ಖಾನಾಪುರ: ತಾಲೂಕಿನ ಕಕ್ಕೇರಿ ಗ್ರಾಮದಲ್ಲಿ ಅದೃಶ್ಯಾನಂದ ವಿಶ್ವಸ್ಥ ಮಂಡಳಿ ವತಿಯಿಂದ ರಾಜ್ಯಮಟ್ಟದ ಖಾಲಿ ಗಾಡಾ ಓಡಿಸುವ ಜಂಗಿ ಶರ್ಯತ್ತು ಸೋಮವಾರ ಸಂಪನ್ನಗೊಂಡಿತು. ಗ್ರಾಮದ ಹೊರವಲಯದ ಚುಂಚವಾಡ ರಸ್ತೆ ಪಕ್ಕದ ಮೈದಾನದಲ್ಲಿ ಆರಂಭಗೊಂಡ ಶರ್ಯತ್ತನ್ನು ಲೈಲಾ ಶುಗರ್ಸ್ ಎಂಡಿ ಸದಾನಂದ ಪಾಟೀಲ ಉದ್ಘಾಟಿಸಿದರು.

ಈ ವೇಳೆ ಮಾತನಾಡಿ, ಶಾಸಕ ಹಲಗೇಕರ ಅವರು ಕಕ್ಕೇರಿ ಜಿಲ್ಲಾ ಪಂಚಾಯತಿ ವ್ಯಾಪ್ತಿಯಲ್ಲಿ ಅನೇಕ ಅಭಿವೃದ್ಧಿ ಕಾಮಗಾರಿಗಳಿಗೆ ಮಂಜೂರು ಮಾಡಿರುವ ವಿವಿಧ ಅನುದಾನಗಳ ಕುರಿತು ಮಾಹಿತಿ ನೀಡಿದರು. ಜೊತೆಗೆ ಈ ಭಾಗದ ರೈತರು ಲೈಲಾ ಶುಗರ್ ಕಾರ್ಖಾನೆಗೆ ಹೆಚ್ಚು ಕಬ್ಬು ಸಾಗಣೆ ಮಾಡಿ ಸಹಕರಿಸುವಂತೆ ಮನವಿ ಮಾಡಿದರು.ಸ್ಪರ್ಧೆಯಲ್ಲಿ ವಿಜೇತರಿಗೆ ಪ್ರಥಮ ಬಹುಮಾನವಾಗಿ ₹ 25,000 ಮತ್ತು ಪ್ರಶಸ್ತಿ ಫಲಕವನ್ನು ಸದಾನಂದ ಪಾಟೀಲ ವಿತರಿಸಿದರು. ದ್ವಿತೀಯ ಬಹುಮಾನ ₹ 21,000 ಮತ್ತು ಫಲಕವನ್ನು ಬಿಜೆಪಿ ಸಾಮಾಜಿಕ ಜಾಲತಾಣ ಪ್ರಮುಖ ಸಿದ್ದಪ್ಪ ಪಾಟೀಲ ವಿತರಿಸಿದರು. ಉಳಿದ ಬಹುಮಾನಗಳನ್ನು ಗ್ರಾಮದ ಹಿರಿಯರು ವಿಜೇತರಿಗೆ ವಿತರಿಸಿದರು. ಈ ಸಂದರ್ಭದಲ್ಲಿ ಕರವೇ ತಾಲೂಕು ಘಟಕದ ಅಧ್ಯಕ್ಷ ವಿಠ್ಠಲ ಹಿಂಡಲಕರ, ಕಕ್ಕೇರಿ ಗ್ರಾಪಂ ಮಾಜಿ ಅಧ್ಯಕ್ಷ ಭೀಮಪ್ಪ ಅಂಬೋಜಿ, ಬಿಜೆಪಿ ಹಿರಿಯ ಮುಖಂಡ ಡಾ.ಪ್ರಸನ್ನ ದೊಡ್ಡಬೈಲಕರ, ರವಿ ಪಾಟೀಲ, ಸದಾನಂದ ಮಾಸೇಕರ ಮತ್ತಿತರರು ಉಪಸ್ಥಿತರಿದ್ದರು.