ಸಾರಾಂಶ
ಶಿಗ್ಗಾಂವಿ: ಮನೆ ಗೋಡೆ ಕುಸಿದು ಓರ್ವ ವೃದ್ಧ ಗಾಯಗೊಂಡು ಮಾರಾಟಕ್ಕೆ ಸಿದ್ಧವಾದ ೩೦೦ಕ್ಕೂ ಹೆಚ್ಚು ಗಣಪತಿ ವಿಗ್ರಹಗಳು ಹಾನಿಯಾದ ಘಟನೆ ತಾಲೂಕಿನ ಕುನ್ನೂರ ಗ್ರಾಮದಲ್ಲಿ ಮಂಗಳವಾರ ಬೆಳಗಿನ ಜಾವ ಜರುಗಿದೆ.ರಾಮಪ್ಪ ತಳವಾರ ಗೋಡೆ ಕುಸಿತದಿಂದ ಗಾಯಗೊಂಡಿದ್ದು, ಶಿಗ್ಗಾಂವಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾನೆ. ಮಂಗಳವಾರ ನಸುಕಿನ ವೇಳೆ ಸುರಿದ ಭಾರಿ ಮಳೆಗೆ ಕುನ್ನೂರ ಗ್ರಾಮದ ಮಹಾದೇವಿ ರಾಮಪ್ಪ ತಳವಾರ ಅವರಿಗೆ ಸೇರಿದ ಮನೆಯ ಗೋಡೆ ಕುಸಿದು ಬಿದ್ದಿದ್ದು ೩೦೦ಕ್ಕೂ ಅಧಿಕ ಗಣಪತಿ ವಿಗ್ರಹ ಹಾಳಾಗಿದ್ದು, ೨ ಲಕ್ಷಕ್ಕೂ ಹೆಚ್ಚು ರು. ಹಾನಿ ಉಂಟಾಗಿದೆ ಎನ್ನಲಾಗಿದೆ.ಮನೆಯ ಗೋಡೆಯು ಕುಸಿದು ಬಿದ್ದಿದರಿಂದ ಮನೆಯೂ ಸಂಪೂರ್ಣವಾಗಿ ನೆಲಕಚ್ಚುವಂತಾಗಿದೆ. ಆದ್ದರಿಂದ ತಕ್ಷಣವಾಗಿ ಗಣಪತಿ ವಿಗ್ರಹಗಳ ಹಾನಿಗೆ ಮನೆಯ ಗೋಡೆಯು ಕುಸಿದಿದ್ದರಿಂದ ಸಾಕಷ್ಟು ಪ್ರಮಾಣದಲ್ಲಿ ಹಾನಿಯಾಗಿ ಬೀದಿಗೆ ಬರುವಂತಾಗಿದೆ. ತಹಸೀಲ್ದಾರ್ ಪರಿಹಾರವನ್ನು ನೀಡಬೇಕು ಎಂದು ಆಗ್ರಹಿಸಿದ್ದಾರೆ. ಕಳೆದ ಎರಡು ತಿಂಗಳಿಂದ ಮನೆಯ ಐದು ಮಂದಿ ಸದಸ್ಯರು ಸೇರಿ ಗಣಪತಿ ವಿಗ್ರಹ ತಯಾರಿಸಿದ್ದು ಚೌತಿಗೆ ಮಾರುಕಟ್ಟೆಗೆ ತೆಗೆದುಕೊಂಡು ಹೋಗುವ ಸಿದ್ಧತೆಯಲ್ಲಿ ಇದ್ದೆವು. ಮನೆಯ ಗೋಡೆ ಕುಸಿದು ವಾರ್ಷಿಕ ಆದಾಯವನ್ನು ಮಣ್ಣು ಪಾಲು ಮಾಡಿದೆ. ಅಲ್ಲದೆ ಆಸ್ಪತ್ರೆಗೆ ಸೇರುವಂತಾಗಿದೆ ಎಂದು ಮನೆಯ ಸದಸ್ಯರು ಮಾಹಿತಿ ಹಂಚಿಕೊಂಡರು.ಪರಿಹಾರ ನೀಡುವಂತೆ ಗ್ರಾ.ಪಂ. ಮಾಜಿ ಅಧ್ಯಕ್ಷ ಮಹೇಶ ಚಿಕ್ಕವೀರಮಠ, ಕಲ್ಲಪ್ಪ ಬೀರವಳ್ಳಿ, ಕಲ್ಲಪ್ಪ ಅಗಸಿಮನಿ, ಆಸ್ಪಕಅಲಿ ಮತ್ತೇಖಾನ ಸೇರಿದಂತೆ ಹಲವರು ಆಗ್ರಹಿಸಿದ್ದಾರೆ.ತಾಲೂಕಿನ ಅಡವಿಸೋಮಾಪುರ ಗ್ರಾಮದ ತಿಪ್ಪವ್ವ ಭೀಮಪ್ಪ ಕಂಬಾರ, ತುಕಾರಾಮ ಮನಾಯಿ, ನಾಗರತ್ನ ಮನಾಯಿ ಅವರ ಮನೆ ಸತತವಾಗಿ ಸುರಿದ ಮಳೆಯಿಂದಾಗಿ ಬಿದ್ದಿದ್ದು, ಯಾವುದೇ ಪ್ರಾಣ ಹಾನಿಗೊಳ್ಳದೆ ಅಪಾಯದಿಂದ ಮನೆಯ ಸದಸ್ಯರು ಪಾರಾಗಿದ್ದಾರೆ.
ಸತತವಾಗಿ ಸುರಿಯುತ್ತಿರುವ ಮಳೆಗೆ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ಇಂದು ೪ ಮನೆ ಬಿದ್ದಿದ್ದು, ಜೆಪಿಎಸ್ ಪೋಟು ತೆಗೆದಿದ್ದು, ಮೇಲಧಿಕಾರಿಗಳಿಗೆ ಮಾಹಿತಿ ವರದಿ ಸಲ್ಲಿಸುತ್ತಿದ್ದೇವೆ. ಸರಕಾರದಿಂದ ಪರಿಹಾರವನ್ನು ಕೊಡುವ ವ್ಯವಸ್ಥೆಯನ್ನು ಮಾಡಲಾಗುವುದು. ಕುನ್ನೂರ ಗ್ರಾಮ ಪಂಚಾಯಿತಿ ಅಭಿವೃದ್ಧಿ ಅಧಿಕಾರಿ ಎಸ್.ಎಸ್. ಪಾವಿನ್ ಹೇಳಿದರು.