ಸಾರಾಂಶ
ಆಧುನಿಕ ಜೀವನಶೈಲಿಯಿಂದ ಮರೆಯಾಗುತ್ತಿರುವ ಗ್ರಾಮೀಣ ಬದುಕಿನ ಪರಂಪರೆಯನ್ನು ನೆನಪಿಸುವುದರ ಜೊತೆಗೆ ಮಕ್ಕಳಿಗೆ ಹಳ್ಳಿ ಪರಿಸರವನ್ನು ಪರಿಚಯಿಸುವ ಕೆಲಸಗಳು ನಿರಂತರವಾಗಿ ನಡೆಯಬೇಕು ಎಂದು ಸಂಪನ್ಮೂಲ ವ್ಯಕ್ತಿ ಹನುಮೇಶ್ ಭಂಗಿ ಹೇಳಿದರು.
ಬಾಜಾ ಭಜಂತ್ರಿ ಮೂಲಕ ಮೆರವಣಿಗೆ
ತುರ್ವಿಹಾಳ: ಆಧುನಿಕ ಜೀವನಶೈಲಿಯಿಂದ ಮರೆಯಾಗುತ್ತಿರುವ ಗ್ರಾಮೀಣ ಬದುಕಿನ ಪರಂಪರೆಯನ್ನು ನೆನಪಿಸುವುದರ ಜೊತೆಗೆ ಮಕ್ಕಳಿಗೆ ಹಳ್ಳಿ ಪರಿಸರವನ್ನು ಪರಿಚಯಿಸುವ ಕೆಲಸಗಳು ನಿರಂತರವಾಗಿ ನಡೆಯಬೇಕು ಎಂದು ಸಂಪನ್ಮೂಲ ವ್ಯಕ್ತಿ ಹನುಮೇಶ್ ಭಂಗಿ ಹೇಳಿದರು.ಪಟ್ಟಣದ ಸಮೀಪದ ಬಸವಣ್ಣ ಕ್ಯಾಂಪಿನ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಿಂದ ಹಳ್ಳಿ ಸೊಗಡಿನ ಕಾರ್ಯಕ್ರಮದಲ್ಲಿ ಮಾತನಾಡಿದರು.
ಶಾಲಾ ವಿದ್ಯಾರ್ಥಿಗಳಿಂದ ಕಟ್ಟಿಗೆ ಮಾರುವುದು,ಕಿರಾಣಿ ಅಂಗಡಿಗಳು,ರೊಟ್ಟಿ ತಟ್ಟುವುದು,ಇಸ್ತ್ರಿ ಮಾಡುವುದು, ಅಕ್ಕಿ ಕೇರುವುದು, ಬೀಸುವುದು, ಆಸ್ಪತ್ರೆ, ಕಟಿಂಗ್ ಶಾಪ್, ಕೊರವಂಜಿ ಕಣಿ ಹೇಳುವುದು, ಅಲಾಯಿ ಆಡುವುದು, ಡೊಳ್ಳು ಬಾರಿಸುವಿಕೆ ಮತ್ತು ಕುಣಿತ, ಬಡಗಿತನ ಮಾಡು ವುದು,ಹಾಲು ಹಾಕುವುದು, ಉಪಾಹಾರ ಅಂಗಡಿ,ಚಿಕನ್ ಅಂಗಡಿ, ಮಜ್ಜಿಗೆ ಮಾಡುವುದು, ಬಟ್ಟೆ ಅಂಗಡಿ,ರಂಗೋಲಿ ಹಾಕುವುದು, ಹೂ ಮಾರುವುದು,ಒಡಪುಹೇಳುವುದುಹೀಗೆ ಇನ್ನೂ ಹಲವಾರು ಬಗೆಯ ಗ್ರಾಮೀಣ ಬದುಕಿಗೆ ಅತೀ ಅವಶ್ಯಕವಾದ ವೃತ್ತಿ ಮತ್ತು ಅಂಗಡಿಗಳನ್ನು ನಿರ್ಮಿಸಿ ಜನರ ಮನ ಮುಟ್ಟುವಂತೆ ಗಮನ ಸೆಳೆಯಲಾಯ್ತು. ಕಾರ್ಯಕ್ರಮ ಹಿನ್ನೆಲೆಯಲ್ಲಿ ಬಸರ್ವೇಶ್ವರ ದೇವಸ್ಥಾನದಿಂದ ಕುಂಭ, ಕಳಸದೊಂದಿಗೆ ಹಲಗೆ, ಬಾಜಾ ಭಜಂತ್ರಿ, ಮೇಳದ ಮೂಲಕ ಶಾಲೆಯ ಆವರಣದವರಿಗೆ ಹಳ್ಳಿ ಸೊಗಡಿನ ಹಬ್ಬ ಸಂಭ್ರಮ ಸಡಗರದಿಂದ ನಡೆಯಿತು.
ಈ ಸಂದರ್ಭದಲ್ಲಿ ಮುಖ್ಯ ಶಿಕ್ಷಕರಾದ ಯಂಕಪ್ಪ ಬೇರಿಗಿ, ಸಹ ಶಿಕ್ಷಕರಾದ ನಾಗರಾಜ ನಾಯಕ ಅಯ್ಯಪ್ಪ ನಾಯಕ, ನಾಗರಾಜ.ಡಿ, ಶ್ರೀದೇವಿ.ಆರ್ ,ಎಸ್ಡಿಎಂಸಿ ಅಧ್ಯಕ್ಷರಾದ ಕನಕರಾಯ ಗುಂಡೂರು, ಉಪಾಧ್ಯಕ್ಷರಾದ ಹನುಮಂತ ಚೆಲುವಾದಿ, ನಿಂಗಪ್ಪ ಬಾಗೋಡಿ, ವಿದ್ಯಾರ್ಥಿಗಳು, ಪಾಲಕರು ಇದ್ದರು.