ಗುರು ಎಂಬ ಪದವು ಅತ್ಯಂತ ವಿಶಾಲ, ಶ್ರೇಷ್ಠವಾದದ್ದು: ಚಂದ್ರಶೇಖರಯ್ಯ

| Published : Jul 23 2024, 12:32 AM IST

ಸಾರಾಂಶ

ಶಿಷ್ಯನಾದವನು ಗುರುವನ್ನು ಮೀರಿಸಿ ಎತ್ತರಕ್ಕೆ ಬೆಳೆದಾಗ ಗುರುವಿಗೆ ಉಂಟಾದ ಸಂತೋಷಕ್ಕೆ ಬೆಲೆ ಕಟ್ಟಲಾಗದು. ಹೀಗಾಗಿ ಶಿಷ್ಯರು ದೊಡ್ಡ ದೊಡ್ಡ ಸಾಧನೆ ಮಾಡುವ ಮೂಲಕ ಬಹು ಎತ್ತರಕ್ಕೆ ಬೆಳೆಯಬೇಕು. ಗುರು ಎಂಬ ಪದವು ಚಿಕ್ಕದಾದರೂ ಅತ್ಯಂತ ವಿಶಾಲ, ಶ್ರೇಷ್ಠವಾದುದ್ದು. ಶಿಷ್ಯ ಎಂಬ ಪದವು ಕೂಡ ಅಷ್ಟೇ ದೊಡ್ದದು.

ಕನ್ನಡಪ್ರಭ ವಾರ್ತೆ ಪಾಂಡವಪುರ

ಗುರು ಎಂಬ ಪದವು ಚಿಕ್ಕದಾದರೂ ಅತ್ಯಂತ ವಿಶಾಲ, ಶ್ರೇಷ್ಠವಾದುದ್ದು. ಶಿಷ್ಯ ಎಂಬ ಪದವು ಕೂಡ ಅಷ್ಟೇ ದೊಡ್ದದು. ಶಿಷ್ಯನಿಗೆ ಪಾಠ ಹೇಳುವ ಮೂಲಕ ಸಮಾಜಕ್ಕೆ ದೊಡ್ಡ ವ್ಯಕ್ತಿಯನ್ನಾಗಿಸುವ ಗುರುವಿನ ಸ್ಮರಣೆ ಅತಿ ಮುಖ್ಯ ಎಂದು ನಿವೃತ್ತ ಶಿಕ್ಷಕ ಚಂದ್ರಶೇಖರಯ್ಯ ಹೇಳಿದರು.

ತಾಲೂಕಿನ ಕುಂತಿಬೆಟ್ಟ ಶ್ರೀಶಂಕರಾನಂದ ಭಾರತಿ ವಿದ್ಯಾಪೀಠದ ಕುವೆಂಪು ಪ್ರೌಢಶಾಲೆಯಲ್ಲಿ ಗುರು ಪೂರ್ಣಿಮೆ ಅಂಗವಾಗಿ 1996-97ನೇ ಸಾಲಿನ ಎಸ್ಸೆಸ್ಸೆಲ್ಸಿ ವಿದ್ಯಾರ್ಥಿಗಳಿಂದ ಆಯೋಜಿಸಿದ್ದ ಗುರುವಂದನಾ ಕಾರ್ಯಕ್ರಮದಲ್ಲಿ ಮಾತನಾಡಿದರು.

ಶಿಷ್ಯನಾದವನು ಗುರುವನ್ನು ಮೀರಿಸಿ ಎತ್ತರಕ್ಕೆ ಬೆಳೆದಾಗ ಗುರುವಿಗೆ ಉಂಟಾದ ಸಂತೋಷಕ್ಕೆ ಬೆಲೆ ಕಟ್ಟಲಾಗದು. ಹೀಗಾಗಿ ಶಿಷ್ಯರು ದೊಡ್ಡ ದೊಡ್ಡ ಸಾಧನೆ ಮಾಡುವ ಮೂಲಕ ಬಹು ಎತ್ತರಕ್ಕೆ ಬೆಳೆಯಬೇಕು ಎಂದರು.

ಕಾರ್ಯಕ್ರಮದಲ್ಲಿ ನಿವೃತ್ತ ಶಿಕ್ಷಕರಾದ ಚಂದ್ರಶೇಖರಯ್ಯ, ವೆಂಕಟೇಶ್, ನಿವೃತ್ತ ಮುಖ್ಯ ಶಿಕ್ಷಕ ಪಾರ್ಥೇಗೌಡ, ಮುಖ್ಯ ಶಿಕ್ಷಕ ನಾಗಪ್ಪ ಕೋರೆರ, ಶಿಕ್ಷಕರಾದ ಪ.ಮ.ನಂಜುಂಡಸ್ವಾಮಿ, ಆನಂದ್, ನಿವೃತ್ತ ನಿಲಯ ಪಾಲಕ ಲಕ್ಷ್ಮೀನಾರಾಯಣ್, ನಿವೃತ್ತ ತೋಟಗಾರಿಕೆ ಶಿಕ್ಷಕ ಮರಿಕುಂಟೇಗೌಡ, ನಿವೃತ್ತ ಎಫ್ ಡಿಎ ಹಾರೋಹಳ್ಳಿ ಲಕ್ಷ್ಮೀನಾರಾಯಣಯ್ಯ, ಸಿಬ್ಬಂದಿ ಶಿವಣ್ಣ, ಮಲ್ಲಿಕಾರ್ಜುನ ಅವರನ್ನು ಆತ್ಮೀಯವಾಗಿ ಸನ್ಮಾನಿಸಿ ಅಭಿನಂದಿಸುವ ಮೂಲಕ ಗುರುವಂದನೆ ಸಲ್ಲಿಸಲಾಯಿತು.

ಕಾರ್ಯಕ್ರಮವನ್ನು ಶ್ರೀಶಂಕರನಂದ ಭಾರತಿ ವಿದ್ಯಾಪೀಠದ ಗೌರವ ಕಾರ್ಯದರ್ಶಿ ಸಿ.ಎಂ.ಚನ್ನೇಗೌಡ ಉದ್ಘಾಟಿಸಿದರು. ವಿದ್ಯಾಪೀಠದ ಅಧ್ಯಕ್ಷ ಎಚ್.ಎಲ್.ನಂಜೇಗೌಡ ಅಧ್ಯಕ್ಷತೆ ವಹಿಸಿದ್ದರು. ಕನ್ನಡ ಶಿಕ್ಷಕಿ ಶಶಿಕಲಾ, 1996-97ನೇ ಸಾಲಿನ ವಿದ್ಯಾರ್ಥಿಗಳಾದ ಕೆ.ಎನ್.ನಾಗರಾಜು, ನಿತ್ಯಾನಂದ, ಡಿ.ಸುಂದರಿ, ನವೀನಚಂದ್ರ, ಕೆಇಬಿ ದೇವರಾಜು, ಕೌಸ್ತುಭ, ಲೋಲ, ಪಿ.ಎಸ್.ಸೌಮ್ಯ, ಹಾರೋಹಳ್ಳಿ ಸಿದ್ದೇಗೌಡ, ಶ್ರೀಹರ್ಷ ಇತರರಿದ್ದರು.