ಮಕ್ಕಳ ವ್ಯಕ್ತಿತ್ವ ವಿಕಸನಕ್ಕೆ ಪೂರಕ ರಂಗಭೂಮಿ

| Published : Mar 28 2025, 12:31 AM IST

ಮಕ್ಕಳ ವ್ಯಕ್ತಿತ್ವ ವಿಕಸನಕ್ಕೆ ಪೂರಕ ರಂಗಭೂಮಿ
Share this Article
  • FB
  • TW
  • Linkdin
  • Email

ಸಾರಾಂಶ

ಉತ್ತಮ ಭೋದನೆ ಮಾಡಲು ಪಠ್ಯ ಮತ್ತು ನಾಟಕದ ಪರಿಕಲ್ಪನೆಯ ಜ್ಞಾನ ಆಳವಾಗಿ ಇದ್ದಾಗ ಮಾತ್ರ ಸಮರ್ಥವಾಗಿ ಮಕ್ಕಳ ಆಳಕ್ಕೆ ಪಾಠ ಮಾಡಲು ಸಹಾಯಕವಾಗುತ್ತದೆ

ಧಾರವಾಡ: ರಂಗಭೂಮಿಯು ವ್ಯಕ್ತಿತ್ವದ ಎಲ್ಲ ಅವಶ್ಯಕತೆಗಳನ್ನು ಪೂರೈಸುವ ಒಂದು ಪ್ರಮುಖ ಕಲಾ ಪ್ರಕಾರ. ಬದುಕಿನ ಆಯಾಮಗಳನ್ನು ಮತ್ತು ಶಿಕ್ಷಣದ ಪರಿಣಾಮಕಾರಿ ಬೋಧನೆ ಮತ್ತು ಪರಿಹಾರಾತ್ಮಕ ಸಮಸ್ಯೆ ಪರಿಹರಿಸಲು ರಂಗಭೂಮಿ ಉತ್ತಮ ಮಾಧ್ಯಮವಾಗಿ ಕಾರ್ಯ ಮಾಡುತ್ತದೆ ಎಂದು ಸಂಘಟಕ ಮಾರ್ತಾಂಡಪ್ಪ ಕತ್ತಿ ಹೇಳಿದರು.

ಸಿದ್ದರಾಮೇಶ್ವರ ಶಿಕ್ಷಣ ಮಹಾವಿದ್ಯಾಲಯದಿಂದ 2ನೇ ವರ್ಷದ ಬಿಎಡ್ ಪ್ರಶಿಕ್ಷಣಾರ್ಥಿಗಳ ಪಠ್ಯಾಧಾರಿತ ಕಲೆ ಮತ್ತು ನಾಟಕೋತ್ಸವಕ್ಕೆ ಚಾಲನೆ ನೀಡಿದ ಅವರು, ರಂಗಭೂಮಿಯು ಮಕ್ಕಳ ವ್ಯಕ್ತಿತ್ವದ ವಿಕಸನಕ್ಕೆ ಪೂರಕ ಸಂಪರ್ಕ ಕಲೆಯಾಗಿದೆ.ಇದರ ಹಿನ್ನೆಲೆ ಪ್ರತಿಯೊಂದು ಹೆಜ್ಜೆಗೆ ಆಧಾರಸ್ಥಂಬವಾಗಿ ನಿಲ್ಲುತ್ತದೆ. ಹಾಗಾಗಿ ಶಿಕ್ಷಕರಾಗುವವರು ರಂಗಭೂಮಿಯ ಜ್ಞಾನದಿಂದ ಉತ್ತಮ ಶಿಕ್ಷಕರಾಗಬಹುದು ಎಂದು ಹೇಳಿದರು.

ಅಧ್ಯಕ್ಷತೆ ವಹಿಸಿದ್ದ ಕಾಲೇಜು ಪ್ರಾಚಾರ್ಯರಾದ ಡಾ. ಗಿರೀಜಾ ಹಿರೇಮಠ, ಉತ್ತಮ ಭೋದನೆ ಮಾಡಲು ಪಠ್ಯ ಮತ್ತು ನಾಟಕದ ಪರಿಕಲ್ಪನೆಯ ಜ್ಞಾನ ಆಳವಾಗಿ ಇದ್ದಾಗ ಮಾತ್ರ ಸಮರ್ಥವಾಗಿ ಮಕ್ಕಳ ಆಳಕ್ಕೆ ಪಾಠ ಮಾಡಲು ಸಹಾಯಕವಾಗುತ್ತದೆ ಎಂದು ಹೇಳಿದರು.

ಗಾಯಕ ಪ್ರೇಮಾನಂದ ಶಿಂದೆ ರಂಗಗೀತೆ ಪ್ರಸ್ತುತಪಡಿಸಿದರು. ಸಂಸ್ಥೆಯ ಕಾರ್ಯದರ್ಶಿ ಡಾ. ಕೆ.ಆರ್. ಹಿರೇಮಠ, ಉಪನ್ಯಾಸಕ ಎಸ್.ಎಂ. ಕೊಟಬಾಗಿ, ಗಿರೀಜಾ ಸುಂಕದ, ಉಮಾ ಮಠ ಇದ್ದರು. ವಿದ್ಯಾರ್ಥಿಗಳು ಒಟ್ಟು ಎಂಟು ತಂಡಗಳಲ್ಲಿ ಎಂಟು ನಾಟಕಗಳನ್ನು ಪ್ರದರ್ಶನ ನೀಡಿದರು.

ಉಪನ್ಯಾಸಕರಾದ ಜಯಶೀಲಾ ಜೆ.ಎಚ್.ಸ್ವಾಗತಿಸಿದರು. ಸಿದ್ದಮ್ಮ ದೊಡಮನಿ ವಂದಿಸಿದರು.