ಸಾಮಾಜಿಕ ಜವಾಬ್ದಾರಿಯೊಂದಿಗೆ ಪತ್ರಿಕೋದ್ಯಮ ನಡೆಸುತ್ತಿರುವ ಮಲ್ನಾಡ್ ಮೆಹಬೂಬ್ ಅವರಂತಹ ಬರಹಗಾರರು ಸಮಾಜದ ದಿಕ್ಕು ತೋರಿಸುವ ದೀಪಗಳಾಗಿದ್ದಾರೆ. ನಮ್ಮ‌ ತಾಲೂಕಿನಲ್ಲಿ ಸಾಹಿತ್ಯ ಕೃಷಿ ಕಡಿಮೆ. ಇಂತಹ ಸಂದರ್ಭದಲ್ಲಿ ಪುಸ್ತಕ ಬಿಡುಗಡೆ ಮಾಡುತ್ತಿರುವುದು ಸಂತೋಷದ ವಿಷಯ. ನಾನು ಹೀಗಿದ್ದರೆ ಹೇಗಿರುತಿತ್ತು ಎಂಬ ಕಲ್ಪನಾ ಲೋಕದ ಸಿದ್ಧಾಂತದ ಪ್ರಪಂಚಕ್ಕೆ ಮಲ್ನಾಡ್ ಮೆಹಬೂಬ್ ಅವರ ನೀನಿಲ್ಲದ ಜಗತ್ತು ಹೇಗಿರುತಿತ್ತು ಪಸ್ತಕ ಸೇರ್ಪಡೆಯಾಗಿದೆ.

ಕನ್ನಡಪ್ರಭ ವಾರ್ತೆ ಸಕಲೇಶಪುರ ಲಯನ್ಸ್ ಮಂದಿರದಲ್ಲಿ ಕನ್ನಡ ಸಾಹಿತ್ಯ ಪರಿಷತ್ತು, ತಾಲೂಕು ಕಾರ್ಯನಿರತ ಪತ್ರಕರ್ತರ ಸಂಘ, ಡ್ರಗ್ಸ್ ಮುಕ್ತ ಸಕಲೇಶಪುರ ಆಂದೋಲನ ಹಾಗೂ ವಿವಿಧ ಸಂಘಸಂಸ್ಥೆಗಳ ಆಶ್ರಯದಲ್ಲಿ ಪತ್ರಕರ್ತ ಹಾಗೂ ಲೇಖಕ ಮಲ್ನಾಡ್ ಮೆಹಬೂಬ್ ಅವರ ಲೇಖನಗಳ ಸಂಕಲನ ‘ನೀ ಇಲ್ಲದ ಜಗತ್ತು ಹೇಗಿರುತ್ತಿತ್ತು?’ ಪುಸ್ತಕವನ್ನು ರಂಗಕರ್ಮಿ ಪ್ರಸಾದ್ ರಕ್ಷಿದಿ ಬಿಡುಗಡೆಗೊಳಿಸಿದರು.

ನಂತರ ಮಾತನಾಡಿ, ಸಾಮಾಜಿಕ ಜವಾಬ್ದಾರಿಯೊಂದಿಗೆ ಪತ್ರಿಕೋದ್ಯಮ ನಡೆಸುತ್ತಿರುವ ಮಲ್ನಾಡ್ ಮೆಹಬೂಬ್ ಅವರಂತಹ ಬರಹಗಾರರು ಸಮಾಜದ ದಿಕ್ಕು ತೋರಿಸುವ ದೀಪಗಳಾಗಿದ್ದಾರೆ. ನಮ್ಮ‌ ತಾಲೂಕಿನಲ್ಲಿ ಸಾಹಿತ್ಯ ಕೃಷಿ ಕಡಿಮೆ. ಇಂತಹ ಸಂದರ್ಭದಲ್ಲಿ ಪುಸ್ತಕ ಬಿಡುಗಡೆ ಮಾಡುತ್ತಿರುವುದು ಸಂತೋಷದ ವಿಷಯ. ನಾನು ಹೀಗಿದ್ದರೆ ಹೇಗಿರುತಿತ್ತು ಎಂಬ ಕಲ್ಪನಾ ಲೋಕದ ಸಿದ್ಧಾಂತದ ಪ್ರಪಂಚಕ್ಕೆ ಮಲ್ನಾಡ್ ಮೆಹಬೂಬ್ ಅವರ ನೀನಿಲ್ಲದ ಜಗತ್ತು ಹೇಗಿರುತಿತ್ತು ಪಸ್ತಕ ಸೇರ್ಪಡೆಯಾಗಿದೆ.ಈ ಪುಸ್ತಕವನ್ನು ಓದಿದ ಮೇಲೆ ನನಗನ್ನಿಸಿದ್ದು ಅವರು ಪ್ರಬುದ್ಧರಾಗಿದ್ದಾರೆ ಎಂಬುದಕ್ಕೆ ಸಂಕೇತವಾಗಿದೆ. ಈ ರೀತಿಯ ಬರವಣಿಗೆಯ ಪುಸ್ತಕ ಇದುವರೆಗು ಕನ್ನಡ ಸಾಹಿತ್ಯ ಲೋಕದಲ್ಲಿ ಬಂದಿಲ್ಲ .ಇದರ ಸಂಪೂರ್ಣ ಕ್ರೆಡಿಟ್ ಅವರಿಗೆ ಸಲ್ಲಬೇಕು ಎಂದು ಅಭಿಪ್ರಾಯಿಸಿದರು. ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಮಾಜಿ ಶಾಸಕರೂ ಡ್ರಗ್ಸ್ ಮುಕ್ತ ಭಾರತ ಆಂದೋಲನದ ಪ್ರಮುಖರಾದ ಎಚ್.ಎಂ. ವಿಶ್ವನಾಥ್ ಮಾತನಾಡಿ, “ಇಂದು ಸಮಾಜವನ್ನು ಪ್ರಶ್ನಿಸುವ, ಚಿಂತನೆಗೆ ಒತ್ತುವ ಸಾಹಿತ್ಯ ಅತ್ಯಂತ ಅಗತ್ಯ. ಮಲ್ನಾಡ್ ಮೆಹಬೂಬ್ ಅವರ ಬರಹಗಳು ಸಮಾಜವನ್ನು ಎಚ್ಚರಿಸುವ ಶಕ್ತಿಯನ್ನು ಹೊಂದಿವೆ. ಮೆಹಬೂಬ್ ಅವರು ಹೋರಾಟಕ್ಕೆ ಜೀವಂತಿಕೆ ಕೊಟ್ಟವರು. ಅವರ ತಂದೆ ರೆಹಮತುಲ್ಲ ಅವರು ಒಬ್ಬ ಒಳ್ಳೆಯ ನಾಯಕರಾಗಿದ್ದವರು. ಅವರಲ್ಲಿನ ಹಲವು ಗುಣಗಳು ರಕ್ತಗತವಾಗಿ ಬಳುವಳಿಯಾಗಿ ಬಂದಿದೆ. ಪುಸ್ತಕವನ್ನು ಹಣ ಕೊಟ್ಟು ಓದಿದರೆ ಮಾತ್ರ ಲೇಖಕರಿಗೆ ಖುಷಿಯಾಗುತ್ತದೆ. ಮತ್ತು ನಾವು ಅವರಿಗೆ ಸಲ್ಲಿಸುವ ಗೌರವ ಕೂಡ ಆಗಿದೆ ಎಂದರುಕಾರ್ಯಕ್ರಮದಲ್ಲಿ ಕಸಾಪ ಮಾಜಿ ಅಧ್ಯಕ್ಷ ಜೈಮಾರುತಿ ದೇವರಾಜ್, ಯೋಜನಾ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಸಯ್ಯದ್ ಮುಫೀಜ್ ,ಭೀಮ ವಿಜಯ ಪತ್ರಿಕೆಯ ಸಂಪಾದಕ ಹೆತ್ತೂರು ನಾಗರಾಜ್,ನಮ್ಮ ಹಾಸನ ಟಿವಿ ಮುಖ್ಯಸ್ಥ ತೌಫಿಕ್ ಅಹಮದ್, ಕನ್ನಡ ಸಾಹಿತ್ಯ ಪರಿಷತ್ತು ಅಧ್ಯಕ್ಷ ಶಾರದ ಗುರುಮೂರ್ತಿ, ಕಾರ್ಯನಿರತ ಪತ್ರಕರ್ತರ ಸಂಘದ ಅಧ್ಯಕ್ಷ ಜೈ ಭೀಮ್ ಮಂಜು, ಲೇಖಕ ಯೆಡೇಹಳ್ಳಿ ಆರ್. ಮಂಜುನಾಥ್, ಮುಸ್ಲಿಂ ಧರ್ಮ ಗುರು ಇಬ್ರಾಹಿಂ ಮುಸ್ಲಿಯಾರ್,ಡಾ. ಫಾದರ್ ಫ್ರಾನ್ಸಿಸ್ ಚಿರಯ್ಕಲ್ ಸೇರಿದಂತೆ ಹಲವು ಗಣ್ಯರು ಉಪಸ್ಥಿತರಿದ್ದರು.