ಕನ್ನಡಪ್ರಭವಾರ್ತೆ ತಿಪಟೂರು
ವಿದ್ಯಾರ್ಥಿಗಳಲ್ಲಿ ಶಿಕ್ಷಣದ ಜೊತೆ ಸಾಮಾಜಿಕ ಸೇವೆ, ರಾಷ್ಟ್ರೀಯ ಪ್ರೇಮ, ನಾಯಕತ್ವ ಗುಣ, ಧೈರ್ಯ ಮತ್ತು ಆತ್ಮವಿಶ್ವಾಸ ಬೆಳೆಸಲುಎನ್‌ಎಸ್‌ಎಸ್ ಉತ್ತಮ ವೇದಿಕೆಯಾಗಿದೆ ಎಂದು ಎಸ್‌ವಿಪಿ ಪದವಿಪೂರ್ವ ಕಾಲೇಜಿನ ಪ್ರಾಂಶುಪಾಲ ಕೆ.ಎನ್.ರೇಣುಕಯ್ಯ ತಿಳಿಸಿದರುಉನ್ನತ ಮತ್ತು ತಾಂತ್ರಿಕ ಶಿಕ್ಷಣ ಇಲಾಖೆ ಹಾಗೂ ತುಮಕೂರು ವಿಶ್ವವಿದ್ಯಾಲಯದ ಸಹಯೋಗದಲ್ಲಿ ನಗರದ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ಕ್ರೀಡೆ ಸಾಂಸ್ಕೃತಿಕ, ಎನ್‌ಎಸ್‌ಎಸ್, ಎನ್‌ಸಿಸಿ, ಯುವ ರೆಡ್‌ಕ್ರಾಸ್ ಇನ್ನಿತರ ಚಟುವಟಿಕೆಗಳ ಸಮಾರೋಪ ಸಮಾರಂಭ ಉದ್ಘಾಟಿಸಿ ಮಾತನಾಡಿದರು. ಯುವಶಕ್ತಿ ಪ್ರವಾಹ ಇದ್ದಂತೆ. ದೇಶದ ಯುವ ಶಕ್ತಿಯನ್ನು ಸದ್ಭಳಕೆ ಮಾಡಿಕೊಳ್ಳಬೇಕು ಎಂಬ ಸದುದ್ದೇಶದಿಂದ ಮಹಾತ್ಮ ಗಾಂಧೀಜಿ ಎನ್‌ಎಸ್‌ಎಸ್ ಪ್ರಾರಂಭಿಸಿದರು ಎಂದರು. ಯುವಕರು ಹಳ್ಳಿಗಳಿಗೆ ತೆರಳಿ ಅಲ್ಲಿ ಸ್ವಚ್ಛತೆ ಸೇರಿದಂತೆ ಅನೇಕ ಸೇವೆಗಳನ್ನು ಸಲ್ಲಿಸುತ್ತಿರುವುದು ದೇಶಸೇವೆಗೆ ಸಮಾನವಾಗಿದೆ. ನಗರದ ಸರಕಾರಿ ಪ್ರಥಮದರ್ಜೆ ಕಾಲೇಜು ರಾಜ್ಯದಲ್ಲಿ ಅತಿ ದೊಡ್ಡ ಪದವಿ ಕಾಲೇಜಾಗಿ ಹೆಸರು ಗಳಿಸಿದ್ದು ಪ್ರತಿವರ್ಷ ವಿದ್ಯಾರ್ಥಿಗಳ ಸಂಖ್ಯೆ ೩-೪ಸಾವಿರ ಇದ್ದು ರಾಜ್ಯದಲ್ಲಿಯೇ ದಾಖಲೆ ಪ್ರವೇಶಾತಿ ಪಡೆದ ಹೆಗ್ಗಳಿಕೆ ಹೊಂದಿದೆ. ಇಲ್ಲಿ ಶಿಕ್ಷಣದ ಜೊತೆ ಸಾಂಸ್ಕೃತಿಕ ಚಟುವಟಿಕೆಗಳು, ಸಾಮಾಜಿಕ ಕಾರ್ಯಗಳು, ಸೇವೆ ಎಲ್ಲವೂ ಒಟ್ಟಿಗೆ ನಡೆಯುತ್ತಿರುವುದು ಸಂತೋಷದ ವಿಷಯ ಎಂದು ಅಭಿಪ್ರಾಯಪಟ್ಟರು.ಸಾಹಿತಿ ಚಿಕ್ಕಮಗಳೂರಿನ ಚಟ್ನಳ್ಳಿ ಮಹೇಶ್ ಮಾತನಾಡಿ ಯುವಶಕ್ತಿ ರಾಷ್ಟ್ರದ ಸಂಪತ್ತು. ಯುವಶಕ್ತಿಯು ಸಮಾಜಕ್ಕೆ ವರವಾಗಬೇಕಾದರೆ ಸರಿಯಾದ ದಾರಿಯಲ್ಲಿ ನಡೆಯುವ ಮಾರ್ಗದರ್ಶನ ಅವಶ್ಯಕವಾಗಿದೆ. ಇಲ್ಲವಾದರೆ ಸಮಾಜಕ್ಕೆ ದುಸ್ವಪ್ನವಾಗುತ್ತದೆ. ಪ್ರತಿ ವಿದ್ಯಾರ್ಥಿಯಲ್ಲಿಯೂ ಅವರ ತಂದೆ-ತಾಯಿ ಪಡುವ ಕಷ್ಟದ ಅರಿವು ಪ್ರತಿ ಹೆಜ್ಜೆಯಲ್ಲಿಯೂ ಇರಬೇಕು. ಆಗ ಯಾರೂ ದಾರಿ ತಪ್ಪುವುದಿಲ್ಲ. ಜೊತೆಗೆ ಶಿಕ್ಷಣದ ಜೊತೆ ಸಾಹಿತ್ಯ ಓದಬೇಕು. ಕನಿಷ್ಠ ದಿನದ ಅರ್ಧ ಗಂಟೆಯಾದರೂ ಪಠ್ಯೇತರ ಸಾಹಿತ್ಯ ಓದಬೇಕು. ವೃತ್ತಪತ್ರಿಕೆಯಾದರೂ ಪ್ರತಿದಿನ ಓದಬೇಕು. ಓದುವುದರಲ್ಲಿ ಇರುವ ಸುಖವನ್ನು ಅನುಭವಿಸಬೇಕು ಎಂದರು.ಪ್ರಾAಶುಪಾಲ ಡಾ. ಶಶಿಕುಮಾರ್ ಎಚ್.ಸಿ, ಕನ್ನಡ ವಿಭಾಗದ ಸ್ಮಿತಾ ಎಚ್.ಎಸ್., ಗಣಕವಿಜ್ಞಾನ ವಿಭಾಗದ ಭಾವನ, ಆಂಗ್ಲ ವಿಭಾಗದ ಸುಭದ್ರಮ್ಮ ಸಮಾಜಶಾಸ್ತçದ ಸಯ್ಯದ್ ಪಾಷ ಇನ್ನಿತರರು ಉಪಸ್ಥಿತರಿದ್ದರು. ತೇಜಸ್ವಿನಿ ಜಿ.ಎಂ., ಮೋಹನ್‌ಕುಮಾರ್ ನಿರೂಪಿಸಿ, ಡಾ.ಅನುಪ್ರಸಾದ್ ವಂದಿಸಿದರು.