ಕೆಜಿಎಫ್‌ ಅಗ್ನಿ ಶಾಮಕ ಠಾಣೆಯಲ್ಲಿ ವಾಹನಗಳೇ ಇಲ್ಲ

| Published : Apr 02 2025, 01:05 AM IST

ಸಾರಾಂಶ

ಕೆಜಿಎಫ್‌ ಅಗ್ನಿಶಾಮಕ ಠಾಣೆಯಲ್ಲಿ ಈಗಿರುವ ವಾಹನಗಳು ಚಾಲನೆ ಸ್ಥಿತಿಯಲ್ಲಿದ್ದರೂ ಗುಣಮಟ್ಟ ಹಾಗೂ ಕಾರ್ಯಕ್ಷಮತೆ ಕ್ಷೀಣಿಸಿದೆ, ೧೯೯೯ ಮಾರ್ಚ್‌ನಲ್ಲಿ ಅಗ್ನಿ ಶಾಮಕ ಸ್ಟೇಷನ್ ಪ್ರಾರಂಬಿಸಿ ಎರಡು ಅಗ್ನಿ ಶಾಮಕ ದಳದ ವಾಹನಗಳನ್ನು ನೀಡಲಾಗಿತ್ತು. ಈಗ ೩೮ ವರ್ಷದ ಒಂದು ವಾಹನ, ೧೬ ವರ್ಷದ ಒಂದು ವಾಹನವನ್ನು ಗುಜರಿಗೆ ಹಾಕಲು ಅಗ್ನಿಶಾಮಕ ಅಧಿಕಾರಿಗಳು ಬ್ಯಾನ್‌ರ್ ಅಳವಡಿಸಿ ಠಾಣೆಯ ಮುಂಭಾಗ ನಿಲ್ಲಿಸಿದ್ದಾರೆ

ಕನ್ನಡಪ್ರಭ ವಾರ್ತೆ ಕೆಜಿಎಫ್ಕೇಂದ್ರ ಸರ್ಕಾರದ ಗುಜರಿ ನೀತಿಯಡಿ ೧೫ ವರ್ಷಕ್ಕೂ ಹಳೆಯಾದಾದ ವಾಹನಗಳಿಗೆ ಮುಕ್ತಿ ಕೊಡಲು ರಾಜ್ಯ ಅಗ್ನಿಶಾಮಕ ಇಲಾಖೆಯು ಮುಂದಾಗಿದೆ.

ಈ ಮೂಲಕ ಕೆಜಿಎಫ್ ತಾಲೂಕಿನಲ್ಲಿರುವ ಅಗ್ನಿ ಶಾಮಕ ವಾಹನ ತನ್ನಲ್ಲಿರುವ ೧೫ ವರ್ಷದ ಹಳೆಯ ವಾಹನಕ್ಕೆ ಅಗ್ನಿ ಶಾಮಕ ದಳದ ಸಿಬ್ಬಂದಿ ಬ್ಯಾನರ್ ಅಳವಡಿಸಿ ಎರಡು ತಿಂಗಳು ಕಳೆದರೂ ಹೊಸ ಅಗ್ನಿ ಶಾಮಕ ವಾಹನವನ್ನು ಸರ್ಕಾರ ನೀಡಿಲ್ಲ. ಇದರಿಂದಾಗಿ ಈಗ ಕೆಜಿಎಫ್ ತಾಲೂಕಿನಲ್ಲಿ ತುರ್ತು ಬೆಂಕಿ ಅನಾಹುತ ನಿಯಂತ್ರಿಸಲು ಅಗ್ನಿಶಾಮಕ ದಳದ ಠಾಣೆಯಲ್ಲಿ ವಾಹನವೇ ಇಲ್ಲದಂತಾಗಿದೆ.38 ವರ್ಷದಷ್ಟು ಹಳೆಯ ವಾಹನ

ಈಗಿರುವ ವಾಹನವು ಚಾಲನೆ ಸ್ಥಿತಿಯಲ್ಲಿದ್ದರೂ ಗುಣಮಟ್ಟ ಹಾಗೂ ಕಾರ್ಯಕ್ಷಮತೆ ಕ್ಷೀಣಿಸಿದೆ, ೧೯೯೯ ಮಾರ್ಚ್‌ನಲ್ಲಿ ಅಗ್ನಿ ಶಾಮಕ ಸ್ಟೇಷನ್ ಪ್ರಾರಂಬಿಸಿ ಎರಡು ಅಗ್ನಿ ಶಾಮಕ ದಳದ ವಾಹನಗಳನ್ನು ನೀಡಲಾಗಿತ್ತು. ಈಗ ೩೮ ವರ್ಷದ ಒಂದು ವಾಹನ, ೧೬ ವರ್ಷದ ಒಂದು ವಾಹನವನ್ನು ಗುಜರಿಗೆ ಹಾಕಲು ಅಗ್ನಿಶಾಮಕ ಅಧಿಕಾರಿಗಳು ಬ್ಯಾನ್‌ರ್ ಅಳವಡಿಸಿ ಠಾಣೆಯ ಮುಂಭಾಗ ನಿಲ್ಲಿಸಿದ್ದಾರೆ.

ಕೆಜಿಎಫ್ ತಾಲೂಕಿನ ಅಗ್ನಿ ಶಾಮಕ ದಳದ ಎರಡು ವಾಹನಗಳು ಸ್ಥಗಿತಗೊಂಡಿರುವ ಕಾರಣ, ಅಕ್ಮಸಿಕ ಬೆಂಕಿ ಅವಘಡಗಳು ಸಂಭವಿಸಿದರೆ ಬೆಂಕಿ ನಂದಿಸಲು ಅಗ್ನಿ ಶಾಮಕ ದಳದವರ ಬಳಿ ಪರ್ಯಾಯ ವಾಹನವಿಲ್ಲ, ಸರ್ಕಾರಕ್ಕೆ ಎರಡು ತಿಂಗಳ ಹಿಂದೆಯೇ ಪತ್ರ ಬರೆದಿದ್ದರೂ ಇದುವರೆಗೂ ಅಗ್ನಿ ಶಾಮಕ ವಾಹನ ನೀಡಿಲ್ಲ.

ಠಾಣೆಯಲ್ಲಿ ಸಿಬ್ಬಂದಿ ಕೊರತೆ

ತಾಲೂಕಿನ ಅಗ್ನಿ ಶಾಮಕ ಠಾಣೆಯಲ್ಲಿ ಒಟ್ಟು ೨೭ ಸಿಬ್ಬಂದಿಗಳ ಅವಶ್ಯವಿದ್ದು, ಪ್ರಸ್ತುತ ೨೦ ಸಿಬ್ಬಂದಿಗಳು ಮಾತ್ರ ೩ ಪಾಳೆಯದಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದಾರೆ, ಅಗ್ನಿ ಶಾಮಕ ಠಾಣೆಯಲ್ಲಿ ೭ ಸಿಬ್ಬಂದಿಗಳ ಕೊರತೆಯಿದ್ದು ಕೂಡಲೇ ಅಗತ್ಯವಿರುವ ಸಿಬ್ಬಂದಿಯನ್ನು ನೇಮಕ ಮಾಡಬೇಕಿದೆ.

ಬಾಕ್ಸ್‌.........

ಶೀಘ್ರದಲ್ಲೇ ವಾಹನ ಪೂರೈಕೆ

ಕೇಂದ್ರ ಸರಕಾರದ ಗುಜರಿ ನೀತಿಯಡಿ ಎರಡು ವಾಹನಗಳು ಕರ‍್ಯಕ್ಷಮತೆ ಕಳೆದುಕೊಂಡಿದ್ದು, ಈಗಾಗಲೇ ರಾಜ್ಯದಲ್ಲಿ ೪೬೩ ಹಳೆಯ ಅಗ್ನಿವಾಹನಗಳು ಗುಜರಿಗೆ ಹಾಕಲಾಗಿದೆ. ೧೮೪ ಅಗ್ನಿನಂದಿಸುವ ಹೊಸ ವಾಹನಗಳನ್ನು ಖರೀದಿಸಲು ಕಾರ್ಯಾದೇಶ ನೀಡಲಾಗಿದೆ, ಅತೀ ಶೀಘ್ರದಲ್ಲೇ ಮೊದಲನೇ ಅದ್ಯತೆ ಮೇರೆಗೆ ಕೆಜಿಎಫ್ ತಾಲೂಕಿಗೆ ಒಂದು ವಾಹನವನ್ನು ನೀಡುವುದಾಗಿ ಮೇಲಧಿಕಾರಿಗಳು ತಿಳಿಸಿದ್ದಾರೆ. ತುರ್ತು ಅಗ್ನಿ ಅವಘಡಗಳು ಸಂಭವಿಸಿದ್ದಲ್ಲಿ ಬಂಗಾರಪೇಟೆ ಹಾಗೂ ಮುಳಬಾಗಿಲಿನ ಅಗ್ನಿ ಶಾಮಕ ಠಾಣೆಗಳಿಂದ ವಾಹನಗಳನ್ನು ತರಸಿಕೊಂಡು ಕಾರ್ಯಾಚರಣೆ ನಡೆಸಲಾಗುವುದೆಂದು ಎಂದು ಕೆಜಿಎಫ್‌ ಅಗ್ನಿಶಾಮಕ ಠಾಣೆಯ ಇನ್ಸೆಪೆಕ್ಟರ್ ನಿಜಗುಣ ಎಂ.ಎಸ್ ತಿಳಿಸಿದರು.