ಕಳ್ಳತನ, ದರೋಡೆ ಪ್ರಕರಣ : ಮಾಹಿತಿ ಕಲೆಹಾಕಿದ ಡಿವೈಎಸ್ಪಿ

| Published : Mar 25 2025, 12:50 AM IST

ಕಳ್ಳತನ, ದರೋಡೆ ಪ್ರಕರಣ : ಮಾಹಿತಿ ಕಲೆಹಾಕಿದ ಡಿವೈಎಸ್ಪಿ
Share this Article
  • FB
  • TW
  • Linkdin
  • Email

ಸಾರಾಂಶ

ಪಟ್ಟಣದ ಡಿವೈಎಸ್ಪಿ ಕಚೇರಿ ಆವರಣದಲ್ಲಿ ಕಳ್ಳತನ ಹಾಗೂ ದರೋಡೆ (ಎಂಓಬಿ) ಆರೋಪದ ಹಳೆ ಪ್ರಕರಣಗಳಲ್ಲಿ ಭಾಗಿಯಾಗಿದ್ದವರನ್ನು ಠಾಣೆಗೆ ಕರೆಸಿ ಡಿವೈಎಸ್ಪಿ ಶಾಂತ ಮಲ್ಲಪ್ಪ ಅವರು ಮಾಹಿತಿ ಕಲೆ ಹಾಕಿ ಪರಿಶೀಲಿಸಿ, ಅಗತ್ಯ ಸಲಹೆ ಸೂಚನೆ ನೀಡುವ ಜೊತೆಗೆ ಎಚ್ಚರಿಕೆ ನೀಡಿದರು.

ಕನ್ನಡಪ್ರಭ ವಾರ್ತೆ ಶ್ರೀರಂಗಪಟ್ಟಣ

ಪಟ್ಟಣದ ಡಿವೈಎಸ್ಪಿ ಕಚೇರಿ ಆವರಣದಲ್ಲಿ ಕಳ್ಳತನ ಹಾಗೂ ದರೋಡೆ (ಎಂಓಬಿ) ಆರೋಪದ ಹಳೆ ಪ್ರಕರಣಗಳಲ್ಲಿ ಭಾಗಿಯಾಗಿದ್ದವರನ್ನು ಠಾಣೆಗೆ ಕರೆಸಿ ಡಿವೈಎಸ್ಪಿ ಶಾಂತ ಮಲ್ಲಪ್ಪ ಅವರು ಮಾಹಿತಿ ಕಲೆ ಹಾಕಿ ಪರಿಶೀಲಿಸಿ, ಅಗತ್ಯ ಸಲಹೆ ಸೂಚನೆ ನೀಡುವ ಜೊತೆಗೆ ಎಚ್ಚರಿಕೆ ನೀಡಿದರು.

ಶ್ರೀರಂಗಪಟ್ಟಣ ಹಾಗೂ ಪಾಂಡವಪುರ ವ್ಯಾಪ್ತಿಯ 6 ಠಾಣೆಗಳಲ್ಲಿನ ಪ್ರಕರಣಗಳಲ್ಲಿ ಭಾಗಿಯಾಗಿದ್ದ, 80 ಆರೋಪಿಗಳು ಸಭೆಯಲ್ಲಿದ್ದರು. ಆಯಾ ಠಾಣೆ ಸಿಪಿಐ, ಎಸ್‌ಐ ಸೇರಿದಂತೆ ಇತರ ಪೊಲೀಸ್ ಸಿಬ್ಬಂದಿ ಹಾಜರಿದ್ದು, ಕಳ್ಳತನ ಪ್ರಕರಣಗಳ ಆರೋಪಿಗಳ ದಿನಚರಿ ಮಾಹಿತಿಗಳನ್ನು ಪ್ರತ್ಯೇಕವಾಗಿ ಡಿವೈಎಸ್ಪಿ ಅವರ ಗಮನಕ್ಕೆ ತಂದರು.

ಆರೋಪಿಗಳ ಮಾಹಿತಿಗಳನ್ನು ಪಡೆದ ಡಿವೈಎಸ್ಪಿ ಶಾಂತ ಮಲ್ಲಪ್ಪ ಮಾತನಾಡಿ, ಕಳ್ಳತನ ಪ್ರಕರಣಗಳಲ್ಲಿ ಭಾಗಿಯಾಗಿ ನ್ಯಾಯಾಲಯದಲ್ಲಿ ಪ್ರಕರಣ ಮುಕ್ತವಾಗಿದ್ದರೂ, ನಿಮ್ಮ ದಿನಚರಿಗಳ ಬಗ್ಗೆ ಪೊಲೀಸರು ಗಮನಹರಿಸುತ್ತಿದ್ದಾರೆ ಎಂದರು.

ಕೆಲವು ಆರೋಪಿಗಳ ಪ್ರಕರಣಗಳು ನ್ಯಾಯಾಲಯದಲ್ಲಿ ಚಾಲ್ತಿಯಲ್ಲಿದ್ದರೂ ಅವರನ್ನು ಸಹ ಪೊಲೀಸರು ಗಮನದಲ್ಲಿರಿಸಿ ಅವರ ನಡುವಳಿಕೆಗಳ ಕುರಿತು ಮಾಹಿತಿಗಳ ಪಡೆಯಲಾಗಿದೆ. ಹಾಗಾಗಿ ಆರೋಪಿಗಳು ಜಾಗೃತರಾಗಿರಬೇಕು ಎಂದು ಎಚ್ಚರಿಸಿದರು.

ಕಳೆದ 7 ವರ್ಷದಿಂದ ಉತ್ತಮ ನಡಾವಳಿಗಳಿವೆ. ಜೊತೆಗೆ ಯಾವುದೇ ಪ್ರಕರಣದಲ್ಲಿ ಭಾಗಿಯಾಗದವರನ್ನು ಆರೋಪದಿಂದ ಮುಕ್ತವಾಗಲು ಸಹಕರಿಸಲಾಗುತ್ತದೆ. ಅವರ ಬಗೆಗಿನ ಚಲನವಲನಗಳ ಕುರಿತು ಮಾಹಿತಿಗಳನ್ನು ವರದಿ ಮಾಡಿ ಹಿರಿಯ ಅಧಿಕಾರಿಗಳಿಗೆ ಕಳುಹಿಸಲಾಗುವುದು. ತಾವು ಉತ್ತಮ ಭವಿಷ್ಯ ರೂಪಿಸಿಕೊಳ್ಳಲು ಅವಕಾಶವಿದೆ. ಯಾವುದೇ ಪ್ರಕರಣಗಳನ್ನು ಭಾಗಿಯಾಗದಂತೆ ಎಚ್ಚರ ವಹಿಸಬೇಕು ಎಂದು ಸಲಹೆ ಸೂಚನೆಗಳನ್ನು ನೀಡಿ ಎಚ್ಚರಿಸಿದರು.

ಪೊಲೀಸ್ ಇನ್ಸ್‌ಪೆಕ್ಟರ್‌ಗಳಾದ ಪುನೀತ್, ಬಿ.ಜಿ. ಕುಮಾರ್, ಪ್ರಕಾಶ್ ಸೇರಿದಂತೆ ಪಾಂಡವಪುರ ಹಾಗೂ ಶ್ರೀರಂಗಪಟ್ಟಣ ಪೊಲೀಸ್ ಸಿಬ್ಬಂದಿ ಹಾಜರಿದ್ದರು.