ಸಾರಾಂಶ
ಮಾಜಿ ಸಚಿವ ವಿ ಸೋಮಣ್ಣ ಅಸಮಾಧಾನ ವಿಚಾರಕ್ಕೆ ಪ್ರತಿಕ್ರಿಯಿಸಿದ ಅವರು, ಬಿಜೆಪಿ ರಾಜ್ಯಾಧ್ಯಕ್ಷರ ನೇಮಕದ ನಂತರ ಬಿಜೆಪಿಯಲ್ಲಿ ಗೊಂದಲಗಳಿಲ್ಲ. ಕೆಲವರಲ್ಲಿ ನೋವು, ಬೇಸರ, ಅಸಮಾಧಾನ ಇರಬಹುದು. ಇದನ್ನು ಬಿಜೆಪಿ ರಾಷ್ಟ್ರೀಯ ನಾಯಕರು, ರಾಜ್ಯದ ನಾಯಕರಾದ ಬಿ.ಎಸ್. ಯಡಿಯೂರಪ್ಪ, ಈಶ್ವರಪ್ಪ, ನಳೀನ್‌ಕುಮಾರ್ ಕಟೀಲು ಮೊದಲಾದವರು ಸರಿಪಡಿಸುತ್ತಾರೆ ಎಂದು ಹೇಳಿದರು.
ಶಿವಮೊಗ್ಗ: ಜಾತಿಗಣತಿ ಸೇರಿದಂತೆ ಕಾಂಗ್ರೆಸ್ ಪಕ್ಷ ಎಲ್ಲ ವಿಷಯಗಳಲ್ಲಿಯೂ ಗೊಂದಲ ಮೂಡಿಸುತ್ತಿದ್ದು, ಕಾಂಗ್ರೆಸ್ ಪಕ್ಷವೇ ಹಾಗೆ, ಗೊಂದಲದ ಗೂಡು ಎಂದು ಶಾಸಕ ಎಸ್.ಎನ್. ಚನ್ನಬಸಪ್ಪ ವ್ಯಂಗ್ಯವಾಡಿದರು.
ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಕಾಂಗ್ರೆಸ್ ಪಕ್ಷ ರಾಜ್ಯವನ್ನಲ್ಲ ಇಡೀ ದೇಶವನ್ನೇ ಗೊಂದಲಕ್ಕೆ ಸಿಲುಕಿಸಿದೆ. ಆ ರೀತಿಯ ಮಾನಸಿಕತೆ ಆ ಪಕ್ಷಕ್ಕೆ ಇದೆ ಎಂದು ಟೀಕಿಸಿದರು.ಕೆಲವರು ವರದಿ ಮಂಡನೆಯಾಗಿದೆ ಎಂದರೆ, ಮತ್ತೆ ಕೆಲವರು ಇಲ್ಲ ಎನ್ನುವ ಗೊಂದಲ ಸೃಷ್ಟಿ ಮಾಡುತ್ತಿದ್ದಾರೆ. ಈ ರೀತಿ ಗೊಂದಲ ಸೃಷ್ಟಿ ಮಾಡಿರುವ ಕಾಂಗ್ರೆಸ್ ಈ ಗೊಂದಲಕ್ಕೆ ಪರಿಹಾರ ಹುಡುಕಬೇಕಿದೆ ಎಂದರು.
ಮಾಜಿ ಸಚಿವ ವಿ ಸೋಮಣ್ಣ ಅಸಮಾಧಾನ ವಿಚಾರಕ್ಕೆ ಪ್ರತಿಕ್ರಿಯಿಸಿದ ಅವರು, ಬಿಜೆಪಿ ರಾಜ್ಯಾಧ್ಯಕ್ಷರ ನೇಮಕದ ನಂತರ ಬಿಜೆಪಿಯಲ್ಲಿ ಗೊಂದಲಗಳಿಲ್ಲ. ಕೆಲವರಲ್ಲಿ ನೋವು, ಬೇಸರ, ಅಸಮಾಧಾನ ಇರಬಹುದು. ಇದನ್ನು ಬಿಜೆಪಿ ರಾಷ್ಟ್ರೀಯ ನಾಯಕರು, ರಾಜ್ಯದ ನಾಯಕರಾದ ಬಿ.ಎಸ್. ಯಡಿಯೂರಪ್ಪ, ಈಶ್ವರಪ್ಪ, ನಳೀನ್‌ಕುಮಾರ್ ಕಟೀಲು ಮೊದಲಾದವರು ಸರಿಪಡಿಸುತ್ತಾರೆ ಎಂದು ಹೇಳಿದರು.ಪಕ್ಷದ ಕೆಲಸ ಮಾಡಿ ನೋವು ಮರೆಯಿರಿ:
ಸೋಮಣ್ಣನಂತ ಹಿರಿಯರು ಎಲ್ಲರನ್ನೂ ಒಗ್ಗೂಡಿಸಿ ಜೊತೆಗೆ ತೆಗೆದುಕೊಂಡು ಹೋಗುವಂತಹ ನಾಯಕರು. ಸೋಮಣ್ಣನವರಿಗೆ ನೋವು ಆಗಿಲ್ಲ ಎಂದು ನಾನು ಹೇಳಲ್ಲ. ನಿಮ್ಮ ನೋವಿಗೆ ಪರಿಹಾರ ಎಂದರೆ ಬಿಜೆಪಿ ಪಕ್ಷದ ಕೆಲಸ ಮಾಡುವುದು ಮಾತ್ರ ಎಂದು ಸಲಹೆ ನೀಡಿದರು.- - - -ಫೋಟೋ: ಎಸ್. ಎನ್. ಚನ್ನಬಸಪ್ಪ