ಸಾರಾಂಶ
ಕನ್ನಡಪ್ರಭ ವಾರ್ತೆ ನಂಜನಗೂಡುನಂಜನಗೂಡಿನ ತಾಲೂಕು ವ್ಯವಸಾಯ ಉತ್ಪನ್ನ ಮಾರಾಟ ಸಹಕಾರ ಸಂಘದ ಚುನಾವಣೆಯಲ್ಲಿ ಕುರಹಟ್ಟಿ ಕೆಜಿ ಮಹೇಶ್ ತಂಡದ ಎಲ್ಲಾ ಕಾಂಗ್ರೆಸ್ ಅಭ್ಯರ್ಥಿಗಳು ಮುಂಚೂಣಿ ಸಾಧಿಸಿದ್ದಾರೆ.ನಂಜನಗೂಡು ಟಿಎಪಿಸಿಎಂಎಸ್ ನಲ್ಲಿ ಒಟ್ಟಾರೆ 1012 ಮತಗಳಿದ್ದು ಸರ್ಕಾರದ ನಿಯಮಾವಳಿಯಂತೆ ಸಂಘದ ಜೊತೆಗೆ ವ್ಯವಹಾರ ನಡೆಸಲಾಗಿದ್ದ 412 ಜನರಿಗೆ ಮಾತ್ರ ಚುನಾವಣಾ ಪ್ರಕ್ರಿಯೆಯಲ್ಲಿ ಮತದಾನ ಮಾಡಲು ಅವಕಾಶ ದೊರಕಿತ್ತು. ಇನ್ನು 600 ಮಂದಿಗೆ ಚುನಾವಣೆ ಪ್ರಕ್ರಿಯೆಯಲ್ಲಿ ಭಾಗವಹಿಸಲು ಅವಕಾಶ ದೊರಕಿರಲಿಲ್ಲ. 600 ಜನರು ಮತದಾನ ನಡೆಸಲು ಅವಕಾಶ ದೊರಕಿಸಿ ಕೊಡುವಂತೆ ಹೈಕೋರ್ಟ್ ಮೆಟ್ಟಿಲೇರಿದ್ದರು. ಹೈಕೋರ್ಟ್ ಅನುಮತಿ ಮೇರೆಗೆ ಒಟ್ಟು 1012 ಮತದಾರರು ಮತದಾನ ಪ್ರಕ್ರಿಯೆಯಲ್ಲಿ ಭಾಗಿಯಾಗಿದ್ದರು.ಆದರೆ ಇನ್ನೂ ಕೂಡ ಅವರಿಗೆ ಅರ್ಹ ಮತದಾರರೆಂದು ಹೈಕೋರ್ಟ್ ಆದೇಶ ಹೊರ ಬಂದಿಲ್ಲ. ಆದ ಕಾರಣ 412 ಮತಗಳ ಎಣಿಕೆ ಕಾರ್ಯಗಳನ್ನು ನಡೆಸಲಾಯಿತು. ಉಳಿದ 600 ಮತಗಳನ್ನು ಹೈಕೋರ್ಟ್ ಆದೇಶದ ನಂತರ ಎಣಿಕೆ ಕಾರ್ಯ ನಡೆಸಿ ಫಲಿತಾಂಶ ಪ್ರಕಟಣೆ ಮಾಡಲಾಗುವುದು ಎಂದು ತಹಸೀಲ್ದಾರ್ ಶಿವಕುಮಾರ್ ಕಾಸ್ನೂರ್ ಹೇಳಿದರು. ಎಣಿಕೆಯಾದ 412 ಮತಗಳ ಪೈಕಿ ಕಾಂಗ್ರೆಸ್ ಪಕ್ಷದ ಬೆಂಬಲಿತ ಅಭ್ಯರ್ಥಿ ಬಿಸಿಎಂ ( ಬಿ) ಇಂದ ಸ್ಪರ್ಧಿಸಿದ್ದ ಕುರಹಟ್ಟಿ ಕೆ.ಜಿ. ಮಹೇಶ್ 285, ಎಸ್ಸಿ ಮೀಸಲು ವರ್ಗದಿಂದ ಸ್ಪರ್ಧಿಸಿದ್ದ ವಿಜಯ್ ಕುಮಾರ್ 205, ಎಸ್ಟಿ ಮೀಸಲು ವರ್ಗದಿಂದ ಸ್ಪರ್ಧಿಸಿದ್ದ ಸರ್ವೇಶ್ 191, ಸಾಮಾನ್ಯ ವರ್ಗದಿಂದ ಸ್ಪರ್ಧಿಸಿದ್ದ ಶಿವಕುಮಾರ್ 222, ಎನ್. ಶ್ರೀನಿವಾಸ್ 184, ಮಹಿಳಾ ಮೀಸಲು ವರ್ಗದಿಂದ ಸ್ಪರ್ಧಿಸಿದ್ದ ಎಚ್.ಎಂ. ಮಂಜುಳಾ ಮಧು 248, ಎನ್.ಎಂ. ಪವಿತ್ರಾ 197, ಬಿಸಿಎಂ (ಎ) ಇಂದ ಸ್ಪರ್ಧಿಸಿದ್ದ ಆರ್. ಮಹದೇವು 170 ಮತಗಳನ್ನು ಪಡೆದು ಎಲ್ಲರೂ ಮುಂಚೂಣಿ ಸಾಧಿಸಿದ್ದಾರೆ.ಬಿಜೆಪಿ ಬೆಂಬಲಿತ ಅಭ್ಯರ್ಥಿ ಬಿಸಿಎಂ (ಬಿ) ಕ್ಷೇತ್ರದಿಂದ ಸ್ಪರ್ಧಿಸಿದ್ದ ಎಸ್.ಎಂ. ಕೆಂಪಣ್ಣ 209 ಮತ, ಎಸ್ಸಿ ಮೀಸಲು ಕ್ಷೇತ್ರದಿಂದ ಸ್ಪರ್ಧಿಸಿದ್ದ ಸಿಎಂ ಮಹದೇವಯ್ಯ 145, ಎಸ್ಟಿ ಮೀಸಲು ಕ್ಷೇತ್ರದಿಂದ ಸ್ಪರ್ಧಿಸಿದ್ದ ಕೆ.ಎಂ. ನಾಗರಾಜು 97 ಮತ, ಸಾಮಾನ್ಯ ವರ್ಗ ಕ್ಷೇತ್ರದಿಂದ ಸ್ಪರ್ಧಿಸಿದ್ದ ಎಚ್.ಎಸ್. ಮಹದೇವಸ್ವಾಮಿ 163, ಎಂ.ಪಿ. ನಟರಾಜು 132, ಮಹಿಳಾ ಮೀಸಲು ಕ್ಷೇತ್ರದಿಂದ ಸ್ಪರ್ಧಿಸಿದ್ದ ಎಚ್.ಕೆ. ಸವಿತಾ 161 ಮತ, ಎಸ್. ಮಂಜುಳಾ 159 ಮತಗಳನ್ನು ಪಡೆದು ಕಾಂಗ್ರೆಸ್ ಅಭ್ಯರ್ಥಿಗಳಿಗಿಂತ ಹಿಂದುಳಿದಿದ್ದಾರೆ.ಮಾಜಿ ಅಧ್ಯಕ್ಷ ಕುರಹಟ್ಟಿ ಕೆ.ಜಿ. ಮಹೇಶ್ ಮಾತನಾಡಿ, ಎಲ್ಲಾ ಸದಸ್ಯರ ಸಹಕಾರದಿಂದಾಗಿ ಕಾಂಗ್ರೆಸ್ ಎರಡು ಅವಧಿಗೆ ಅಧಿಕಾರ ಹಿಡಿದು ನನಗೆ ಎರಡು ಬಾರಿ ಅಧ್ಯಕ್ಷನಾಗಿ ಸಂಘವನ್ನು ಮುನ್ನಡೆಸಲು ಅವಕಾಶ ಸಿಕ್ಕಿದೆ. ಈ ಬಾರಿಯೂ ಕೂಡ ಕಾಂಗ್ರೆಸ್ ಪಕ್ಷದ ಎಲ್ಲಾ ಅಭ್ಯರ್ಥಿಗಳು ಗೆಲುವು ಸಾಧರಿಸಲಿದ್ದಾರೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.ಬಿಜೆಪಿಯ ಎಸ್.ಎಂ. ಕೆಂಪಣ್ಣ ಮಾತನಾಡಿ, ಈಗ 412 ಮತಗಳು ಮಾತ್ರ ಎಣಿಕೆಯಾಗಿದೆ. ನ್ಯಾಯಾಲಯದ ಆದೇಶ ಹೊರ ಬಿದ್ದ ನಂತರ 600 ಮತಗಳು ಎಣಿಕೆ ಕಾರ್ಯ ನಡೆಯಲಿದ್ದು, ಅದರಲ್ಲಿ ಬಿಜೆಪಿ ಬೆಂಬಲಿತ ಮತದಾರರು ಹೆಚ್ಚಿನ ಸಂಖ್ಯೆಯಲ್ಲಿ ಇರುವ ಕಾರಣ ಬಿಜೆಪಿ ಪಕ್ಷದ ಎಲ್ಲಾ ಅಭ್ಯರ್ಥಿಗಳು ವಿಜಯ ಸಾಧಿಸಲಿದ್ದಾರೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.
;Resize=(128,128))
;Resize=(128,128))
;Resize=(128,128))
;Resize=(128,128))