ಸಾರಾಂಶ
ಗ್ರಾಮದಲ್ಲೆಲ್ಲಾ ಮಿಕ್ಸಿ ಮಾರಾಟ ಮಾಡುವ ನೆಪದಲ್ಲಿ ತಿರುಗಾಡಿ ಬೀಗ ಹಾಕಿರುವ ಮನೆಗಳನ್ನು ಗಮನಿಸಿರುವ ಕಳ್ಳರು, ರಾತ್ರಿ ಎಂಟು ಮನೆಗಳಲ್ಲಿ ಕಳ್ಳತನ ಮಾಡಿ ನಗದು, ಚಿನ್ನಾಭರಣ ದೋಚಿ ಪರಾರಿಯಾಗಿದ್ದಾರೆ. ಕಳೆದ ಒಂದು ವಾರದ ಹಿಂದೆ ರಂಗನಾಯಕನ ಕೊಪ್ಪಲು ಗ್ರಾಮದಲ್ಲಿ ಡಕಾಯಿತರು ಹಾಡುಹಗಲೇ ಮನೆ ದರೋಡೆ ಮಾಡಿದ ಘಟನೆ ಅರಸೀಕೆರೆ ತಾಲೂಕಿನ ದುಮ್ಮೇನಹಳ್ಳಿ ಗ್ರಾಮದಲ್ಲಿ ನಡೆದಿದೆ. ಮನೆ ದರೋಡೆ ಮಾಡಿ ಮೂವರು ಚೋರರು ಪರಾರಿಯಾಗುತ್ತಿದ್ದ ದೃಶ್ಯ ಸಿಸಿ ಕ್ಯಾಮೆರಾದಲ್ಲಿ ಸೆರೆಯಾಗಿದೆ. ಸ್ಥಳಕ್ಕೆ ಅರಸೀಕೆರೆ ಗ್ರಾಮಾಂತರ ಪೊಲೀಸರು ಭೇಟಿ ನೀಡಿ ಪರಿಶೀಲಿಸಿದ್ದು, ಕಳವು ಪ್ರಕರಣ ದಾಖಲಾಗಿದೆ.
ಕನ್ನಡಪ್ರಭ ವಾರ್ತೆ ಹಾಸನ
500 ರುಪಾಯಿಗೆ ಹೊಸ ಮಿಕ್ಸಿ ಮಾರಾಟದ ನೆಪದಲ್ಲಿ ಗ್ರಾಮಕ್ಕೆ ಬಂದಿರುವ ಮೂವರು ಚೋರರು, ಒಂದೇ ದಿನ 8 ಮನೆಗಳಲ್ಲಿ ಕಳ್ಳತನ ಮಾಡಿರುವ ಘಟನೆ ಜಿಲ್ಲೆಯ ಅರಸೀಕೆರೆ ತಾಲೂಕಿನ ದುಮ್ಮೇನಹಳ್ಳಿ ಗ್ರಾಮದಲ್ಲಿ ನಡೆದಿದೆ.ಗ್ರಾಮದಲ್ಲೆಲ್ಲಾ ಮಿಕ್ಸಿ ಮಾರಾಟ ಮಾಡುವ ನೆಪದಲ್ಲಿ ತಿರುಗಾಡಿ ಬೀಗ ಹಾಕಿರುವ ಮನೆಗಳನ್ನು ಗಮನಿಸಿರುವ ಕಳ್ಳರು, ರಾತ್ರಿ ಎಂಟು ಮನೆಗಳಲ್ಲಿ ಕಳ್ಳತನ ಮಾಡಿ ನಗದು, ಚಿನ್ನಾಭರಣ ದೋಚಿ ಪರಾರಿಯಾಗಿದ್ದಾರೆ. ಕಳೆದ ಒಂದು ವಾರದ ಹಿಂದೆ ರಂಗನಾಯಕನ ಕೊಪ್ಪಲು ಗ್ರಾಮದಲ್ಲಿ ಡಕಾಯಿತರು ಹಾಡುಹಗಲೇ ಮನೆ ದರೋಡೆ ಮಾಡಿದ್ದರು.
ಮನೆ ದರೋಡೆ ಮಾಡಿ ಮೂವರು ಚೋರರು ಪರಾರಿಯಾಗುತ್ತಿದ್ದ ದೃಶ್ಯ ಸಿಸಿ ಕ್ಯಾಮೆರಾದಲ್ಲಿ ಸೆರೆಯಾಗಿದೆ. ಸ್ಥಳಕ್ಕೆ ಅರಸೀಕೆರೆ ಗ್ರಾಮಾಂತರ ಪೊಲೀಸರು ಭೇಟಿ ನೀಡಿ ಪರಿಶೀಲಿಸಿದ್ದು, ಕಳವು ಪ್ರಕರಣ ದಾಖಲಾಗಿದೆ.