ಮೊಬೈಲ್ ಅಂಗಡಿಯಲ್ಲಿ ಕಳ್ಳತನ

| Published : Feb 02 2025, 01:02 AM IST

ಸಾರಾಂಶ

ತಿಪಟೂರು : ನಗರದ ಬಿ.ಎಚ್‌ ರಸ್ತೆಯ ಸಿ.ಕೆ ಮೊಬೈಲ್ ಸೇಲ್ಸ್ ಮತ್ತು ಸರ್ವೀಸ್ ಸೆಂಟರ್‌ನ ಬೀಗ ಮುರಿದು ಸಾವಿರಾರು ರು. ಮೌಲ್ಯದ ಮೊಬೈಲ್‌ ದೋಚಿ ಪರಾರಿಯಾದ ಘಟನೆ ಶುಕ್ರವಾರ ರಾತ್ರಿ ನಡೆದಿದೆ.

ತಿಪಟೂರು : ನಗರದ ಬಿ.ಎಚ್‌ ರಸ್ತೆಯ ಸಿ.ಕೆ ಮೊಬೈಲ್ ಸೇಲ್ಸ್ ಮತ್ತು ಸರ್ವೀಸ್ ಸೆಂಟರ್‌ನ ಬೀಗ ಮುರಿದು ಸಾವಿರಾರು ರು. ಮೌಲ್ಯದ ಮೊಬೈಲ್‌ ದೋಚಿ ಪರಾರಿಯಾದ ಘಟನೆ ಶುಕ್ರವಾರ ರಾತ್ರಿ ನಡೆದಿದೆ. ಕೇಶವ ಮೂರ್ತಿ ಎಂಬುವವರಿಗೆ ಸೇರಿದ ಅಂಗಡಿಯ ಬೀಗ ಮುರಿದು ಒಳನುಗ್ಗಿರುವ ಕಳ್ಳರು ಅಂಗಡಿಯಲ್ಲಿದ್ದ ವಿವಿಧ ಕಂಪನಿಗಳ ಮೊಬೈಲ್‌ಗಳು ಹಾಗೂ ಗಲ್ಲಾಪೆಟ್ಟಿಗೆಯಲ್ಲಿದ್ದ ಹಣ ದೋಚಿ ಪರಾರಿಯಾಗಿದ್ದಾರೆ. ನಗರ ಪೊಲೀಸ್ ಠಾಣೆ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದು ತನಿಖೆ ಕೈಗೆತ್ತಿಕೊಂಡಿದ್ದಾರೆ. ಇತ್ತೀಚಿನ ದಿನಗಳಲ್ಲಿ ನಗರದಲ್ಲಿ ಹಾಡುಹಗಲೆ ಕಳ್ಳತನ, ಸರಗಳ್ಳತನಗಳು ಹೆಚ್ಚುತ್ತಿದ್ದು ಸಾರ್ವಜನಿಕರಲ್ಲಿ ಆತಂಕ ಉಂಟುಮಾಡಿದ್ದು ಪೊಲೀಸ್ ಇಲಾಖೆಯ ವೈಫಲ್ಯದ ಬಗ್ಗೆಯೂ ಸಾರ್ವಜನಿಕ ವಲಯದಲ್ಲಿ ಆಕ್ರೋಶ ವ್ಯಕ್ತವಾಗುತ್ತಿದೆ.