ಸಾರಾಂಶ
ಕನ್ನಡಪ್ರಭ ವಾರ್ತೆ ದೇವರಹಿಪ್ಪರಗಿ ಮಳೆ, ಬಿಸಿಲು ಹಾಗೂ ಚಳಿಯನ್ನು ಲೆಕ್ಕಿಸದೇ ದೇಶ ಕಾಯುವ ವೀರ ಯೋಧರ ಸೇವೆ ಶ್ಲಾಘನೀಯ ಎಂದು ವಿಜಯಪುರದ ವಾಗ್ಮಿ ಮಂಜುನಾಥ ಜುನಗೊಂಡ ಹೇಳಿದರು.
ಕನ್ನಡಪ್ರಭ ವಾರ್ತೆ ದೇವರಹಿಪ್ಪರಗಿ ಮಳೆ, ಬಿಸಿಲು ಹಾಗೂ ಚಳಿಯನ್ನು ಲೆಕ್ಕಿಸದೇ ದೇಶ ಕಾಯುವ ವೀರ ಯೋಧರ ಸೇವೆ ಶ್ಲಾಘನೀಯ ಎಂದು ವಿಜಯಪುರದ ವಾಗ್ಮಿ ಮಂಜುನಾಥ ಜುನಗೊಂಡ ಹೇಳಿದರು.
ತಾಲೂಕಿನ ಪಡಗಾನೂರ ಗ್ರಾಮದ ನಿವೃತ್ತ ಯೋಧ ಮಲ್ಲು ಬನಗೊಂಡ ಅವರು ಸುಮಾರು 17 ವರ್ಷಗಳ ಕಾಲ ವಿವಿಧ ವಿಭಾಗಗಳಲ್ಲಿ ಸೇವೆ ಸಲ್ಲಿಸಿ ನಿವೃತ್ತಿಯ ನಂತರ ಬುಧವಾರ ಸ್ವಗ್ರಾಮಕ್ಕೆ ಆಗಮಿಸಿದರು. ಈ ವೇಳೆ ಅಭಿನಂದನ ಕಾರ್ಯಕ್ರಮದಲ್ಲಿ ಮಾತನಾಡಿದರು. ಮಲ್ಲು ಬನಗೊಂಡ ಅವರಂತೆ ಈ ಗ್ರಾಮದಲ್ಲಿ ಯುವಕರು ಸೈನ್ಯ ಸೇರುವಂತಾಗಲಿ ಎಂದು ಕಾರ್ಗಿಲ್ ಯುದ್ಧ ಹಾಗೂ ಆಪರೇಷನ್ ಸಿಂದೂರ ಸಂದರ್ಭದಲ್ಲಿ ಸೈನಿಕರ ಧೈರ್ಯ ಸಾಹಸದಿಂದ ದೇಶವನ್ನು ರಕ್ಷಿಸುತ್ತಿರುವ ಸೈನಿಕರು ದೇಶದ ನಿಜವಾದ ಬೆನ್ನೆಲುಬಾಗಿದ್ದಾರೆ ಎಂದರು.ಮೊದಲು ದೇವರಹಿಪ್ಪರಗಿ ಪಟ್ಟಣದ ಡಾ.ಬಿ.ಆರ್.ಅಂಬೇಡ್ಕರ್ ವೃತ್ತದಲ್ಲಿ ಅದ್ಧೂರಿ ಸ್ವಾಗತ ಕೋರಲಾಯಿತು. ತೆರೆದ ಜೀಪ್‌ನಲ್ಲಿ ಅದ್ದೂರಿ ಮೆರವಣಿಗೆ ಮೂಲಕ ಗ್ರಾಮಕ್ಕೆ ಬರಮಾಡಿಕೊಳ್ಳಲಾಯಿತು. ಸಾನಿಧ್ಯವನ್ನು ಸೋಮೇಶ್ವರ ದೇವಸ್ಥಾನ ಸಮಿತಿ ಅಧ್ಯಕ್ಷ ವೇ.ಮೂ ಅಯ್ಯಪ್ಪ ಸ್ವಾಮಿಗಳು ಹಿರೇಮಠ ವಹಿಸಿದ್ದರು.ಈ ವೇಳೆ ವಿಡಿಸಿಸಿ ಬ್ಯಾಂಕ್ ನಿರ್ದೇಶಕ ಹಣಮಂತ್ರಾಯಗೌಡ ಪಾಟೀಲ, ಗ್ರಾಪಂ ಅಧ್ಯಕ್ಷರ ಪ್ರತಿನಿಧಿ ಗುರುರಾಜ ಆಕಳವಾಡಿ. ಉಪಾಧ್ಯಕ್ಷರ ಪ್ರತಿನಿಧಿ ಸುಭಾಸ ಹೊಸಟ್ಟಿ. ತಾಲೂಕ ಕಾನಿಪ ಅಧ್ಯಕ್ಷ ಸಂಗಮೇಶ ಉತ್ನಾಳ. ಮುಖಂಡರಾದ ಎಲ್.ಕೆ.ರಾಮಪ್ಪ, ಬೀರು ಹಳ್ಳಿ. ಸಿದ್ದು ಬೆಳ್ಳಿ.ನಿಂಗನಗೌಡ ಪಾಟೀಲ. ಜಟ್ಟೆಪ್ಪ ಪೂಜಾರಿ, ಕರೆಪ್ಪ ಪೂಜಾರಿ, ಭೂತಾಳಿ ಸಿದ್ದ ಅಯ್ಯಪ್ಪ ಸಾತಿಹಾಳ. ಸೋಮು ಪತ್ತಾರ, ಸೋಮನಗೌಡ ಪಾಟೀಲ, ಶಂಕರ ಸಾತಿಹಾಳ, ಎಸ್‌ಡಿಎಂಸಿ ಅಧ್ಯಕ್ಷ ಮಲ್ಲು ಬನಗೊಂಡ. ಮಾಯಪ್ಪ ಹೊಸಟ್ಟಿ. ಗ್ರಾಮದ ಯೋಧರಾದ ರೇವಣಸಿದ್ಧ ಸಾತಿಹಾಳ. ಮುತ್ತು ಸೇರಿಕಾರ, ಬಸು ಹೊಸಟ್ಟಿ, ಬೀರು ಹುಣಚ್ಯಾಳ, ಹಣಮಂತ ಮುರಾಳ, ದಯಾನಂದ ಆಕಳವಾಡಿ, ಸೋಮಪ್ಪ ಬನಗೊಂಡ, ಸುರೇಶ ವಿಜಾಪುರ, ರಾಜು ಚಿಗರಿ, ಕೆಂಚಪ್ಪ ಬನಗೊಂಡ, ಸಾಯಿಬಣ್ಣ ಕೊಟಾರಗಸ್ತಿ, ಸೋಮು ಹುಗ್ಗಿ, ಪ್ರಶಾಂತ ಹಳ್ಳಿ. ವಿಠ್ಠಲ ಹಳ್ಳಿ ಸೇರಿ ಸ್ಥಳೀಯರು ಇದ್ದರು. ಸುರೇಶ ವಗ್ಗರ ನಿರೂಪಿಸಿದರು. ಮಾಳು ಮಾಸ್ತರ ಮುರಾಳ ವಂದಿಸಿದರು.