ಭೀಮಾ ನದಿ ನೀರಿನ ನಮ್ಮ ಪಾಲಿನ 15 ಟಿಎಂಸಿ ಬಳಸಲು ಮಹಾರಾಷ್ಟ್ರ ಅವಕಾಶ ನೀಡದೆ ತಾನೇ ಹೆಚ್ಚಿನ ನೀರನ್ನು ಬಳಸುತ್ತಿದೆ. ಹೀಗಾಗಿ ಭೀಮಾ ನದಿ ತೀರದಲ್ಲಿ ನೀರಿನ ಹಾಹಾಕಾರ ಉಂಟಾಗುತ್ತಿದೆ. ಮಹಾರಾಷ್ಟ್ರದವರು ಭೀಮಾ ಪ್ರವಾಹವನ್ನೇ ಸೀನಾ ನದಿಗೆ ಹೊರಳಿಸಿದ್ದು, ಇದು ಅವೈಜ್ಞಾನಿಕ ಹಾಗೂ ಮೋಸದ ಯೋಜನೆ. ಭೀಮಾ ಪಾಲಿನ ನಮ್ಮ ಹಕ್ಕು ಪ್ರತಿಪಾದಿಸಲು ರಾಜ್ಯ ಸರ್ಕಾರ ಕೇಂದ್ರ ಜಲ ಆಯೋಗದ ಮೊರೆ ಹೋಗಬೇಕು ಎಂದು ಕಲಬುರಗಿ ದಕ್ಷಿಣ ಕ್ಷೇತ್ರದ ಶಾಸಕ ಅಲ್ಲಂಪ್ರಭು ಪಾಟೀಲರು ಬೆಳಗಾವಿ ಸುವರ್ಣ ಸೌಧದಲ್ಲಿ ರಾಜ್ಯ ಸರ್ಕಾರವನ್ನು ಆಗ್ರಹಿಸಿದ್ದಾರೆ.
ಕಲಬುರಗಿ: ಭೀಮಾ ನದಿ ನೀರಿನ ನಮ್ಮ ಪಾಲಿನ 15 ಟಿಎಂಸಿ ಬಳಸಲು ಮಹಾರಾಷ್ಟ್ರ ಅವಕಾಶ ನೀಡದೆ ತಾನೇ ಹೆಚ್ಚಿನ ನೀರನ್ನು ಬಳಸುತ್ತಿದೆ. ಹೀಗಾಗಿ ಭೀಮಾ ನದಿ ತೀರದಲ್ಲಿ ನೀರಿನ ಹಾಹಾಕಾರ ಉಂಟಾಗುತ್ತಿದೆ. ಮಹಾರಾಷ್ಟ್ರದವರು ಭೀಮಾ ಪ್ರವಾಹವನ್ನೇ ಸೀನಾ ನದಿಗೆ ಹೊರಳಿಸಿದ್ದು, ಇದು ಅವೈಜ್ಞಾನಿಕ ಹಾಗೂ ಮೋಸದ ಯೋಜನೆ. ಭೀಮಾ ಪಾಲಿನ ನಮ್ಮ ಹಕ್ಕು ಪ್ರತಿಪಾದಿಸಲುರಾಜ್ಯ ಸರ್ಕಾರ ಕೇಂದ್ರ ಜಲ ಆಯೋಗದ ಮೊರೆ ಹೋಗಬೇಕು ಎಂದು ಕಲಬುರಗಿ ದಕ್ಷಿಣ ಕ್ಷೇತ್ರದ ಶಾಸಕ ಅಲ್ಲಂಪ್ರಭು ಪಾಟೀಲರು ಬೆಳಗಾವಿ ಸುವರ್ಣ ಸೌಧದಲ್ಲಿ ರಾಜ್ಯ ಸರ್ಕಾರವನ್ನು ಆಗ್ರಹಿಸಿದ್ದಾರೆ.ಸದನದಲ್ಲಿ ಗಮನ ಸೆಳೆಯುವ ಗೊತ್ತುವಳಿಯಲ್ಲಿ ಭೀಮಾ ನೀರಲ್ಲಾಗಿರುವ ಮಹಾ ಮೋಸದ ವಿಚಾರಗಳನ್ನು ಎಳೆ ಎಳೆಯಗಿ ಬಿಡಿಸಿಟ್ಟ ಶಾಸಕರು, ಬಚಾವತ್ ತೀಪ್ರಿನಿಂತೆ ನಮಗೆ 15 ಟಿಎಂಸಿ ನೀರು ಬಳಸಲು ಅವಕಾಸವಿತ್ತು. ಆದರೆ ಮಹಾರಾಷ್ಟ್ರ ತನ್ನಲ್ಲೇ ನದಿ ಹುಟ್ಟಿರೋದರಿಂದ ನೀರನ್ನು ಹೆಚ್ಚಿಗೆ ಕಬಳಿಸುತ್ತಿದೆ. ಸಿಡಬ್ಲೂಸಿ ಅನುಮತಿ ಇಲ್ಲದೆ ಯೋಜನೆ ರೂಪಿಸುತ್ತಿದೆ. ಭೀಮಾ ನದಿಗೆ ಸೀನಾ ನದಿ ಜೋಡಿಸಿ ಹೆಚ್ಚಿನ ನೀರನ್ನು ಬಳಸುತ್ತಿದೆ. ಇವೆಲ್ಲವೂ ಪರವಾನಿಗೆ ಇಲ್ಲದ ಯೋಜನೆಗಳು. ಇವನ್ನೆಲ್ಲ ರಾಜ್ಯ ಪ್ರಶ್ನಿಸಲಿ ಎಂದರು.ಭೀಮಾ ನದಿಯಲ್ಲಿ ಮಹಾ ಮೋಸ ಅಕ್ಷಮ್ಯ. ಇದರಿಂದಾಗಿ ಕಲಬುರಗಿ, ವಿಜಯಪೂರ, ಯಾದಗಿರಿ ಜನರಿಗೆ ಭೀಮಾ ಇಲ್ಲದಂತಾಗಿದೆ. ಮಳೆಗಾಲದಲ್ಲಿ ಹೆಚ್ಚಿನ ನೀರು ಹರಿಬಿಟ್ಟು ನಮಗೆಲ್ಲ ನೆರೆ ಹಾವಳಿ ಉಂಟು ಮಾಡಿ ಜನ- ಜಾನುವಾರು ಬೆಳೆ ಹಾನಿಗೆ ಕಾರಣವಾಗುವ ಮಹಾರಾಷ್ಟ್ರ ಬೇಸಿಗೆಯಲ್ಲಿ ತನ್ನಲ್ಲಿ ನೀರಿದ್ದರೂ ಭೀಮಾ ನದಿ ಅಣೆಕಟ್ಟೆಯಿಂದ ನೀರು ಹರಿಸೋದಿಲ್ಲ. ಮಹಾರಾಷ್ಟ್ರದ ಈ ಮೊಂಡುತನ ನಾವು ಆಯೋಗದ ಮುಂದೆ ಹಾಗೂ ಕೋರ್ಟ್‌ನಲ್ಲಿ ಪ್ರಶ್ನಿಸಬೇಕಿದೆ ಎಂದು ಹೇಳಿದರು.
ಕಲಬುರಗಿ ನಗರಕ್ಕೆ ಭೀಮಾ ನೀರೆ ಗತಿ. ಹೊಸ ನೀರು ಇಲ್ಲಿ ಬಾರದೆ ಇರೋದರಿಂದ ಬೇಸಿಗೆಯಲ್ಲಿ ನಾವು ಹೊಲಸು ನೀರೆ ಕುಡಿಯೋದಾಗಿದೆ. ಇದಕ್ಕೆಲ್ಲ ಮದ್ದು ಎಂದರೆ ಮಹಾರಾಷ್ಟ್ರ 15 ಟಿಎಂಸಿ ನೀರು ಹರಿಸಬೇಕು. ರೈತರು ಕೋರ್ಟ್ ಕಟ್ಟೆ ಹತ್ತಿದಾಗ ನಿರಂತರ ಭೀಮಾ ನೀರು ಹರಿಸಲು ಆದೇಶ ಬಂದಿತ್ತು. ಇದನ್ನು ಮಹಾರಾಷ್ಟ್ರ ಪಾಲಿಸಿಲ್ಲ. ಹೀಗಾಗಿ ರಾಜ್ಯ ಇನ್ನಾದರೂ ರೈತರ ಪರವಾಗಿ ನಿಲುವು ತಾಳಲಿ. ಭೀಮಾ ತೀರದಲ್ಲಿ ಜನ, ರೈತರ ಹಿತಾಸಕ್ತಿ ಕಾಪಾಡಲು ಭೀಮಾ ನೀರಿನಲ್ಲಿನ ಅನ್ಯಾಯಗಳನ್ನು ಮಹಾರಾಷ್ಟ್ರಕ್ಕೆ, ಸಿಡಬ್ಲೂಸಿಗೆ ಪ್ರಶ್ನಿಸಲಿ ಎಂದೂ ಒತ್ತಾಯಿಸಿದರು.