ರಾಮಾಯಣಕ್ಕೆ ಈಡಿ ವಿಶ್ವವೇ ತಲೆಬಾಗಿದೆ

| Published : Oct 08 2025, 01:00 AM IST

ಸಾರಾಂಶ

ನಿಸರ್ಗದೊಂದಿಗೆ ನಿಕಟ ಸಂಪರ್ಕ ಹೊಂದಿದ್ದ ಮಹರ್ಷಿ ವಾಲ್ಮೀಕಿ ಅವರಲ್ಲಿದ್ದ ಕವಿತ್ವ ಭಾವನೆಯಿಂದಾಗಿಯೇ ರಾಮಾಯಣ ಎಂಬ ಮಹಾಕಾವ್ಯ ರಚನೆಯಾಯಿತು ಎಂದು ವಾಲ್ಮೀಕಿ ಸಮುದಾಯದ ಮುಖಂಡ ಗೋಪಿನಾಥ್ ತಿಳಿಸಿದರು.

ಕನ್ನಡಪ್ರಭ ವಾರ್ತೆ ಕೊರಟಗೆರೆ

ನಿಸರ್ಗದೊಂದಿಗೆ ನಿಕಟ ಸಂಪರ್ಕ ಹೊಂದಿದ್ದ ಮಹರ್ಷಿ ವಾಲ್ಮೀಕಿ ಅವರಲ್ಲಿದ್ದ ಕವಿತ್ವ ಭಾವನೆಯಿಂದಾಗಿಯೇ ರಾಮಾಯಣ ಎಂಬ ಮಹಾಕಾವ್ಯ ರಚನೆಯಾಯಿತು ಎಂದು ವಾಲ್ಮೀಕಿ ಸಮುದಾಯದ ಮುಖಂಡ ಗೋಪಿನಾಥ್ ತಿಳಿಸಿದರು.

ತಾಲೂಕಿನ ಹೊಳವನಹಳ್ಳಿ ಗ್ರಾಮದಲ್ಲಿ ಮಹರ್ಷಿ ವಾಲ್ಮೀಕಿ ಜಯಂತಿ ಅಂಗವಾಗಿ ಬೇಡರ ಕಣ್ಣಪ್ಪ ದೇವಾಲಯದಿಂದ ವಾಲ್ಮೀಕಿ ವೃತ್ತದವರೆಗೆ ವಾಲ್ಮೀಕಿ ಸಮುದಾಯದ ನೂರಾರು ಮಹಿಳೆಯರು ಕಳಸ ಹೊತ್ತು ಮರೆವಣಿಗೆಯೊಂದಿಗೆ ಸಾಗಿ ಬಸ್ ನಿಲ್ದಾಣದಲ್ಲಿರುವ ವಾಲ್ಮೀಕಿ ಪುತ್ತಳಿಗೆ ಮಾಲಾರ್ಪಣೆ ಮಾಡಿ ಮಾತನಾಡಿದರು.ವಿಶ್ವಕ್ಕೆ ರಾಮಾಯಾಣ ಎಂಬ ಅತಿ ದೊಡ್ಡವಾದ ಕಾವ್ಯವನ್ನು ನೀಡಿದ್ದಾರೆ. ರಾಮಾಯಣದಲ್ಲಿ ಒಳಗೊಂಡಿರುವ ತತ್ವಾದರ್ಶ ಕೊಡುಗೆ ಅಪಾರವಾಗಿದ್ದು, ಅವರು ನೀಡಿರುವ ಆದರ್ಶ ವಿಚಾರ-ತತ್ವಾದರ್ಶಗಳು ನಮ್ಮ ದೇಶ ಮಾತ್ರವಲ್ಲದೇ ಮಲೇಶಿಯಾ, ಕಾಂಬೋಡಿಯಾ ಸೇರಿದಂತೆ ಬೇರೆ ಬೇರೆ ದೇಶಗಳಲ್ಲಿ ಪ್ರಚಲಿದಲ್ಲಿವೆ. ಜೊತೆಗೆ ಈಡಿ ವಿಶ್ವದಲ್ಲಿಯೇ ಈ ರೀತಿಯ ಕಾವ್ಯ ಇನ್ನೊಂದಿಲ್ಲ ಎಂದು ಸಾಬೀತುಪಡಿಸಲಾಗಿದ್ದು, ಎಲ್ಲರೂ ಸಹ ರಾಮಾಯಣದ ಮೂಲ ಆಶಯಕ್ಕೆ ತಲೆ ಬಾಗಿದ್ದಾರೆ. ಆದ್ದರಿಂದ ಸಮುದಾಯದ ಮುಖಂಡರು ಮತ್ತು ಮಹಿಳೆಯರು ಮಹರ್ಷಿ ವಾಲ್ಮೀಕಿ ಜಯಂತಿಯನ್ನು ಅರ್ಥಪೂರ್ಣವಾಗಿ ಆಚರಿಸಬೇಕು ಎಂದರು. ವಿಎಸ್‌ಎಸ್‌ಎನ್ ನಿರ್ದೇಶಕರಾದ ಸ್ವಾತಿ ಮಾತನಾಡಿ, ಮಹರ್ಷಿ ವಾಲ್ಮೀಕಿ ಜಯಂತಿಯನ್ನು ಪ್ರತಿಯೊಬ್ಬರು ಹಬ್ಬದ ರೀತಿಯಲ್ಲಿ ಆಚರಣೆ ಮಾಡಬೇಕು. ಹೊಳವನಹಳ್ಳಿ ಗ್ರಾಮದಲ್ಲಿ ಪ್ರತಿವರ್ಷ ವಿಜೃಂಭಣೆಯಿಂದ ಆಚರಿಸಿಕೊಂಡು ಬಂದಿದ್ದೇವೆ. ವಾಲ್ಮೀಕಿ ಜಯಂತಿ ಮನೆತನದ ಹಬ್ಬದಂತೆ ಮಹಿಳೆಯರು ಆಚರಣೆ ಮಾಡುತ್ತಿರುವುದು ಖುಷಿಯ ವಿಚಾರ ಎಂದು ಹೇಳಿದರು.

ಯುವ ಮುಖಂಡ ಪ್ರವೀಣ್ ಮಾತನಾಡಿ, ರಾಮಾಯಣ ಮನುಕುಲಕ್ಕೆ ಮಾರ್ಗದರ್ಶನ ನೀಡುವ ಗ್ರಂಥವಾಗಿದ್ದು, ಅದರಲ್ಲಿರುವ ಸಂದೇಶಗಳು ಎಲ್ಲ ಕಾಲಕ್ಕೂ ಪ್ರಸ್ತುತ. ಸಮಾಜದಲ್ಲಿ ಜನರು ಸಂಘಟಿತರಾಗಿ ಸಕಾಲಕ್ಕೂ ಮಹಾತ್ಮರ ಸ್ಮರಣೆ ಮಾಡಬೇಕು ಎಂದು ಹೇಳಿದರು.ಯುವ ಮುಖಂಡ ಕಿಶೋರ್ ಮಾತನಾಡಿ, ಇಡೀ ವಿಶ್ವಕ್ಕೆ ರಾಮಾಯಣದಂತಹ ಮಹಾಕಾವ್ಯ ಕೊಟ್ಟ ಮಹಾನ್ ದಾರ್ಶನಿಕ ಮಹರ್ಷಿ ವಾಲ್ಮೀಕಿ ಅವರು ಜೀವನ ಪ್ರತಿಯೊಬ್ಬರಿಗೂ ಪ್ರೇರಣೆಯಾಗಿದೆ ಎಂದು ಹೇಳಿದರು.ಈ ಸಂದರ್ಭದಲ್ಲಿ ಗ್ರಾ.ಪಂ ಅಧ್ಯಕ್ಷೆ ಸುಮಿತ್ರ ಉಮೇಶ್, ಸದಸ್ಯ ರಾಮಾಂಜಿನಯ್ಯ, ಮಂಜುನಾಥ್, ರವಿಕುಮಾರ್, ಕವಿತಮ್ಮ ಮಹಿಳಾ ಕಾಂಗ್ರೆಸ್ ಅಧ್ಯಕ್ಷೆ, ವಾಲ್ಮೀಕಿ ಸಂಘದ ಅಧ್ಯಕ್ಷ ಓಬಳಯ್ಯ, ಕಾರ್ಯದರ್ಶಿ ಜಯರಾಜು, ಉಪಾಧ್ಯಕ್ಷ ಮಾದಯ್ಯ, ಖಚಾಂಚಿ ರಂಗಯ್ಯ, ನಿರ್ದೇಶಕ ಎಚ್.ಪಿ ನರಸಿಂಹಮೂರ್ತಿ, ನಾಗರಾಜು, ರಾಜಣ್ಣ, ಶಿವರಾಜು, ಮುದ್ದಣ್ಣ, ಚಂದ್ರಪ್ಪ, ತಿಮ್ಮಯ್ಯ, ಯುವ ಮುಖಂಡ ಕಿಶೋರ್, ರಮೇಶ್, ಪ್ರವೀಣ್, ಶಿಂಗಾರ್, ಶಶಾಂಕ್, ಹರೀಶ್ ರಂಗಶಾಮಯ್ಯ, ಕಿಶೋರ್, ಮುದ್ದರಂಗಯ್ಯ, ವಿನೋದ್ ಕುಮಾರ್ ಸೇರಿದಂತೆ ಇತರರು ಇದ್ದರು.