ವಾಲ್ಮೀಕಿ ಕಾವ್ಯದ ಮೌಲ್ಯ ಭವಿಷ್ಯಕ್ಕೆ ದಾರಿದೀಪ:ಶಾಸಕ ಕೆ.ಎಸ್.ಆನಂದ್

| Published : Oct 08 2025, 01:00 AM IST

ವಾಲ್ಮೀಕಿ ಕಾವ್ಯದ ಮೌಲ್ಯ ಭವಿಷ್ಯಕ್ಕೆ ದಾರಿದೀಪ:ಶಾಸಕ ಕೆ.ಎಸ್.ಆನಂದ್
Share this Article
  • FB
  • TW
  • Linkdin
  • Email

ಸಾರಾಂಶ

ಕಡೂರುಪ್ರತಿಯೊಬ್ಬ ಮನುಷ್ಯನಿಗೂ ನೀತಿಪಾಠದಿಂದ ತಮ್ಮ ತಪ್ಪುಗಳನ್ನು ತಿದ್ದಿಕೊಂಡು ಬದಲಾವಣೆಯಿಂದ ಸಮಾಜದಲ್ಲಿ ಬದುಕಲು ಪ್ರೇರೆಪಿಸುವ ರಾಮಾಯಾಣದ ಮಹಾನ್ ಕಾವ್ಯವನ್ನು ಮಹರ್ಷಿ ವಾಲ್ಮೀಕಿ ಜಗತ್ತಿಗೆ ಪರಿಚಯಿಸಿಕೊಟ್ಟಿದ್ದಾರೆ ಎಂದು ಶಾಸಕ ಕೆ.ಎಸ್.ಆನಂದ್ ತಿಳಿಸಿದರು.

ಕಡೂರು ತಾಲೂಕು ಪಂಚಾಯಿತಿ ಸಭಾಂಗಣದಲ್ಲಿ ತಾಲೂಕು ವಾಲ್ಮೀಕಿ ನಾಯಕ ಸಂಘದಿಂದ ನಡೆದ ವಾಲ್ಮೀಕಿ ಜಯಂತಿ

ಕನ್ನಡಪ್ರಭ ವಾರ್ತೆ.ಕಡೂರು

ಪ್ರತಿಯೊಬ್ಬ ಮನುಷ್ಯನಿಗೂ ನೀತಿಪಾಠದಿಂದ ತಮ್ಮ ತಪ್ಪುಗಳನ್ನು ತಿದ್ದಿಕೊಂಡು ಬದಲಾವಣೆಯಿಂದ ಸಮಾಜದಲ್ಲಿ ಬದುಕಲು ಪ್ರೇರೆಪಿಸುವ ರಾಮಾಯಾಣದ ಮಹಾನ್ ಕಾವ್ಯವನ್ನು ಮಹರ್ಷಿ ವಾಲ್ಮೀಕಿ ಜಗತ್ತಿಗೆ ಪರಿಚಯಿಸಿಕೊಟ್ಟಿದ್ದಾರೆ ಎಂದು ಶಾಸಕ ಕೆ.ಎಸ್.ಆನಂದ್ ತಿಳಿಸಿದರು.

ಪಟ್ಟಣದ ತಾಲೂಕು ಪಂಚಾಯಿತಿಯಲ್ಲಿ ಮಂಗಳವಾರ ತಾಲೂಕು ಆಡಳಿತ, ತಾಲೂಕು ವಾಲ್ಮೀಕಿ ನಾಯಕ ಸಂಘದಿಂದ ನಡೆದ ಮಹರ್ಷಿ ವಾಲ್ಮೀಕಿ ಜಯಂತಿಯಲ್ಲಿ ಭಾವಚಿತ್ರಕ್ಕೆ ಪುಷ್ಪನಮನ ಸಲ್ಲಿಸಿ ಮಾತನಾಡಿ, ರಾಮಾಯಣದಲ್ಲಿ ಉಲ್ಲೇಖಿ ಸಿರುವ ಅಂಶಗಳು ಎಂದೆಂದಿಗೂ ಪ್ರಸ್ತುತ. ಕಾವ್ಯದ ಮೌಲ್ಯಗಳು ಭವಿಷ್ಯಕ್ಕೆ ದಾರಿದೀಪ. ಈ ನಿಟ್ಟಿನಲ್ಲಿ ವಿದ್ಯೆ ಎಂಬುದು ಯಾರೊಬ್ಬರ ಸ್ವತ್ತು ಆಲ್ಲ. ಮಹಾಭಾರತ ರಚಿಸಿದ ವೇದವ್ಯಾಸ ಹಾಗೂ ದೇಶದ ಸಂವಿಧಾನ ರಚಿಸಿದ ಅಂಬೇಡ್ಕರ್, ಸೇರಿದಂತೆ ರಾಮಾಯಣ ಕಾವ್ಯ ರಚಿಸಿದ ಮಹರ್ಷಿ ವಾಲ್ಮೀಕಿಯಂತಹ ಶೂದ್ರ ಸಮಾಜದ ಶಕ್ತಿಗಳೇ ಮಹಾನ್ ಗ್ರಂಥಗಳನ್ನು ದೇಶಕ್ಕೆ ಕೊಡುಗೆಯಾಗಿ ನೀಡಿರುವುದು ಹೆಮ್ಮೆಯ ಸಂಗತಿ. ಈ ಹಿನ್ನಲೆಯಲ್ಲಿ ವಿದ್ಯೆ ಎಂಬುದು ಸಾಧಕನ ಸ್ವತ್ತು. ಶಿಕ್ಷಣದಿಂದ ಯಾರು ವಂಚಿತರಾಗಬಾರದು. ಶೋಷಿತ ಸಮಾಜದ ಬೆಳವಣಿಗೆಗೆ ಶಿಕ್ಷಣದ ಪಾತ್ರ ಅತಿಮುಖ್ಯ ಎಂದರು. ಕ್ಷೇತ್ರದಲ್ಲಿ ವಾಲ್ಮೀಕಿ ಸಮುದಾಯ ವಾಸಿಸುತ್ತಿರುವ ಗ್ರಾಮಗಳ ಅಭಿವೃದ್ಧಿಗೆ ಒತ್ತುಕೊಡಲಾಗಿದೆ. ಈಗಾಗಲೇ ಬೇಡಿಕೆ ಅನುಗುಣವಾಗಿ ಸಮುದಾಯಭವನಗಳ ನಿರ್ಮಾಣಕ್ಕೆ ಅನುದಾನ, ದೇವಾಲಯ ಅಭಿವೃದ್ಧಿ ಕಾರ್ಯಗಳಿಗೆ ವಿಶೇಷ ಅನುದಾನ ಗಳನ್ನು ಒದಗಿಸಿಕೊಡಲಾಗಿದೆ. ಸಮಾಜದ ಬೇಡಿಕೆಯಂತೆ ತಾಲೂಕಿನಲ್ಲಿ ಸಮಾಜಕ್ಕಾಗಿ ನಿರ್ದಿಷ್ಟವಾದ ಎರಡು ಎಕರೆ ಜಾಗವನ್ನು ತಾಲೂಕು ಸಂಘ ಗುರುತಿಸಿಕೊಟ್ಟರೆ ಅಗತ್ಯ ಕ್ರಮಗಳನ್ನು ವಹಿಸಲಾಗುತ್ತದೆ. ವಾಲ್ಮೀಕಿ ಸಮಾಜದ ಬೆಳವಣಿಗೆಗೆ ನನ್ನ ಪ್ರೋತ್ಸಾಹ ನಿರಂತರವಾಗಿರಲಿದೆ ಎಂದರು.

ಕಾರ್ಯಕ್ರಮ ಉದ್ಘಾಟಿಸಿದ ಪುರಸಭೆ ಅಧ್ಯಕ್ಷ ಭಂಡಾರಿ ಶ್ರೀನಿವಾಸ್ ಮಾತನಾಡಿ, ವಾಲ್ಮೀಕಿ ರಾಮಾಯಣ ಜಗತ್ತಿನ ಮೊದಲ ಮಹಾಕಾವ್ಯವಾಗಿದ್ದು, ಹಿಂದೂ ಸಂಸ್ಕೃತಿಯನ್ನು ಎತ್ತಿ ಹಿಡಿಯುವ ಕೃತಿಯಾಗಿದೆ. ರಾಮಾಯಣದ ಮಹಾಕಾವ್ಯದಲ್ಲಿ ಪಿತೃವಾತ್ಸಲ್ಯ, ಸೋದರ ವಾತ್ಸಲ್ಯ, ಸತ್ಯ ಶೋಧನೆ, ಧರ್ಮ ಪರಿಪಾಲನೆ, ಪಿತೃವಾಕ್ಯ ಪರಿಪಾಲನೆಯಂತಹ ಮಹತ್ವದ ವಿಚಾರಗಳನ್ನು ಆದಿಕವಿ ವಾಲ್ಮೀಕಿ ಕೃತಿ ಮೂಲಕ ಕಟ್ಟಿಕೊಟ್ಟಿದ್ದಾರೆ. ಅವುಗಳನ್ನು ನಾವೆಲ್ಲರೂ ಅಳವಡಿಸಿಕೊಂಡು ಪರಿಪಾಲನೆ ಮಾಡಬೇಕಿದೆ. ಬೇಟೆಗಾರ, ಅಜ್ಞಾನಿ, ಅವಿದ್ಯಾವಂತನಾಗಿದ್ದ ವಾಲ್ಮೀಕಿ ನಾರದ ಮುನಿಗಳ ಮಾರ್ಗದರ್ಶನದಲ್ಲಿ ಮಹಾತಪಸ್ವಿಯಾಗಿ ಜಗತ್ತಿಗೆ ಉತ್ತಮ ಸಂದೇಶ ನೀಡಿದ್ದಾರೆ ಎಂದರು. ಪ್ರಾಚಾರ್ಯ ಪ್ರೋ.ದೊರೇಶ್ ಉಪನ್ಯಾಸ ನೀಡಿ ಮಾತನಾಡಿ, ದೇಶದ ಎಲ್ಲಾ ಶೂದ್ರ ಸಮುದಾಯದ ಅಸ್ಮಿತೆ ವಾಲ್ಮೀಕಿ ರಾಮಾಯಣವಾಗಿದೆ. ಮನುಷ್ಯ ಮನುಷ್ಯನಾಗಿ ಬದುಕಬೇಕೆಂಬ ಸಂದೇಶವನ್ನು ಜಗತ್ತಿಗೆ ಸಾರಲಾಗಿದೆ. ಇಡೀ ಜಗತ್ತಿಗೆ ಕಾಮಾಂಧರು, ಅಹಂಕಾರಿಗಳು ಎಂದಿಗೂ ಎತ್ತರಕ್ಕೆ ಬೆಳಯದೆ ತನ್ನೊಳಗಿನ ಕೆಡಕನ್ನು ಅಂತ್ಯದಲ್ಲಿ ನಾಶಗೊಳ್ಳುವ ಸ್ಥಿತಿ ಎದುರಾಗುತ್ತದೆ. ರಾಮಾಯಣದಲ್ಲಿ ಮಾನವೀಯ ಮೌಲ್ಯಗಳು ಮನುಕುಲದ ಆಸ್ತಿ ಎಂದು ಬಣ್ಣಿಸಿದರು. ಈ ಸಂದರ್ಭದಲ್ಲಿ ವಾಲ್ಮೀಕಿ ಸಮುದಾಯದ ಪ್ರತಿಭಾವಂತ ಮಕ್ಕಳನ್ನು ಗುರುತಿಸಿ ಗೌರವಿಸಲಾಯಿತು. ಸಮಾಜಕ್ಕಾಗಿ 2 ಎಕರೆ ಜಾಗ ಮಂಜೂರು ಮಾಡುವಂತೆ, ಪಟ್ಟಣದ ಮುಖ್ಯರಸ್ತೆಗೆ ವಾಲ್ಮೀಕಿ ರಸ್ತೆ ನಾಮಕರಣ ಮಾಡುವುದು ಹಾಗೂ ವಾಲ್ಮೀಕಿ ಪುತ್ಥಳಿಯನ್ನು ಪಟ್ಟಣದಲ್ಲಿ ನಿರ್ಮಾಣ ಮಾಡಲು ಜಾಗ ಗುರುತಿಸಿಕೊಡುವಂತೆ ತಾಲೂಕು ವಾಲ್ಮೀಕಿ ನಾಯಕ ಸಂಘ ಶಾಸಕರಿಗೆ ಮನವಿ ಸಲ್ಲಿಸಿದರು. ಗ್ಯಾರಂಟಿ ಸಮಿತಿ ತಾಲೂಕು ಅಧ್ಯಕ್ಷ ಆಸಂಧಿ ಕಲ್ಲೇಶ್, ಬೀರೂರು ಪುರಸಭೆ ಅಧ್ಯಕ್ಷ ಭಾಗ್ಯಲಕ್ಷ್ಮಿ ಮೋಹನ್, ಗ್ಯಾರಂಟಿ ಸಮಿತಿ ಜಿಲ್ಲಾ ಉಪಾಧ್ಯಕ್ಷ ಬಾಸೂರು ಚಂದ್ರಮೌಳಿ, ತಾಲೂಕು ವಾಲ್ಮೀಕಿ ನಾಯಕ ಸಂಘದ ಅಧ್ಯಕ್ಷ ರಮೇಶ್, ತಹಸೀಲ್ದಾರ್ ಸಿ.ಎಸ್.ಪೂರ್ಣಿಮಾ, ತಾಪಂ ಇಒ ಸಿ.ಆರ್. ಪ್ರವೀಣ್, ತಾಲೂಕು ಸಮಾಜ ಕಲ್ಯಾಣಾಧಿಕಾರಿ ನಟರಾಜ್, ಬಿಸಿಎಂ ತಾಲೂಕು ಅಧಿಕಾರಿ ಎಸ್.ಎಸ್.ದೇವರಾಜ್, ಕೆಡಿಪಿ ಸದಸ್ಯ ಗುಮ್ಮನಹಳ್ಳಿ ಅಶೋಕ್, ತಿಮ್ಮಯ್ಯ, ಬಿ. ಚೋಪ್ದಾರ್, ಸಂತೋಷ್, ಕೆ.ಕೆ. ಮಂಜು, ಕೆ.ಡಿ.ನಾಗರಾಜ್, ನಾಗಮ್ಮ, ವಸಂತಮ್ಮ, ಸುರೇಶ್, ರಾಜುಒಡೆಯರ್, ಪ್ರಸನ್ನ, ನಿತ್ಯಾನಂದ ಮತ್ತಿತರಿದ್ದರು. 7ಕೆಡಿಆರ್1ಕಡೂರು ಪಟ್ಟಣದ ತಾಪಂ ಸಭಾಂಗಣದಲ್ಲಿ ನಡೆದ ಮಹರ್ಷಿ ವಾಲ್ಮೀಕಿ ಜಯಂತಿ ಕಾರ್ಯಕ್ರಮದಲ್ಲಿ ವಾಲ್ಮೀಕಿ ಸಮಾಜದ ಪ್ರತಿಭಾವಂತ ಮಕ್ಕಳನ್ನು ಪುರಸ್ಕರಿಸಲಾಯಿತು. ಶಾಸಕ ಕೆ.ಎಸ್.ಆನಂದ್, ಭಂಡಾರಿ ಶ್ರೀನಿವಾಸ್, ಕಲ್ಲೇಶ್, ಪೂರ್ಣಿಮಾ, ಭಾಗ್ಯಲಕ್ಷ್ಮಿಮೋಹನ್, ಪ್ರವೀಣ್, ಚಂದ್ರಮೌಳಿ, ರಮೇಶ್ ಮತ್ತಿತರಿದ್ದರು.