ಹಿಂದುಗಳ ದಾರಿ ತಪ್ಪಿಸುವ ಷಡ್ಯಂತ್ರ ನಡೆಯುತ್ತಿದೆ

| Published : Jun 19 2024, 01:04 AM IST

ಸಾರಾಂಶ

ರಾಷ್ಟ್ರೀಯ ಸ್ವಯಂ ಸೇವಕ ಸಂಘದಿಂದ ಸಮೀರವಾಡಿಯ ಶಿವಲಿಂಗೇಶ್ವರ ಕಲ್ಯಾಣ ಮಂಟಪದಲ್ಲಿ ಹಿಂದೂ ಸಾಮ್ರಾಜ್ಯ ದಿನೋತ್ಸವ ಆಚರಿಸಲಾಯಿತು.

ಕನ್ನಡಪ್ರಭ ವಾರ್ತೆ ಮಹಾಲಿಂಗಪುರ

ರಾಷ್ಟ್ರೀಯ ಸ್ವಯಂ ಸೇವಕ ಸಂಘದಿಂದ ಸಮೀರವಾಡಿಯ ಶಿವಲಿಂಗೇಶ್ವರ ಕಲ್ಯಾಣ ಮಂಟಪದಲ್ಲಿ ಹಿಂದೂ ಸಾಮ್ರಾಜ್ಯ ದಿನೋತ್ಸವ ಆಚರಿಸಲಾಯಿತು.

ಈ ವೇಳೆ ಜಮಖಂಡಿ ಜಿಲ್ಲಾ ಘೋಷ ಪ್ರಮುಖರಾದ ಶಂಕರ ಹಳಿಂಗಳಿ ಮಾತನಾಡಿ, ಸಾಕಷ್ಟು ಅಡೆತಡೆಗಳ ಮಧ್ಯೆಯೂ ಛತ್ರಪತಿ ಶಿವಾಜಿ ಮಹಾರಾಜರು ಹಿಂದೂ ಸಾಮ್ರಾಜ್ಯ ಕಟ್ಟಲು ಸರ್ವಸ್ವವನ್ನೂ ತ್ಯಾಗ ಮಾಡಿದರು. ಆದರೆ ಆಗಿನ ಕಾಲದಲ್ಲಿಯೂ ಸೈನಿಕರನ್ನು ದಾರಿತಪ್ಪಿಸುವ ಹಾಗೂ ಹೋರಾಟದಿಂದ ವಿಮುಖರನ್ನಾಗಿಸುವ ದೊಡ್ಡ ಸಂಚು ನಿರಂತರ ನಡೆಯಿತು. ಅಂತಹ ಸಂದಿಗ್ಧತೆಯಲ್ಲಿಯೂ ಶಿವಾಜಿ ಮಹಾರಾಜರು ಹಿಂಜರಿಯದೇ ಸುಭದ್ರ ಹಿಂದೂ ರಾಷ್ಟ್ರ ಕಟ್ಟುವಲ್ಲಿ ಯಶಸ್ವಿಯಾದರು. ಪ್ರಸ್ತುತ ಸನ್ನಿವೇಶದಲ್ಲಿಯೂ ದೇಶಭಕ್ತರನ್ನು ಮತ್ತು ಹಿಂದೂಗಳನ್ನು ದಾರಿ ತಪ್ಪಿಸುವ ಹಾಗೂ ಸಂಘದ ಶಾಖೆಗಳಲ್ಲಿ ಭಾಗವಹಿಸುವುದನ್ನು ತಡೆಯುವ ಬಹುದೊಡ್ಡ ಸಂಚು ನಡೆಯುತ್ತಿದ್ದು, ಯುವಕರು ಯಾವುದಕ್ಕೂ ತಲೆಕೆಡಿಸಿಕೊಳ್ಳದೇ ಜಾಗರೂಕರಾಗಿ ಒಂದಾಗಿ ಅಪಾಯಗಳಿಂದ ರಾಷ್ಟ್ರವನ್ನು ಪಣತೊಡಬೇಕಿದೆ. ಅಲ್ಲದೇ, ಸಂಘದ ಶಾಖೆಗಳಲ್ಲಿ ತಪ್ಪದೇ ಭಾಗವಹಿಸಿ ಸಂಸ್ಕಾರ ಅಳವಡಿಸಿಕೊಳ್ಳಬೇಕಾಗಿದೆ ಎಂದರು.ಸಮೀರವಾಡಿಯ ಜಿಬಿಎಲ್ ಜನರಲ್ ಮ್ಯಾನೇಜರ್ ಸೋಮಶೇಖರ ಪೇಟಿಮನಿ ಮಾತನಾಡಿ, ಇಂದಿನ ಯುವಜನಾಂಗ ದುಶ್ಚಟಗಳಿಗೆ ಬಲಿಯಾಗಿ ಸಂಸ್ಕಾರ ಮತ್ತು ಸುಸಂಸ್ಕೃತಿಯಿಂದ ದೂರವಾಗುತ್ತಿರುವುದು ವಿಷಾದನೀಯ. ಸಂಘದ ಶಾಖೆಗಳಲ್ಲಿ ತಪ್ಪದೇ ಭಾಗವಹಿಸಿ ಸಂಸ್ಕಾರ ರೂಢಿಸಿಕೊಳ್ಳುವಂತೆ ತಿಳಿಸಿದರು. ಪ್ರದೀಪ ಸೋನಾರ ಮತ್ತು ಶಂಕರಗೌಡ ಬಂದಪ್ಪಗೌಡ್ರ, ಬಸವರಾಜ ಬಾದನ ಅಮೃತ ವಚನ, ದೀಪಕ ಖಾನಗೌಡ್ರ ಪರಿಚಯಿಸಿರು. ಸಂಕೇತ ಮಹಾಲಿಂಗಪುರಮಠ ಪ್ರಾರ್ಥಿಸಿ, ಉಜ್ವಲ ಕೊಲ್ಲಾಪುರ ವಂದಿಸಿದರು. ಮಹಾಲಿಂಗಪುರ ಹೋಬಳಿ ನಿರ್ವಾಹಕ ಸಾಗರ ಭೋವಿ, ಮಂಡಲ ಕಾರ್ಯನಿರ್ವಾಹಕ ವಿಶ್ವನಾಥ ಪೀರಶೆಟ್ಟಿ ಸೇರ ಗಣ್ಯರು, ತಾಯಂದಿರು ಹಾಜರಿದ್ದರು.