ಸಾರಾಂಶ
ಕೊಪ್ಪಳ ಜಿಲ್ಲೆಯ ವಿವಿಧೆಡೆ ಕಳ್ಳತನ ಮಾಡಿದ ಕಳ್ಳರನ್ನು ಬಂಧಿಸಿ ಕಳ್ಳತನದ ಹಣ, ಬಂಗಾರವನ್ನು ಪೊಲೀಸರು ವಶಪಡಿಸಿಕೊಂಡಿದ್ದಾರೆ.
ಕನ್ನಡಪ್ರಭ ವಾರ್ತೆ ಕೊಪ್ಪಳ
ಜಿಲ್ಲೆಯ ಗಂಗಾವತಿ ತಾಲೂಕಿನ ಶ್ರೀರಾಮನಗರದಲ್ಲಿ ನಿವೃತ್ತ ಬ್ಯಾಂಕ್ ಅಧಿಕಾರಿ ಕೃಷ್ಣಮೂರ್ತಿಯವರ ಮನೆಯಲ್ಲಿ ₹20 ಲಕ್ಷ,ಇದೇ ಗ್ರಾಮದ ಎರಡು ಪ್ರಕರಣಗಳಲ್ಲಿ ಭಾಗಿಯಾಗಿದ್ದ ಹೈದ್ರಾಬಾದ್ ಮೂಲದ ರಹಿಮ್ ಮುಸ್ತಾಫನನ್ನು ಪೊಲೀಸರು ಬಂಧಿಸಿದ್ದಾರೆ. ಬಂಧಿತನಿಂದ ₹17 ಲಕ್ಷ ನಗದು, ಬೆಳ್ಳಿ-ಬಂಗಾರದ ಆಭರಣ ವಶಪಡಿಸಿಕೊಂಡಿದ್ದಾರೆ.ಗಂಗಾವತಿ ನಗರದಲ್ಲಿ ಎನ್. ವೆಂಕೋಬಾರ ಮನೆಯಲ್ಲಿ ₹2.20 ಲಕ್ಷ ನಗದು, 16 ಗ್ರಾಂ ಬಂಗಾರ, 180 ಗ್ರಾಂ ಬೆಳ್ಳಿ ಆಭರಣ ಕಳ್ಳತನವಾಗಿತ್ತು.
ಪ್ರಕರಣದ ಬೆನ್ನಟ್ಟಿದ ಪೊಲೀಸರಿಗೆ ಕನಕಗಿರಿಯ ಹನುಮೇಶ ಭಜಂತ್ರಿ ಎಂಬುವರು ಕಳ್ಳತನ ಮಾಡಿದ್ದು ಪತ್ತೆ ಆಗಿದೆ. ಕಳ್ಳನನ್ನು ಬಂಧಿಸಿದ್ದಾರೆ. ಈತ ಬಾದಾಮಿ ಹಾಗೂ ಹಾವೇರಿ ಜಿಲ್ಲೆಯ ಸವಣೂರಿನಲ್ಲಿ ಒಟ್ಟು 4 ಕಳ್ಳತನ ಪ್ರಕರಣದಲ್ಲಿ ಭಾಗಿಯಾಗಿದ್ದ ಎಂಬ ಮಾಹಿತಿ ಇದೆ. ಈ ಬಂಧಿತನಿಂದ ₹9.10 ಲಕ್ಷ ನಗದು ವಶ ಮಾಡಿಕೊಂಡಿದ್ದಾರೆ.ಕುಷ್ಟಗಿ ಪಟ್ಟಣ ಮಾರುತಿ ಸರ್ಕಲ್ ಕೋರಾ ಎಲೆಕ್ಟ್ರಾನಿಕ್ ನಲ್ಲಿ 15.73 ಲಕ್ಷ ಮೌಲ್ಯದ ಮೊಬೈಲ್ ಕಳ್ಳತನ
ಕಳ್ಳತನದ ಪ್ರಕರಣದಲ್ಲಿ ಭಾಗಿಯಾಗಿದ್ದ ಬೆಂಗಳೂರಿನ ಸಲ್ಮಾನ್ ಹಾಗೂ ಸೈಯದ್ ನದೀಮರನ್ನು ಪೊಲೀಸರು ಬಂಧಿಸಿದ್ದಾರೆ. ಬಂಧಿತರಿಂದ ಒಟ್ಟು ₹7.67 ಲಕ್ಷ ಮೌಲ್ಯದ ಮೊಬೈಲ್ ವಶ ಮಾಡಿಕೊಂಡಿದ್ದಾರೆ.ಕುಷ್ಟಗಿ ತಾಲೂಕಿನ ಶಿರಗುಂಪಿಯಲ್ಲಿ ಮನೆ ಬಾಗಿಲು ಮುರಿದು ಹನುಮವ್ವ ಎಂಬವರ ಮನೆ ಕಳ್ಳತನ ಮಾಡಿ
₹2.20 ಲಕ್ಷದ ಆಭರಣ, ₹50 ಸಾವಿರ ನಗದು ದೋಚಿದ್ದ ಮಸ್ತಾನ್‌ನನ್ನು ಬಂಧಿಸಿ ₹40 ಗ್ರಾಂ ಬಂಗಾರ ವಶ ಪಡಿಸಿಕೊಂಡಿದ್ದಾರೆ.ಪ್ರಕರಣ ಭೇಧಿಸಿ ಕಳ್ಳರ ಪತ್ತೆಗಾಗಿ ಶ್ರಮಿಸಿದ ಪೊಲೀಸರನ್ನು ಕೊಪ್ಪಳ ಎಸ್ಪಿ ಡಾ. ರಾಮ್ ಎಲ್. ಅರಿಸಿದ್ದಿ ಪ್ರಶಂಸಿಸಿದ್ದಾರೆ.