ಮನೆಯ ಗೋಡೆ ಮೈಮೇಲೆ ಬಿದ್ದು ಯುವತಿಗೆ ಗಂಭೀರ ಗಾಯ

| Published : Jul 21 2024, 01:18 AM IST

ಸಾರಾಂಶ

3-4 ದಿನಗಳಿಂದ ಸುರಿಯುತ್ತಿರುವ ಜಿಟಿಜಿಟಿ ಮಳೆಯಿಂದ ಮನೆಯ ಗೋಡೆಯೊಂದು ಯುವತಿಯ ಮೈಮೇಲೆ ಬಿದ್ದು ಗಂಭೀರವಾಗಿ ಗಾಯಗೊಂಡಿರುವ ಘಟನೆ ಶನಿವಾರ ಜರುಗಿದೆ.

ಗುತ್ತಲ: 3-4 ದಿನಗಳಿಂದ ಸುರಿಯುತ್ತಿರುವ ಜಿಟಿಜಿಟಿ ಮಳೆಯಿಂದ ಮನೆಯ ಗೋಡೆಯೊಂದು ಯುವತಿಯ ಮೈಮೇಲೆ ಬಿದ್ದು ಗಂಭೀರವಾಗಿ ಗಾಯಗೊಂಡಿರುವ ಘಟನೆ ಶನಿವಾರ ಜರುಗಿದೆ.

ಗಾಯಗೊಂಡಿರುವ ಯುವತಿಯನ್ನು ಸಮೀಪದ ಬರಡಿ ಗ್ರಾಮದ ಹೊನ್ನವ್ವ ಚನ್ನಪ್ಪ ತಳವಾರ (16) ಎಂದು ಗುರ್ತಿಸಲಾಗಿದೆ. ಯುವತಿಯು ನೀರು ತರುವಾಗ ಪಕ್ಕದ ಮನೆಯ ಇಟ್ಟಿಗೆ ಗೋಡೆಯೊಂದು ಜಿಟಿಜಿಟಿ ಮಳೆಯಿಂದ ಏಕಾಏಕಿ ಯುವತಿಯ ಮೈಮೇಲೆ ಬಿದ್ದು ತಲೆಗೆ ಗಂಭೀರವಾದ ಗಾಯವಾಗಿದೆ, ತಕ್ಷಣವೇ ಯುವತಿಯನ್ನು ಹಾವೇರಿಯ ಜಿಲ್ಲಾಸ್ಪತ್ರೆಗೆ ಚಿಕಿತ್ಸೆಗೆಂದು ಕರೆದೊಯ್ದಿದ್ದಾರೆ. ತಲೆಗೆ ಗಂಭೀರ ಗಾಯವಾಗಿದ್ದರಿಂದ ಹೆಚ್ಚಿನ ಚಿಕಿತ್ಸೆಗೆ ಹುಬ್ಬಳ್ಳಿಯ ಕಿಮ್ಸ್ ಆಸ್ಪತ್ರೆಗೆ ದಾಖಲಿಸಲಾಗಿದೆ. ತಹಸೀಲ್ದಾರ ಶಂಕರ ಜಿ.ಎಸ್. ಜಿಲ್ಲಾಸ್ಪತ್ರೆಗೆ ಭೇಟಿ ನೀಡಿ ಆರೋಗ್ಯದ ಬಗ್ಗೆ ಮಾಹಿತಿ ಪಡೆದಿದ್ದಾರೆ.

ಘಟನಾ ಸ್ಥಳಕ್ಕೆ ತಹಸೀಲ್ದಾರ್ ಶಂಕರ ಜಿ.ಎಸ್., ಉಪ ತಹಸೀಲ್ದಾರ್‌ ಎಂ.ಡಿ. ಕಿಚಡೇರ, ಕಂದಾಯ ನಿರೀಕ್ಷಕ ಆರ್.ಎನ್. ಮಲ್ಲಾಡದ, ಪಂಚಾಯತ ಅಭಿವೃದ್ಧಿ ಅಧಿಕಾರಿ, ಶಾರದಾ ಜಾಲವಾಡಿ, ಪಿಎಸ್‌ಐ ಮಹಾಂತೇಶ ಮರದಬುಡಕಿನ, ಗ್ರಾಮ ಆಡಳಿತಾಧಿಕಾರಿ ವಿನಯಕುಮಾರ ಜಿ.ಎಂ., ಡಾಟಾ ಎಂಟ್ರಿ ಆಪರೇಟರ ಜಗದೀಶ ಕಾಟೇನಹಳ್ಳಿ ಸೇರಿದಂತೆ ಅನೇಕರು ಭೇಟಿ ನೀಡಿದ್ದಾರೆ.