ಬೀಳುವುದನ್ನು ಕಲಿತಾಗ ಮಾತ್ರ ಜೀವನದಲ್ಲಿ ಎದ್ದು ನಿಲ್ಲುವ ಛಲ ಬರುತ್ತದೆ ಎಂದು ವಿದ್ಯಾರ್ಥಿಗಳಿಗೆ ಸ್ಫೂರ್ತಿ ತುಂಬಿದರು. ಎಂಜಿನಿಯರ್ ಹುದ್ದೆಯನ್ನು ತ್ಯಜಿಸಿ ಕೃಷಿಯನ್ನು ಜೀವನವಾಗಿಸಿಕೊಂಡ ತಮ್ಮ ಅನುಭವ ಹಂಚಿಕೊಂಡ ಅವರು, ರೈತರ ಬದುಕು ಬಿಸಿಲಲ್ಲಿ ಸುಟ್ಟು, ಮಳೆಯಲ್ಲಿ ನೆನೆದು, ಚಳಿಯಲ್ಲಿ ನಡುಗಿ ದೇಶದ ಜನತೆಗೆ ಮೂಲಾಧಾರವಾಗಿರುವುದು ಹೆಮ್ಮೆಯ ಸಂಗತಿ ಎಂದರು. ಕಿಡಿಯನ್ನು ಹೊತ್ತಿಸಿದರೆ ಅದು ಜ್ಯೋತಿಯಾಗಿ ಮನೆ ಬೆಳಗುವಂತೆ, ಹೆಣ್ಣುಮಕ್ಕಳು ಸಮಾಜವನ್ನು ಬೆಳಗುವ ಶಕ್ತಿಯಾಗಬೇಕು ಎಂದು ಹೇಳಿದರು. ರೈತರೂ ಸಹ ಇತರ ಕ್ಷೇತ್ರಗಳಂತೆ ಕೋಟಿಗಟ್ಟಲೆ ಆದಾಯ ಗಳಿಸಿ ಗೌರವಯುತ ಬದುಕು ಕಟ್ಟಿಕೊಳ್ಳಬೇಕೆಂಬ ಸಂದೇಶ ನೀಡಿದರು.

ಕನ್ನಡಪ್ರಭ ವಾರ್ತೆ ಹಾಸನ

ಜೀವನದಲ್ಲಿ ಏಳು ಬೀಳುಗಳು ಬರುವುದು ಸಹಜ. ಆದರೇ ಬೀಳುವುದನ್ನು ಕಲಿತಾಗಲೇ ಎದ್ದು ನಿಲ್ಲುವ ಛಲ ಬರುತ್ತದೆ ಎಂದು ಪ್ರಗತಿಪರ ರೈತ ಮಹಿಳೆ ಕವಿತಾ ಮಿಶ್ರ ಸ್ಪೂರ್ತಿದಾಯಕವಾಗಿ ಮಾತನಾಡಿದರು.

ನಗರದ ಸ್ಕಾಲರ್ಸ್ ಇಂಟರ್‌ನ್ಯಾಷನಲ್ ಶಾಲೆಯ ಆವರಣದಲ್ಲಿ ಎರಡನೇ ದಿನದ ೧೪ನೇ ವರ್ಷದ ವಾರ್ಷಿಕೋತ್ಸವ ಸ್ಕಾಲರ್ಸ್ ಸಂಭ್ರಮ-೧೪ ವಿಜೃಂಭಣೆಯಿಂದ ನಡೆಯಿತು. ಈ ಸಂದರ್ಭದಲ್ಲಿ ಪ್ರಗತಿಪರ ರೈತ ಮಹಿಳೆ ಕವಿತಾ ಮಿಶ್ರ ಮಾತನಾಡಿ, ಬೀಳುವುದನ್ನು ಕಲಿತಾಗ ಮಾತ್ರ ಜೀವನದಲ್ಲಿ ಎದ್ದು ನಿಲ್ಲುವ ಛಲ ಬರುತ್ತದೆ ಎಂದು ವಿದ್ಯಾರ್ಥಿಗಳಿಗೆ ಸ್ಫೂರ್ತಿ ತುಂಬಿದರು. ಎಂಜಿನಿಯರ್ ಹುದ್ದೆಯನ್ನು ತ್ಯಜಿಸಿ ಕೃಷಿಯನ್ನು ಜೀವನವಾಗಿಸಿಕೊಂಡ ತಮ್ಮ ಅನುಭವ ಹಂಚಿಕೊಂಡ ಅವರು, ರೈತರ ಬದುಕು ಬಿಸಿಲಲ್ಲಿ ಸುಟ್ಟು, ಮಳೆಯಲ್ಲಿ ನೆನೆದು, ಚಳಿಯಲ್ಲಿ ನಡುಗಿ ದೇಶದ ಜನತೆಗೆ ಮೂಲಾಧಾರವಾಗಿರುವುದು ಹೆಮ್ಮೆಯ ಸಂಗತಿ ಎಂದರು. ಕಿಡಿಯನ್ನು ಹೊತ್ತಿಸಿದರೆ ಅದು ಜ್ಯೋತಿಯಾಗಿ ಮನೆ ಬೆಳಗುವಂತೆ, ಹೆಣ್ಣುಮಕ್ಕಳು ಸಮಾಜವನ್ನು ಬೆಳಗುವ ಶಕ್ತಿಯಾಗಬೇಕು ಎಂದು ಹೇಳಿದರು. ರೈತರೂ ಸಹ ಇತರ ಕ್ಷೇತ್ರಗಳಂತೆ ಕೋಟಿಗಟ್ಟಲೆ ಆದಾಯ ಗಳಿಸಿ ಗೌರವಯುತ ಬದುಕು ಕಟ್ಟಿಕೊಳ್ಳಬೇಕೆಂಬ ಸಂದೇಶ ನೀಡಿದರು.

ಶಾಸಕ ಎಚ್.ಪಿ. ಸ್ವರೂಪ್ ಪ್ರಕಾಶ್ ಮಾತನಾಡಿ, ಶಿಕ್ಷಣದ ಜೊತೆಗೆ ಕ್ರೀಡೆ ಹಾಗೂ ಸಾಂಸ್ಕೃತಿಕ ಚಟುವಟಿಕೆಗಳಿಗೆ ಸಮಾನ ಮಹತ್ವ ನೀಡುತ್ತಿರುವ ಸ್ಕಾಲರ್ಸ್ ಶಾಲೆ ಒಂದು ಮಾದರಿ ವಿದ್ಯಾಸಂಸ್ಥೆಯಾಗಿದೆ ಎಂದು ಶ್ಲಾಘಿಸಿದರು. ಜೀವನದ ಉತ್ತಮ ಮೌಲ್ಯಗಳನ್ನು ವಿದ್ಯಾರ್ಥಿಗಳಲ್ಲಿ ಬೆಳೆಸುತ್ತಿರುವುದು ಶ್ಲಾಘನೀಯ ಎಂದು ಹೇಳಿದರು.ಕಾರ್ಯಕ್ರಮದ ಮುಖ್ಯ ಅತಿಥಿಗಳಾಗಿ ಶಾಸಕರಾದ ಎಚ್.ಪಿ. ಸ್ವರೂಪ್ ಪ್ರಕಾಶ್ ಮಾತನಾಡಿ, ಮಕ್ಕಳು ಶಿಕ್ಷಣದ ಜೊತೆ ಮಾನವೀಯ ಗುಣಗಳನ್ನು ಬೆಳೆಸಿಕೊಳ್ಳಬೇಕು. ಹಿರಿಯರನ್ನು ಗೌರವಿಸಬೇಕೆಂದರು. ಇತಿಹಾಸ ತಜ್ಞ ಧರ್ಮೇಂದ್ರ ಕುಮಾರ್ ಮಾತನಾಡಿ, ಪೋಷಕರು ಮಕ್ಕಳ ಜ್ಞಾನವನ್ನು ಗೌರವಿಸಬೇಕು. ವಿದ್ಯಾರ್ಥಿಗಳ ಗುರಿ ಉತ್ತುಂಗದಲ್ಲಿರಬೇಕು. ಗುರಿ ಸಾಧನೆಗೆ ಛಲ, ಪರಿಶ್ರಮ ಮತ್ತು ತ್ಯಾಗ ಅಗತ್ಯ. ತ್ಯಾಗಕ್ಕೆ ಸಿದ್ಧರಾದಾಗ ಮಾತ್ರ ಯಶಸ್ಸು ಸಿಗುತ್ತದೆ ಎಂದು ಸಲಹೆ ನೀಡಿದರು.

ಕಾರ್ಯಕ್ರಮದ ಅಂಗವಾಗಿ ವಿದ್ಯಾರ್ಥಿಗಳಿಂದ ಸಾಂಸ್ಕೃತಿಕ ಕಾರ್ಯಕ್ರಮಗಳು ವೈಭವದಿಂದ ನಡೆದವು. ಯಕ್ಷಗಾನ, ದೇಶಪ್ರೇಮ ಸಾರುವ ಸುಭಾಷ್ ಚಂದ್ರ ಬೋಸ್ ನೃತ್ಯರೂಪಕ, ಕುವೆಂಪು ಅವರ ನಾಡಗೀತೆಗೆ ನಮನ, ಡಾ.ಬಿ.ಆರ್.ಅಂಬೇಡ್ಕರ್ ಅವರ ಜೀವನ ಚರಿತ್ರೆ ಆಧಾರಿತ ನೃತ್ಯರೂಪಕ ಸೇರಿದಂತೆ ವಿವಿಧ ನೃತ್ಯ ಪ್ರದರ್ಶನಗಳು ಪ್ರೇಕ್ಷಕರನ್ನು ಮಂತ್ರಮುಗ್ಧಗೊಳಿಸಿದವು.

ಕಾರ್ಯಕ್ರಮದಲ್ಲಿ ಕಾರ್ಯಕ್ರಮದಲ್ಲಿ ಸ್ಕಾಲರ್ಸ್ ಶಾಲೆಯ ಆಡಳಿತಾಧಿಕಾರಿಗಳಾದ ಡಾ. ಎಚ್.ಎನ್. ಚಂದ್ರಶೇಖರ್‌, ಕಾರ್ಯದರ್ಶಿ ಮಮತಾ ಚಂದ್ರಶೇಖರ್, ಲಕ್ಷ್ಮೀ ನಾಗರಾಜು, ಇತರರು ಉಪಸ್ಥಿತರಿದ್ದರು.