ಸಾರಾಂಶ
ದಿನಪತ್ರಿಕೆ ವಿತರಣೆ ಮಾಡುವುದು ಕೆಲಸವಲ್ಲ ಅದು ಸೇವೆ ಎಂದು ಭಾವಿಸಬೇಕು. ಪತ್ರಿಕೆ ವಿತರಿಸಿ ಡಾ. ಎ.ಪಿ.ಜೆ ಅಬ್ದುಲ್ ಕಲಾಂ ಅವರು ರಾಷ್ಟ್ರಪತಿಯಾದರು. ಸುದ್ದಿಮನೆಯ ಸಂಪರ್ಕ ಕೊಂಡಿಯಾಗಿ ಕೆಲಸ ಮಾಡುವ ಪತ್ರಿಕಾ ವಿತರಕರು, ಓದುಗರಿಗೆ ಜಗದ ವಿಷಯ ಮುಟ್ಟಿಸುತ್ತಾರೆ.
ನವಲಗುಂದ:
ಚಳಿ, ಮಳೆ ಲೆಕ್ಕಿಸದೆ ಬೆಳಗಿನ ಜಾವ ಮನೆ-ಮನೆಗೆ ದಿನಪತ್ರಿಕೆ ವಿತರಿಸುವ ಕಾರ್ಯ ಶ್ಲಾಘನೀಯವಾಗಿದೆ ಎಂದು ಜೆಡಿಎಸ್ ಮುಖಂಡ ಶ್ರೀಶೈಲ ಮೂಲಿಮನಿಹೇಳಿದರು.ಪಟ್ಟಣದಲ್ಲಿ ಕಾರ್ಯನಿರತ ಪತ್ರಕರ್ತರ ಸಂಘದಿಂದ ಹಮ್ಮಿಕೊಂಡಿದ್ದ ಪತ್ರಿಕಾ ವಿತರಕರ ದಿನಾಚರಣೆ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.
ದಿನಪತ್ರಿಕೆ ವಿತರಣೆ ಮಾಡುವುದು ಕೆಲಸವಲ್ಲ ಅದು ಸೇವೆ ಎಂದು ಭಾವಿಸಬೇಕು. ಪತ್ರಿಕೆ ವಿತರಿಸಿ ಡಾ. ಎ.ಪಿ.ಜೆ ಅಬ್ದುಲ್ ಕಲಾಂ ಅವರು ರಾಷ್ಟ್ರಪತಿಯಾದರು. ನೀವು ಕೂಡಾ ಈ ಪತ್ರಿಕೆ ವಿತರಣೆಯ ಕಾರ್ಯ ಶ್ರದ್ಧೆಯಿಂದ ಮಾಡಿದರೆ ಉನ್ನತ ಮಟ್ಟಕ್ಕೆ ಬೆಳೆಯಬಹುದು ಎಂದರು.ಬಡತನದಿಂದ ಬಂದ ಮಕ್ಕಳು ಮುಂದೊಂದು ದಿನ ಉತ್ತಮ ರಾಜಕಾರಣಿ, ಅಧಿಕಾರಿ ಹಾಗೂ ಇನ್ನಿತರ ಕ್ಷೇತ್ರಗಳಲ್ಲಿ ತಮ್ಮನ್ನು ತಾವು ಗುರುತಿಸುವಂತೆ ಆಗಬೇಕು ಎಂದು ಕರೆ ನೀಡಿದರು.
ಸಮಾಜ ಸೇವಕ ಮಾಬುಸಾಬ್ ಯರಗುಪ್ಪಿ ಮಾತನಾಡಿ, ಸುದ್ದಿಮನೆಯ ಸಂಪರ್ಕ ಕೊಂಡಿಯಾಗಿ ಕೆಲಸ ಮಾಡುವ ಪತ್ರಿಕಾ ವಿತರಕರು, ಓದುಗರಿಗೆ ಜಗದ ವಿಷಯ ಮುಟ್ಟಿಸುತ್ತಾರೆ. ಬಡತನದಲ್ಲಿ ಮನೆಯ ಕಷ್ಟಗಳಿಗೆ ಹೆಗಲು ನೀಡಲು ನಿಂತಿರುವ ವಿತರಕರು ಅವರ ಜವಾಬ್ದಾರಿ, ಸಮಯ ಪ್ರಜ್ಞೆ ಹಾಗೂ ಕಾಯಕ ನಿಷ್ಠೆ ಎಲ್ಲರಿಗೂ ಮಾದರಿಯಾಗಿದೆ ಎಂದರು.ಇದೇ ವೇಳೆ ಶ್ರೀಶೈಲ ಮೂಲಿಮನಿ, ಪುರಸಭೆ ಸದಸ್ಯ ಪ್ರಕಾಶ ಶಿಗ್ಲಿ, ಮಾಬುಸಾಬ್ ಯರಗುಪ್ಪಿ, ಹಿರಿಯ ಪತ್ರಿಕಾ ವಿತರಕ ಕೃಷ್ಣಪ್ಪ ಕುರಹಟ್ಟಿ ಅವರನ್ನು ಸನ್ಮಾನಿಸಲಾಯಿತು.
ಈ ವೇಳೆ ಕಾರ್ಯನಿರತ ಪತ್ರಕರ್ತರ ಸಂಘದ ತಾಲೂಕಾಧ್ಯಕ್ಷ ಇಸ್ಮಾಯಿಲಸಾಬ್ ನದಾಫ್, ಉಪಾಧ್ಯಕ್ಷ ಚಂದ್ರು ಕೋಟಗಿ, ಪತ್ರಕರ್ತರಾದ ಈಶ್ವರ ಲಕ್ಕುಂಡಿ, ಶಂಕರ ಸುಬೇದಾರಮಠ, ಮೆಹಬೂಬ ಅಣ್ಣಿಗೇರಿ ಹಾಗೂ ಡಾ. ಎ.ಪಿ.ಜಿ. ಅಬ್ದುಲ್ ಕಲಾಂ ಅಭಿಮಾನಿ ಬಳಗದ ಅಧ್ಯಕ್ಷ ರಿಯಾಜಅಹ್ಮದ್ ನಾಶಿಪುಡಿ, ಪತ್ರಿಕಾ ವಿತರಕರಾದ ಸಂಜೀವ ಗುರಿಕಾರ, ಗಂಗಾಧರ ಮುಪ್ಪಯ್ಯನವರ ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು..