ಸಾರಾಂಶ
ಸಿಂಧನೂರು ತಾಲೂಕಿನ ಗೊರೇಬಾಳ ಕ್ಯಾಂಪಿನಲ್ಲಿ ಮೂರು ದೇವಸ್ಥಾನಗಳಲ್ಲಿ ಕಳ್ಳತನ ನಡೆದ ಹಿನ್ನೆಲೆಯಲ್ಲಿ ರಾಯಚೂರು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ನಿಖಿಲ್ ಬಿ ಅವರು ಮಂಗಳವಾರ ಭೇಟಿ ನೀಡಿ ಪರಿಶೀಲಿಸಿದರು
ಸಿಂಧನೂರು: ತಾಲೂಕಿನ ಗೊರೇಬಾಳ ಕ್ಯಾಂಪಿನಲ್ಲಿ ಮೂರು ದೇವಸ್ಥಾನಗಳಲ್ಲಿ ಕಳ್ಳತನ ನಡೆದ ಹಿನ್ನೆಲೆಯಲ್ಲಿ ರಾಯಚೂರು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ನಿಖಿಲ್ ಬಿ ಅವರು ಮಂಗಳವಾರ ಭೇಟಿ ನೀಡಿ ಪರಿಶೀಲಿಸಿದರು.ಕ್ಯಾಂಪಿನ ಸೀತಾ ರಾಮಾಂಜನೇಯ ದೇವಸ್ಥಾನ, ಆಂಜನೇಯ ದೇವಸ್ಥಾನ, ತಾಯಮ್ಮ ದೇವಸ್ಥಾನ ಹಾಗೂ ಮರಳ ಸಿದ್ದೇಶ್ವರ ಮಠದಲ್ಲಿ ಈಚೆಗೆ ಕಳ್ಳತನವಾಗಿರುವುದರಿಂದ ಜನರು ಆತಂಕಕ್ಕೆ ಒಳಗಾಗಿದ್ದಾರೆ. ಈ ಕುರಿತು ಗ್ರಾಮೀಣ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಲಾಗಿತ್ತು.
ಇದರಿಂದ ಗೊರೇಬಾಳ ಕ್ಯಾಂಪಿಗೆ ಆಗಮಿಸಿ ಕಳ್ಳತನವಾಗಿರುವ ದೇವಸ್ಥಾನಗಳು ಹಾಗೂ ಮಠವನ್ನು ಪರಿಶೀಲಿಸಿ ಗ್ರಾಮಸ್ಥರಿಂದ ಮಾಹಿತಿ ಪಡೆದ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ನಿಖಿಲ್ ಬಿ ಅವರು ಕಳ್ಳತನದ ಆರೋಪಿಗಳ ಪತ್ತೆಗಾಗಿ ಈಗಾಗಲೇ ಮೂರು ತಂಡಗಳನ್ನು ರಚಿಸಲಾಗಿದ್ದು, ಶೀಘ್ರದಲ್ಲಿ ಕಳ್ಳರನ್ನು ಬಂಧಿಸಲಾಗುವುದು. ಹಾಗಾಗಿಯೂ ಗ್ರಾಮಸ್ಥರು ಆದಷ್ಟು ಎಚ್ಚರದಿಂದ ಇರಬೇಕು. ಗ್ರಾಮಸ್ಥರು ತಂಡ ರಚಿಸಿಕೊಂಡು ಹೆಚ್ಚಿನ ಅವಧಿವರೆಗೆ ಚಲನವಲದ ಮೇಲೆ ನಿಗಾವಹಿಸಬೇಕು. ಯಾವುದೇ ಸಂಶಯ, ಸುಳಿವು ಕಂಡು ಬಂದರೆ ೧೧೨ಗೆ ಸಂಪರ್ಕಿಸಿ ಮಾಹಿತಿ ನೀಡಬೇಕು ಎಂದು ತಿಳಿಸಿದರು.ಡಿವೈಎಸ್‌ಪಿ ಎಸ್.ಬಿ.ತಳವಾರ, ಗ್ರಾಮೀಣ ಪೊಲೀಸ್ ಠಾಣೆಯ ಸಬ್‌ಇನ್ಸ್ಪೆಕ್ಟರ್ ಮಹ್ಮದ್ ಇಸಾಕ್ ಸೇರಿದಂತೆ ಸಿಬ್ಬಂದಿ, ಕ್ಯಾಂಪಿನ ಮುಖಂಡರು ಇದ್ದರು.