ಪ್ರತಿವರ್ಷ ವರ್ಷದ ಆರಂಭದಿನಗಳಲ್ಲಿ ನಡೆಯುವ ಈ ರಾಸುಗಳ ಜಾತ್ರೆಯಲ್ಲಿ ರಾಜ್ಯದ ಹಾಗೂ ಪಕ್ಕದ ರಾಜ್ಯಗಳ ವಿವಿಧ ತಳಿಗಳ ಹಸುಗಳು ಮಾರಾಟ ವಾಗುತ್ತದೆ.

ಮಾಲೂರು: ತಾಲೂಕಿನ ತೊರ್ನಹಳ್ಳಿ ಗ್ರಾಮದ ಇತಿಹಾಸ ಪ್ರಸಿದ್ಧ ಶ್ರೀ ಸಪಲಾಂಬ ದೇವಿ ಹಾಗೂ ಶ್ರೀ ಪ್ರಸನ್ನ ಭೀಮೇಶ್ವರಸ್ವಾಮಿ ಜಾತ್ರಾ ಮಹೋತ್ಸವದಲ್ಲಿ ಕ್ಷೇತ್ರನಹಳ್ಳಿ ವೆಂಕಟೇಶ್‌ ಗೌಡರ ಜೋಡೆತ್ತು ದಾಖಲೆಯ 14 ಲಕ್ಷಕ್ಕೆ ಮಾರಾಟವಾಗಿದೆ.ಪ್ರತಿವರ್ಷ ವರ್ಷದ ಆರಂಭದಿನಗಳಲ್ಲಿ ನಡೆಯುವ ಈ ರಾಸುಗಳ ಜಾತ್ರೆಯಲ್ಲಿ ರಾಜ್ಯದ ಹಾಗೂ ಪಕ್ಕದ ರಾಜ್ಯಗಳ ವಿವಿಧ ತಳಿಗಳ ಹಸುಗಳು ಮಾರಾಟ ವಾಗುತ್ತದೆ. ರೈತರು ಸಹ ಈ ಜಾತ್ರೆಗಾಗಿ ಹಸುಗಳನ್ನು ದಷ್ಟಪುಷ್ಟವಾಗಿ ಬೆಳೆಸಿ ಈ ಜಾತ್ರೆಗೆ ಕರೆತರುತ್ತಾರೆ. ಒಂದು ವಾರ ನಡೆಯುವ ಈ ಜಾತ್ರೆಯಲ್ಲಿ ಈ ಬಾರಿ ಕ್ಷೇತ್ರನಹಳ್ಳಿ ವೆಂಕಟೇಶ್‌ ಗೌಡರು ತಮ್ಮ ಮೈಸೂರು ಭಾಗದ ದೂಡ್ಡಹಲ್ಲಿನ ದೊಡ್ಡ ಎತ್ತುಗಳನ್ನು ಹಿಡಿಗೂರು ಸುಶಾಂತ್‌ ಗೌಡ ಎಂಬುವರು 14 ಲಕ್ಷ ಕೊಟ್ಟು ಪಡೆದರು. ಇದು ಈ ಜಾತ್ರೆಯಲ್ಲಿ ಇಲ್ಲಿಯವರೆಗೆ ಅತಿ ಹೆಚ್ಚಿನ ಬೆಲೆಗೆ ಮಾರಾಟವಾಗಿರುವ ಎತ್ತು. ವಿಷಯ ತಿಳಿದ ಶಾಸಕ ಕೆ.ವೈ.ನಂಜೇಗೌಡರು ದಾಖಲೆ ಬೆಲೆಗೆ ಮಾರಾಟ ವಾದ ದೊಡ್ಡಹಲ್ಲಿನ ಎತ್ತುಗಳ ಜತೆ ಪೋಟೋ ತೆಗೆಸಿಕೊಂಡರು.