ರಂಗಭೂಮಿ ಜೀವನದ ಮೌಲ್ಯ ಹೇಳುವ ವಿಶ್ವವಿದ್ಯಾಲಯ: ಚಲನಚಿತ್ರ ನಟ ಮಂಡ್ಯ ರಮೇಶ್

| Published : Nov 28 2024, 12:35 AM IST

ರಂಗಭೂಮಿ ಜೀವನದ ಮೌಲ್ಯ ಹೇಳುವ ವಿಶ್ವವಿದ್ಯಾಲಯ: ಚಲನಚಿತ್ರ ನಟ ಮಂಡ್ಯ ರಮೇಶ್
Share this Article
  • FB
  • TW
  • Linkdin
  • Email

ಸಾರಾಂಶ

ಜೀವನದ ಎಲ್ಲಾ ಅಯಾಮದ ಮೌಲ್ಯಗಳನ್ನು ಕಲಿಸಿ, ಬದುಕಿನ ಶೈಲಿಯನ್ನೇ ಬದಲಿಸುವ ಏಕೈಕ ವಿಶ್ವವಿದ್ಯಾಲಯ ರಂಗಭೂಮಿ ಎಂದು ರಂಗಭೂಮಿ ಹಾಗೂ ಚಲನಚಿತ್ರ ನಟ ಮಂಡ್ಯ ರಮೇಶ್ ಹೇಳಿದರು. ಚಾಮರಾಜನಗರದಲ್ಲಿ ಮೂರು ದಿನಗಳ ರಂಗೋತ್ಸವ-2024ನ್ನು ಉದ್ಘಾಟಿಸಿ ಮಾತನಾಡಿದರು.

ಜೆಎಸ್‌ಎಸ್ ರಂಗೋತ್ಸವ-೨೪ಕ್ಕೆ ಚಾಲನೆ । ಪಬ್ಲಿಕ್‌ ಶಾಲೆಯ ಮಕ್ಕಳಿಂದ ಮಾಧ್ಯಮ ವ್ಯಾಯೋಗ ನಾಟಕ

ಕನ್ನಡಪ್ರಭ ವಾರ್ತೆ ಚಾಮರಾಜನಗರ

ಜೀವನದ ಎಲ್ಲಾ ಅಯಾಮದ ಮೌಲ್ಯಗಳನ್ನು ಕಲಿಸಿ, ಬದುಕಿನ ಶೈಲಿಯನ್ನೇ ಬದಲಿಸುವ ಏಕೈಕ ವಿಶ್ವವಿದ್ಯಾನಿಲು ರಂಗಭೂಮಿ ಎಂದು ರಂಗಭೂಮಿ ಹಾಗೂ ಚಲನಚಿತ್ರ ನಟ ಮಂಡ್ಯ ರಮೇಶ್ ಹೇಳಿದರು.

ಜೆಎಸ್‌ಎಸ್ ಮಹಾವಿದ್ಯಾಪೀಠ, ಜೆಎಸ್‌ಎಸ್ ಕಲಾ ಮಂಟಪ ಮೈಸೂರು ಮತ್ತು ಜೆಎಸ್‌ಎಸ್ ಶಿಕ್ಷಣ ಸಂಸ್ಥೆಗಳ ವತಿಯಿಂದ ನಗರದ ಡಾ. ರಾಜ್‌ಕುಮಾರ್ ರಂಗಮಂದಿರದಲ್ಲಿ ಹಮ್ಮಿಕೊಂಡಿದ್ದ ಮೂರು ದಿನಗಳ ರಂಗೋತ್ಸವ-2024ನ್ನು ಉದ್ಘಾಟಿಸಿ ಮಾತನಾಡಿದರು.

ಇಂತಹ ರಂಗ ಶಿಕ್ಷಣವನ್ನು ಜೆಎಸ್‌ಎಸ್ ವಿದ್ಯಾಪೀಠ ಮಾಡುತ್ತಿರುವುದು ನಮ್ಮ ಪುಣ್ಯ, ಪ್ರತಿಭಾನ್ವೇಷನೆಗೆ ಸೂಕ್ತ ವೇದಿಕೆಯನ್ನು ಕಲ್ಪಿಸಿಕೊಟ್ಟಿದೆ, ಜೀವನ ಶೈಲಿಯ ಬದಲಾವಣೆಯಲ್ಲಿ ರಂಗಶಿಕ್ಷಣ ಅತ್ಯಂತ ಪ್ರಮುಖ ಸ್ಥಾನವನ್ನು ವಹಿಸುತ್ತದೆ ಎಂದರು.

ರಂಗಭೂಮಿ ಭಾಷೆಯನ್ನು ತಿದ್ದಿ ತೀಡಿ ಪರಿಪಕ್ವತೆಯನ್ನು ನೀಡುತ್ತದೆ, ರಂಗಭೂಮಿಯಲ್ಲಿ ಮನುಷ್ಯ ಜೀವನದಲ್ಲಿ ಬರುವ ಎಲ್ಲಾ ಪಾತ್ರಗಳನ್ನು ನಟಿಸಿ ಅದರ ಆಳವನ್ನು ತಿಳಿಸುವ ಜೊತೆಗೆ ಭಾಷಾ ಕೌಶಲ್ಯವನ್ನು ಕಲಿಸಿ, ಘನತೆಯನ್ನು ಹೆಚ್ಚಿಸಿ ಸಮಾಜ ಗುರುತಿಸುವಂತೆ ಮಾಡುತ್ತದೆ ಎಂದು ಹೇಳಿದರು.

ಧರ್ಮ ನಿರಪೇಕ್ಷಿತೆ, ಜಾತ್ಯತೀತ ರಂಗ ಇದ್ದರೆ ಅದು ರಂಗಭೂಮಿ, ಇಲ್ಲಿ ಎಲ್ಲಾ ತರಹದ ಎಲ್ಲಾ ಧರ್ಮಗಳನ್ನು ಪಾತ್ರಗಳನ್ನು ಮಾಡಿ ಅದರ ಮೌಲ್ಯವನ್ನು ತಿಳಿಸುವುದರ ಜತೆಗೆ ೧೨ನೇ ಶತಮಾನದಲ್ಲಿ ಬಸವಣ್ಣ ಮತ್ತು ಶರಣರು ಕಂಡ ಒಟ್ಟಾಗಿ ಹೋಗುವ ಸಮಾನತೆಯನ್ನು ಕಲಿಸುತ್ತದೆ ಎಂದರು.

ಜಿಲ್ಲೆ ಕಲೆಗಳ ತವರೂರು, ಜಾನಪದ, ರಂಗಭೂಮಿ, ಸಂಸ್ಕೃತಿ, ಕಲೆಯನ್ನು ಸೇರಿದಂತೆ ವಿವಿಧ ಕಲೆಗಳ ತವರೂರು, ಮಹದೇಶ್ವರ, ಮಂಟೇಸ್ವಾಮಿ ಓಡಾಡಿದ ಪುಣ್ಯ ಭೂಮಿ, ಡಾ. ರಾಜ್‌ಕುಮಾರ್ ಅವರನ್ನು ಈ ನಾಡಿಗೆ ಕೊಟ್ಟ ನೆಲ, ರಂಗಭೂಮಿಯಿಂದ ಎಷ್ಟು ಎತ್ತರಕ್ಕೆ ಹೋಗಬಹುದು ಎಂಬುದಕ್ಕೆ ಡಾ.ರಾಜ್ ಅವರೇ ಸಾಕ್ಷಿ ಎಂದರು.

ಜಿಲ್ಲಾ ಸಮಾಜ ಕಲ್ಯಾಣ ಇಲಾಖೆ ಉಪ ನಿರ್ದೇಶಕ ಎನ್.ಮುನಿರಾಜು ಮಾತನಾಡಿ, ರಂಗಭೂಮಿ ಧೈರ್ಯವನ್ನು ತುಂಬುತ್ತದೆ, ರಂಗಭೂಮಿಯಲ್ಲಿ ತಾನು ಬೆಳೆಯುವುದರ ಜತೆ ಇತರರನ್ನು ಬೆಳಸಬಹದು, ಮೂರು ದಿನಗಳ ಈ ರಂಗೋತ್ಸವದಲ್ಲಿ ಪಾಲ್ಗೊಳ್ಳಿ, ನಾಟಕಗಳನ್ನು ನೋಡಿ, ಅದರ ಬಗ್ಗೆ ಚರ್ಚಿಸಿ, ನಾಟಕದಲ್ಲಿನ ಒಳ್ಳೆಯ ಅಂಶಗಳನ್ನು ಜೀವನದಲ್ಲಿ ಅಳವಡಿಸಿಕೊಳ್ಳಿ ಎಂದರು.

ನಾಟಕ ಅಕಾಡೆಮಿ ಪ್ರಶಸ್ತಿ ಪುರಸ್ಕೃತ ಸಿ.ಎಂ.ನರಸಿಂಹಮೂರ್ತಿ, ರಂಗೋತ್ಸವದ ಸಂಚಾಲಕ ಚಂದ್ರಶೇಖರ್ ಹೆಗ್ಗೋಠಾರ, ಪ್ರಾಂಶುಪಾಲ ಡಾ.ಮಹದೇವಸ್ವಾಮಿ, ಸಾರ್ವಜನಿಕ ಸಂಪರ್ಕಾಧಿಕಾರಿ ಆರ್.ಎಂ.ಸ್ವಾಮಿ ಇದ್ದರು.

ಸಹಾಯಕ ಪ್ರಾಧ್ಯಾಪಕಿ ಡಾ.ಎ.ಆರ್.ಸುಷ್ಮಾ ಸ್ವಾಗತಿಸಿ, ಜಮುನಾ ವಂದಿಸಿದರು. ಕೆ.ಎಸ್.ಅರುಣಾಶ್ರೀ ನಿರೂಪಿಸಿದರು. ಮೈಸೂರು ಜೆಎಸ್‌ಎಸ್ ಪಬ್ಲಿಕ್ ಶಾಲೆಯ ವಿದ್ಯಾರ್ಥಿಗಳಿಂದ ಮಾಧ್ಯಮ ವ್ಯಾಯೋಗ ನಾಟಕ ಪ್ರದರ್ಶನಗೊಂಡಿತು.