ಸಾರಾಂಶ
ಕನ್ನಡಪ್ರಭ ವಾರ್ತೆ ವಿಜಯಪುರ
ಪ್ರಚನದಿಂದ ಜ್ಞಾನದ ದಾಸೋಹ ಉಣಬಡಿಸಿ ಕೋಟಿ ಕೋಟಿ ಜನರ ಮನಪರಿವರ್ತನೆ ಮಾಡಿದ ನಡೆದಾಡುವ ದೇವರು ಶ್ರೀ ಸಿದ್ಧೇಶ್ವರ ಅಪ್ಪನವರು ಎಂದು ವಿಧಾನ ಪರಿಷತ್ ಮಾಜಿ ಸದಸ್ಯ ಬಿ.ಜಿ ಪಾಟೀಲ ಹಲಸಂಗಿ ಹೇಳಿದರು.ನಗರದ ಕಸಾಪ ಸಭಾಂಗಣದಲ್ಲಿ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತು, ತಾಲೂಕು ಹಾಗೂ ನಗರ ಘಟಕ ಆಶ್ರಯದಲ್ಲಿ ಜ್ಞಾನಯೋಗಿ ಸಿದ್ಧೇಶ್ವರ ಶ್ರೀಗಳ ಪ್ರಥಮ ವಷ೯ದ ನುಡಿನಮನ ಕಾಯ೯ಕ್ರಮ ಉದ್ಘಾಟಿಸಿ ಮಾತನಾಡಿದರು.
ಸಿದ್ಧೇಶ್ವರ ಶ್ರೀಗಳ ಪ್ರವಚನ ಆಲಿಸಿ ಪುಣ್ಯವಂತರಾಗಿದ್ದೇವೆ. ಶ್ರೀಗಳ ಜ್ಞಾನ ಮತ್ತು ಸರಳತೆಯಿಂದ ದೇಶದ ಗಮನ ಸೆಳೆದರು ಎಂದರು.ಸಾನ್ನಿಧ್ಯ ವಹಿಸಿ ಪಂ.ಮಧ್ವಾಚಾರ್ಯ ಮೋಕಾಶಿ ಮಾತನಾಡಿ, ಸಿದ್ಧೇಶ್ವರ ಶ್ರೀಗಳು ನುಡಿದಂತೆ ನಡೆದರು. ತಾವು ಸಂಪಾಸಿದ ಜ್ಞಾನವನ್ನು ಶಿಷ್ಯ ವೃಂದಕ್ಕೆ ದಾರೆ ಎರೆದರು. ಶ್ರೀಗಳು ಅನೇಕ ಶಿಷ್ಯರನ್ನು ತರಬೇತುಗೊಳಿಸಿ ಸಮಾಜಕ್ಕೆ ಅರ್ಪಿಸಿದ್ದಾರೆ ಎಂದರು.
ಅಧ್ಯಕ್ಷ ವಹಿಸಿದ್ದ ಹಜರತ ಸೈಯ್ಯದ್ ಶಾಹ ಹುಸೇನ್ ಪೀರ್ ಖಾದ್ರಿ ಚಿಸ್ತಿ, ಡಾ.ಎಫ್.ಎಚ್. ಇನಾಮದಾರ ಸಾಹೇಬ ಮಾತನಾಡಿ, ಅಜ್ಞಾನದಿಂದ ಸುಜ್ಞಾನದ ಕಡೆಗೆ ಕರೆದುಕೊಂಡು ಹೋಗುವವರು ಗುರುಗಳು. ಪ್ರೀತಿ, ನೀತಿ, ರೀತಿಯೇ ನಿಜವಾದ ಧರ್ಮ. ಭೇದ ಮಾಡದೇ ಇರುವವನು ನಿಜವಾದ ಗುರು ಅವರೇ ಸಿದ್ಧೇಶ್ವರ ಶ್ರೀಗಳು ಎಂದರು.ಶಿಕ್ಷಕಿ ವಿದ್ಯಾ ಕಲ್ಯಾಣಶೆಟ್ಟಿ ಮಾತನಾಡಿದರು. ಕವಯತ್ರಿಗಳಾದ ಸಾವಿತ್ರಿ ತಳವಾರ ಕೂಚಬಾಳ, ರೇಣುಕಾ ತಳವಾರ ಅವರು ಸಿದ್ಧೇಶ್ವರ ಶ್ರೀ ಕುರಿತು ಕವನ ವಾಚಿಸಿದರು.
ಇದೇ ವೇಳೆ ಉಡುಪಿ ಶ್ರೀ ಮಂಜುನಾಥ ಸ್ವಾಮಿಯ ಕಾತಿ೯ಕೋತ್ಸವ ಕಾಯ೯ಕ್ರಮದಲ್ಲಿ ಸ್ವ ಧರ್ಮದ ಕುರಿತು ಮಾತನಾಡಿದ ವಕೀಲ ಮಹಮ್ಮದ ಗೌಸ್ ಹವಾಲ್ದಾರ ಅವರನ್ನು ಗೌರವಿಸಲಾಯಿತು.ಸಾಹಿತಿ ಅನ್ನಪೂರ್ಣ ಚೋಳಕೆ, ಸಾವಿತ್ರಿ ಬಿರಾದಾರ, ನಗರ ಘಟಕ ಅಧ್ಯಕ್ಷೆ ಅನ್ನಪೂರ್ಣ. ಸಿಂದಗಿ ಅಧ್ಯಕ್ಷ ಶಿವಾನಂದ ಬಡಾನೂರ. ತಾಳಿಕೋಟಿ ಅಧ್ಯಕ್ಷ ರೇವಣಸಿದ್ದಪ್ಪ ಕೊಪ್ಪದ, ಅಭಿಷಕ ಚಕ್ರವರ್ತಿ, ಕಮಲಾ ಮುರಾಳ, ವಿಜಯಲಕ್ಷ್ಮೀ ಹಳಕಟ್ಟಿ, ಆಶಾ ಬಿರಾದಾರ, ಅಜು೯ನ ಶಿರೂರ, ಅಬ್ದುಲ್ ರಜಾಕ ಮುಲ್ಲಾ, ಸತ್ಯಪ್ಪ ಹಡಪದ, ಜಿ.ಎಸ್ ಬಳ್ಳೂರ. ಆರ್.ಬಿ ಜಾಧವ, ಎಸ್.ಎಸ್ ಬಿರಾದಾರ, ರವಿ ಜೀರಗಾಳ, ಮಂಜುನಾಥ ಕುಚನೂರ, ಸಿದ್ರಾಮಪ್ಪ ಜಂಗಮಶೆಟ್ಟಿ, ಸುಖದೇವಿ ಅಲಬಾಳಮಠ, ಶಾಂತು ರಾಣಾಗೋಳ, ಡಾ.ಜಿ ಶ್ರೀನಿವಾಸಲು, ಅಶೋಕ ಚಲವಾದಿ, ಗೋಪಾಲ್ ಕನಸೆ, ಪರಶುರಾಮ ಕಾಳೆ, ಅಹಮ್ಮದ ವಾಲಿಕಾರ, ಮಹಾದೇವಿ ತೆಲಗಿ, ಶಿವಾಜಿ ಮೋರೆ, ಗೋಲ್ಲಾಳಪ್ಪಗೌಡ ಬಿರಾದಾರ ಮುಂತಾದವರು ಉಪಸ್ಥಿತರಿದ್ದರು.ಕಸಾಪ ಜಿಲ್ಲಾಧ್ಯಕ್ಷ ಹಾಸಿಂಪೀರ ವಾಲಿಕಾರ ಸ್ವಾಗತಿಸಿದರು, ಡಾ.ಆನಂದ ಕುಲಕರ್ಣಿ ನಿರೂಪಿಸಿದರು. ರೇವತಿ ಬೂದಿಹಾಳ ವಂದಿಸಿದರು.