡಪ್ರಭ ವಾರ್ತೆ ಮುದ್ದೇಬಿಹಾಳ
ಮಹಿಳೆಯವರಿಗೆ ಉಡಿ ತುಂಬುವ ಪದ್ಧತಿ ಭಾರತೀಯ ಸಂಸ್ಕೃತಿಯ ಪ್ರತೀಕ. ಇಂತಹ ಸಂಪ್ರದಾಯವನ್ನು ಇಂದಿಗೂ ಪಾಲಿಸಿಕೊಂಡು ಬಂದಿರುವುದು ಹೆಮ್ಮೆಯ ಸಂಗತಿ ಎಂದು ಹಿರೂರು ಅನ್ನದಾನೇಶ್ವರ ಸಂಸ್ಥಾನ ಹಿರೇಮಠದ ಜಯಸಿದ್ದೇಶ್ವರ ಶಿವಾಚಾರ್ಯ ಮಹಾಸ್ವಾಮಿಗಳು ನುಡಿದರು.ಪಟ್ಟಣದ ಹೇಮರಡ್ಡಿ ಮಲ್ಲಮ್ಮ ಮಂಗಲ ಕಾರ್ಯಾಲಯದಲ್ಲಿ ವರದಾನೇಶ್ವರಿ ಚಾರಿಟೇಬಲ್ ಟ್ರಸ್ಟ್ ವತಿಯಿಂದ ಹಮ್ಮಿಕೊಂಡಿದ್ದ ಶ್ರಾವಣ ಮಾಸದ ನಿಮಿತ್ತ ಭಾನುವಾರ ನಡೆದ 1501 ಮಹಿಳೆಯವರಿಗೆ ಉಡಿ ತುಂಬುವ ಹಾಗೂ ಹಿರಿಯ ನಾಗರಿಕರಿಗೆ ಸನ್ಮಾನ ಕಾರ್ಯಕ್ರಮದಲ್ಲಿ ಸಾನ್ನಿಧ್ಯ ವಹಿಸಿ ಮಾತನಾಡಿದ ಅವರು, ಹಿಂದೂಗಳಿಗೆ ಶ್ರಾವಣ ತಿಂಗಳ ಅತ್ಯಂತ ಪವಿತ್ರ ದಿನಗಳಾಗಿದ್ದು, ಈ ಹಿನ್ನೆಲೆಯಲ್ಲಿ ಒಂದು ತಿಂಗಳು ಪರ್ಯಂತ ದೇವರ ನಾಮಸ್ಮರಣೆ, ಪುರಾಣ, ಪ್ರವಚನ ಸೇರಿದಂತೆ ಅನೇಕ ಧಾರ್ಮಿಕ ಕಾರ್ಯಕ್ರಗಳನ್ನು ನಡೆಸುವ ಮೂಲಕ ಮೂಲಕ ಭಕ್ತಿ ಮೆರೆಯುವುದರೊಂದಿಗೆ ದೇವರ ನಾಮಸ್ಮರಣೆ ಮಾಡುವುದು ಹಿಂದಿನಿಂದಲೂ ನಡೆದುಕೊಂಡು ಬಂದ ಪದ್ಧತಿಯಾಗಿದೆ ಎಂದರು.ಇಂದು ಪಾಶ್ಚಾತ್ಯ ಸಂಸ್ಕೃತಿ ಅನುಕರಣೆಯಿಂದಾಗಿ ನಮ್ಮದೇಶದ ನಿಜವಾದ ಸಂಸ್ಕೃತಿ, ಪರಂಪರೆ ಆಚರಣೆಗಳನ್ನು ಮರೆಯುತ್ತಿದ್ದೇವೆ. ಭಾರತೀಯ ಸಂಸ್ಕೃತಿಯಲ್ಲಿ ಮಹಿಳೆಯರಿಗೆ ಪೂಜ್ಯನೀಯ ಸ್ಥಾನ ನೀಡಲಾಗಿದೆ. ತಾಯಂದಿರು ಮಕ್ಕಳಿಗೆ ಗುಣಮಟ್ಟ ಶಿಕ್ಷಣದ ಜೊತೆಗೆ ಉತ್ತಮ ಸಂಸ್ಕಾರ ನೀಡುವುದರ ಜತೆಗೆ ಪ್ರತಿಯೊಬ್ಬರು ತಮ್ಮ ಜೀವನದಲ್ಲಿ ನೈತಿಕತೆ ಮಾನವೀಯ ಮೌಲ್ಯಗಳನ್ನು ಮೈಗೂಡಿಸಿಕೊಂಡರೇ ಅತ್ಯುತ್ತಮ ಸಮಾಜ ನಿರ್ಮಾಣ ಸಾಧ್ಯ ಎಂದರು.ಈ ಸಂದರ್ಭದಲ್ಲಿ ಉಡಿ ತುಂಬುವ ಕಾರ್ಯಕ್ರಮದಲ್ಲಿ ತಾಲೂಕಿನ ವಿವಿಧ ಗ್ರಾಮಗಳ ಮಹಿಳೆಯರು ಪಾಲ್ಗೊಂಡಿದ್ದರು. ಪಟ್ಟಣದ, ಭೂದಾನಿ ಸಿದ್ದಯ್ಯ ಕಲ್ಯಾಣಮಠ ದಂತಿಗೆ ಹಾಗೂ ಹಿರಿಯ ನಾಗರಿಕರನ್ನು ಗೌರವಿಸಲಾಯಿತು.
ಕನಕಗಿರಿ ಶ್ರೀಭ್ರಮರಾಂಭ ಸಮೇತ ಮಲ್ಲಿಕಾರ್ಜುನ ಆಶ್ರಮದ ರುದ್ರಮುನಿ ಸ್ವಾಮಿಜಿಗಳು ಸಾನ್ನಿಧ್ಯ ವಹಿಸಿದ್ದರು. ಭೂದಾನಿ ಸಿದ್ದಯ್ಯ ಕಲ್ಯಾಣಮಠ, ಕಸಾಪ ನೂತನ ತಾಲೂಕು ಅಧ್ಯಕ್ಷ ಕಾಮರಾಜ ಬಿರಾದಾರ, ಗಣ್ಯರಾದ ಶಿವಶಂಕರಗೌಡ ಹಿರೇಗೌಡರ, ಪುರಸಭೆ ಸದಸ್ಯ ಚನ್ನಪ್ಪ ಕಂಠಿ, ಎಸ್.ಎಲ್.ಗುರವ, ಮಹಾಂತೇಶ ಮೋಟಗಿ, ಮಹಾಂತೇಶ ಬಸನಗೌಡರ, ಮಹಾಂತೇಶ ಮಠಪತಿ, ಬಸನಗೌಡ ಬಿರಾದಾರ, ಉಮೇಶ ನಾಗಠಾಣ, ಮಹಾಂತೇಶ ಮಡಿವಾಳರ, ಯಮನೂರಿ ನಾಯಕಮಕ್ಕಳ, ರವಿ ಮಡಿವಾಳ, ಎಂ.ಎಸ್.ಬಿರಾದಾರ, ಹಣಮಂತ ನಿಡಗುಂದಿ, ಉದಯ ರಾಯಚೂರ, ಮಹಾಂತೇಶ ದಡ್ಡಿ, ರೂಪಾ ದೇಸಾಯಿ, ಪ್ರಭಾವತಿ ಎಚ್.ತಿಡಗುಂದಿ, ರೂಪಾ.ಎಂ. ಮೋಟಗಿ, ಕಾವ್ಯಾ ಎಂ.ಮಠಪತಿ, ಶೋಭಾ ನಾಗಠಾಣ, ಸುಲೋಚನಾ ಬಿರಾದಾರ, ದೀಪಾ ಬಸನಗೌಡರ ಸೇರಿದಂತೆ ಹಲವರು ಇದ್ದರು.