ನಟ ದರ್ಶನ್ ಕಾರು ಸುವರ್ಣಾವತಿ ಟೋಲ್ ಮೂಲಕ ಹಾದುಹೋದ ವಿಡಿಯೋ ವೈರಲ್‌

| Published : Aug 15 2025, 01:00 AM IST

ನಟ ದರ್ಶನ್ ಕಾರು ಸುವರ್ಣಾವತಿ ಟೋಲ್ ಮೂಲಕ ಹಾದುಹೋದ ವಿಡಿಯೋ ವೈರಲ್‌
Share this Article
  • FB
  • TW
  • Linkdin
  • Email

ಸಾರಾಂಶ

ನಟ ದರ್ಶನ್ ಕಾರು ಚಾಮರಾಜನಗರ ತಾಲೂಕಿನ ಸುವರ್ಣಾವತಿ ಟೋಲ್ ಮೂಲಕ ಹಾದುಹೋದ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್‌ ಆಗಿದೆ

ಚಾಮರಾಜನಗರ: ನಟ ದರ್ಶನ್ ಕಾರು ಚಾಮರಾಜನಗರ ತಾಲೂಕಿನ ಸುವರ್ಣಾವತಿ ಟೋಲ್ ಮೂಲಕ ಹಾದುಹೋದ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್‌ ಆಗಿದೆ. ಗುರುವಾರ ಸುಪ್ರೀಂ ಕೋರ್ಟ್ ನಲ್ಲಿ ನಟ ದರ್ಶನ್ ಜಾಮೀನು ರದ್ದಾದ ಹಿನ್ನೆಲೆ ಪೊಲೀಸರು ದರ್ಶನ್ ಸಂಪರ್ಕ ಸಾಧಿಸಲು ಮುಂದಾಗಿದ್ದು, ಇದೇ ಹೊತ್ತಲ್ಲಿ ದರ್ಶನ್ ಅವರ ಕಾರು ಟೋಲ್ ಮೂಲಕ ಹಾದು ಹೋಗಿದ್ದು ತಮಿಳುನಾಡಿಗೆ ತೆರಳಿರುವ ಸಾಧ್ಯತೆ ದಟ್ಟವಾಗಿದೆ. ತಾಲೂಕಿನ ಸುವರ್ಣಾವತಿ ಟೋಲ್ ಮೂಲಕ ದರ್ಶನ್ ಇಂದು ಬೆಳಗ್ಗೆ ಕಾರು ತೆರಳಿದೆ ಎಂದು ಪೊಲೀಸ್ ಮೂಲಗಳು ತಿಳಿಸಿವೆ. ದರ್ಶನ್ ತಮಿಳುನಾಡಿನ ಅಂದಿಯೂರು ಎಂಬಲ್ಲಿ ಜಾತ್ರೆ ನಡೆಯುತ್ತಿದ್ದ ಹಿನ್ನೆಲೆ ಅಲ್ಲಿಗೆ ತೆರಳಿರಬಹುದು ಎನ್ನಲಾಗುತ್ತಿದೆ. ಸದ್ಯ ಪೊಲೀಸರು ದರ್ಶನ್‌ನನ್ನು ಬಂಧಿಸಿ ಪರಪ್ಪನ ಅಗ್ರಹಾರ ಜೈಲಿಗೆ ಕಳಿಸಿದ್ದಾರೆ.