ಜಾತಿ ಸಮೀಕ್ಷೆ ಬಗ್ಗೆ ಕ್ಯಾಬಿನೆಟ್‌ನಲ್ಲಿ ಚರ್ಚೆಯಾಗಿದೆ

| Published : May 01 2025, 12:45 AM IST

ಜಾತಿ ಸಮೀಕ್ಷೆ ಬಗ್ಗೆ ಕ್ಯಾಬಿನೆಟ್‌ನಲ್ಲಿ ಚರ್ಚೆಯಾಗಿದೆ
Share this Article
  • FB
  • TW
  • Linkdin
  • Email

ಸಾರಾಂಶ

ಜಾತಿ ಸಮೀಕ್ಷೆ ಕುರಿತು ಈಗಾಗಲೇ ಕ್ಯಾಬಿನೆಟ್‌ನಲ್ಲಿ ಒಂದೂ ಸುತ್ತು ಚರ್ಚೆ ಆಗಿದೆ. ಎಲ್ಲರ ಅಭಿಪ್ರಾಯ ಪಡೆದು ಸಿಎಂ ಸಿದ್ದರಾಮಯ್ಯ ಚರ್ಚೆ ಮುಂದುವರೆಸುತ್ತಾರೆ. ನಾವು ತರಾತುರಿಯಲ್ಲಿ ನಿರ್ಧಾರ ಮಾಡೋದಿಲ್ಲ, ಮಾಡುವ ಕೆಲಸ ಸರಿ ಇರೋದ್ರಿಂದ ನಮಗೆ ಹಿಂಜರಿಕೆ ಇಲ್ಲ, ಇದು ಸಮೀಕ್ಷೆ ಅಷ್ಟೇ ಜಾತಿ ಗಣತಿ ಅಲ್ಲ ಎಂದು ಕಂದಾಯ ಸಚಿವ ಕೃಷ್ಣಬೈರೇಗೌಡ ಹೇಳಿದರು.

ಕನ್ನಡಪ್ರಭ ವಾರ್ತೆ ಕೋಲಾರಜಾತಿ ಸಮೀಕ್ಷೆ ಕುರಿತು ಈಗಾಗಲೇ ಕ್ಯಾಬಿನೆಟ್‌ನಲ್ಲಿ ಒಂದೂ ಸುತ್ತು ಚರ್ಚೆ ಆಗಿದೆ. ಎಲ್ಲರ ಅಭಿಪ್ರಾಯ ಪಡೆದು ಸಿಎಂ ಸಿದ್ದರಾಮಯ್ಯ ಚರ್ಚೆ ಮುಂದುವರೆಸುತ್ತಾರೆ. ನಾವು ತರಾತುರಿಯಲ್ಲಿ ನಿರ್ಧಾರ ಮಾಡೋದಿಲ್ಲ, ಮಾಡುವ ಕೆಲಸ ಸರಿ ಇರೋದ್ರಿಂದ ನಮಗೆ ಹಿಂಜರಿಕೆ ಇಲ್ಲ, ಇದು ಸಮೀಕ್ಷೆ ಅಷ್ಟೇ ಜಾತಿ ಗಣತಿ ಅಲ್ಲ ಎಂದು ಕಂದಾಯ ಸಚಿವ ಕೃಷ್ಣಬೈರೇಗೌಡ ಹೇಳಿದರು.ತಾಲೂಕು ಕುರ್ಕಿ ಗ್ರಾಮದಲ್ಲಿ ಬಂಡಿದ್ಯಾವರ ಕಾರ್ಯಕ್ರಮದ ನಂತರ ಸುದ್ದಿಗಾರರೊಂದಿಗೆ ಮಾತನಾಡಿ, ಸಮೀಕ್ಷೆ ವರದಿ ನೀಡುವ ಆಯೋಗದ ಅಧ್ಯಕ್ಷರನ್ನು ನೇಮಕ ಮಾಡಿದ್ದೆ ಬಿಜೆಪಿಯವರು ಆಯೋಗದ ವರದಿಯ ಸಮೀಕ್ಷೆಗೆ ಸಹಿ ಹಾಕಿ ಸದಸ್ಯರನ್ನು ಮಾಡಿದ್ದೂ ಬಿಜೆಪಿಯವರು, ಬಿಜೆಪಿ ನೇಮಕ ಮಾಡಿರುವ ಅಧ್ಯಕ್ಷ, ಸದಸ್ಯರೇ ವರದಿ ನೀಡಿರೋದು, ಬಿಜೆಪಿಯವರದು ಡೋಂಗಿತನ. ದ್ವಂಧ್ವ ನಿಲುವು, ರಾಜಕೀಯ ಮೇಲಾಟವಾಗಿದೆ. ಡೋಂಗಿತನವೇ ಬಿಜೆಪಿ ನಿಜವಾದ ಬಣ್ಣವಾಗಿದೆ ಎಂದರು.ಕುಮಾರಸ್ವಾಮಿ, ಯಡಿಯೂರಪ್ಪ ಹಾಗೂ ಬೊಮ್ಮಾಯಿ ಸಿಎಂ ಆಗಿದ್ದಾಗ ಏಕೆ ವರದಿ ತಿರಸ್ಕಾರ ಮಾಡಿಲ್ಲ. ನೂನ್ಯತೆ ಇದ್ದಿದ್ರೆ ವರದಿ ಸ್ವೀಕಾರ ಮಾಡಿ ತಿರಸ್ಕಾರ ಮಾಡಬೇಕಿತ್ತು. ಬಿಜೆಪಿ ತನ್ನ ಸರ್ಕಾರ ಇದ್ದಾಗ ತೀರ್ಮಾನ ಮಾಡಬಹುದಿತ್ತು. ಈಗ ವಿರೋಧ ಮಾಡ್ತಿದೆ, ಬಿಜೆಪಿ ಡೋಂಗಿತನಕ್ಕೆ ನಾವು ಬಗ್ಗೋದಿಲ್ಲ, ಕರ್ನಾಟಕದ ಹಿತಕ್ಕಾಗಿ ನಾವು ಕೆಲಸ ಮಾಡ್ತೇವೆ ಎಂದು ಹೇಳಿದರು.ಬಿಜೆಪಿಯವರದ್ದು ಆರ್ಥಿಕ, ಸಾಮಾಜಿಕ ಸಮೀಕ್ಷೆ ವಿಚಾರವಾಗಿ ಡೋಂಗಿತನವಾಗಿದೆ, ಸಮಿತಿ ಆಯೋಗದ ಅಧ್ಯಕ್ಷರನ್ನು ನೇಮಕ ಮಾಡಿದವರು ಬಿಜೆಪಿಯವರು, ಆಯೋಗದ ವರದಿಗೆ ಸಹಿ ಹಾಕಿದವರು ಎಲ್ಲರನ್ನೂ ಸದಸ್ಯರು ಮಾಡಿದವರು ಬಿಜೆಪಿಯವರೇ, ಬಿಜೆಪಿಯವರೇ ವರದಿಕೊಟ್ಟು ಅವರೆ ವಿರೋದಿ ಮಾಡಿದರೆ ಅದಕ್ಕಿಂತ ಡೋಂಗಿ ತನ ಇದೆಯೇ?. ಅದಕ್ಕೆ ಬಿಜೆಪಿ ಎಂದರೆ ಭಾರತೀಯ ಜುಮ್ಲಾ ಪಾರ್ಟಿ ಎಂದು ಕರೆಯೋದು. ಯಾವ ವಿಷಯದಲ್ಲೂ ಬಿಜೆಪಿಯವರಿಗೆ ಕಾಳಜಿ ಇಲ್ಲ ಎಂಬುದು ಅರ್ಥ ಮಾಡಿಕೊಳ್ಳಬೇಕು, ಸತ್ಯಾಸತ್ಯತೆ ಏನಿದೆಯೋ ಅದು ಜಾರಿಗೆ ಬರುತ್ತದೆ ಸಚಿವ ಕೃಷ್ಣ ಬೈರೇಗೌಡ ಬಿಜೆಪಿ ವಿರುದ್ದ ವಾಗ್ದಾಳಿ ನಡೆಸಿದರು.

ಶಾಸಕ ಕೆ.ವೈ.ನಂಜೇಗೌಡ ಮಾತನಾಡಿ, ವಿರೋಧ ಪಕ್ಷದವರಿಗೆ ಸಿದ್ರಾಮಣ್ಣ, ಡಿಕೆಶಿ, ಕಾಂಗ್ರೆಸ್ ನೋಡಿದ್ರೆ ನಡುಕ ಭಯ ಇದೆ ಅದಕ್ಕಾಗಿ ಟೀಕಿಸುತ್ತಾರೆ, ಆ ಭಯ ಇಲ್ಲದಿದ್ರೆ ಅವರು ಜಾಸ್ತಿ ಮಾತಾಡುತ್ತಿರಲಿಲ್ಲ. ಸಿದ್ದರಾಮಯ್ಯನವರು ಪಾಕಿಸ್ತಾನ ಪರ ಅಲ್ಲ ಮಾತಾಡಿದ್ದು ಯುದ್ದ ಬೇಡ ಎಂದು ಹೇಳಿಲ್ಲ, ಸಂದರ್ಭ ಎಂದು ಹೇಳಿದ್ದಾರೆ, ಸಂದರ್ಭ ಬಂದಾಗ ಯುದ್ದ ಮಾಡಲೇಬೇಕು, ಆದರೆ ಭಾರತೀಯರೆಲ್ಲರೂ ಒಂದಾಗಬೇಕಿದೆ ಎಂದು ಹೇಳಿದ್ದಾರೆ ಎಂದು ತಿಳಿಸಿದರು.ಸಿದ್ದರಾಮಯ್ಯರ ವರ್ತನೆ ಬದಲಾವಣೆ ಏನೂ ಆಗಿಲ್ಲ:

ಸಿದ್ದರಾಮಯ್ಯನವರ ವರ್ತನೆ ಬದಲಾವಣೆ ಏನೂ ಆಗಿಲ್ಲ, ಬೆಳಗಾವಿಯಲ್ಲಿ ಪೋಲೀಸ್ ಅಧಿಕಾರಿಗೆ ಹೊಡೆದಿಲ್ಲ, ಒಬ್ಬ ಅಧಿಕಾರಿ ಜವಾಬ್ದಾರಿ ಮರೆತಾಗ ಹೇಳುವ ಅಧಿಕಾರ ಮುಖ್ಯಮಂತ್ರಿಗೇ ಇಲ್ಲವಾ, ಅದನ್ನೆ ಹೇಳಿದ್ದು ಅವರು, ಹೊಡೆದಿಲ್ಲ ಅವರ ಸ್ಟೈಲೇ ಅದು, ಒಬ್ಬಬ್ಬರದ್ದು ಒಂದು ಧಾಟಿ ಇರುತ್ತೆ, ಇನ್ನೊಬ್ರ ನಾಯಕರಲ್ಲಿ ಆ ಧಾಟಿ ಇರೋಲ್ಲ, ಸಿದ್ದರಾಮಯ್ಯರದ್ದು ಓಪನ್ ಹಾರ್ಟ್, ಓಪನ್ನಾಗಿ ಮಾತಾಡ್ತಾರೆ, ಅದನ್ನು ಅರ್ಥ ಮಾಡಿಕೊಂಡವರಿಗೆ ಅದು ಒಳ್ಳೆಯ ಭಾಷೆಯಾಗಿ. ಬಿಜೆಪಿಯವರು ಕಪ್ಪು ಬಟ್ಟೆ ಪ್ರದರ್ಶನ ಅವಶ್ಯಕತೆ ಏನಿತ್ತು, ಬೇಕಂತಲೇ ಮಾಡಿದ್ದಾರೆ, ಮುಖ್ಯಮಂತ್ರಿ ಕಾರ್ಯಕ್ರಮ ಇದ್ದಾಗ ಅಲ್ಲಿ ಕ್ರಮ ತೆಗೆದುಕೊಳ್ಳೋದು ಅಧಿಕಾರಿ ಜವಾಬ್ದಾರಿ, ಅದನ್ನ ಮರೆತಿದ್ದರಿಂದ ಅದನ್ನ ಹೇಳಿದ್ದಾರೆ ಎಂದು ಹೇಳಿದರು.

ನಾನು ಸಚಿವ ಸ್ಥಾನದ ಆಕಾಂಕ್ಷೆ ಕುರಿತು ಏನೂ ಮಾತಾಡೋಲ್ಲ, ನಮ್ಮ ತಾಲೂಕಿಗೆ ತೃಪ್ತಿಕರವಾಗಿ ಸಮಾಧಾನಕರವಾಗಿ ಅಭಿವೃದ್ಧಿ ಆಗುತ್ತಿದೆ, ಮಂತ್ರಿಗಳಾಗಿ ನಮಗೆ ಕೃಷ್ಣ ಭೈರೇಗೌಡರಿದ್ದಾರೆ, ಭೈರತಿ ಸುರೇಶ್, ನಮ್ಮ ಮುಖ್ಯಮಂತ್ರಿ ಸಿದ್ದರಾಮಯ್ಯ, ಉಪಮುಖ್ಯಮಂತ್ರಿ ಡಿಕೆಶಿಯವರು ಇದ್ದಾರೆ, ಎಲ್ಲ ರೀತಿಯ ಅನುಕೂಲಗಳಾಗುತ್ತಿವೆ, ಮಂತ್ರಿ ಎಂಬ ತಿರುಕನ ಕನಸು ಕಾಣೋದು ಬೇಡ, ಆದರೂ ಅವಕಾಶ ಸಂದರ್ಭ ಇದ್ದರೆ ಅದು ಬರಬಹುದು ಎಂದರು.ಜಿಲ್ಲೆಯಲ್ಲಿ ಜೆಡಿಎಸ್ ಬಿಜೆಪಿ ಶಾಸಕರಿಗೆ ಕೆಲಸ ಮಾಡಿಸಿಕೊಳ್ಳುವ ಅರ್ಹತೆ ಇಲ್ಲ ಅವರಿಗೆ ಕೆಲಸ ಕೇಳಿ ಮಾಡಿಕೊಳ್ಳದೆ ಅವರಿಗೇ ಹುಡಿಕಿಕೊಂಡು ಹೋಗಬೇಕಾ, ಜೆಡಿಎಸ್‌ನ ವೆಂಕಟಶಿವಾರೆಡ್ಡಿಯವರು ನಮಗೆ ಕೆಲಸಗಳು ಆಗುತ್ತಿದೆ ಎಂದು ಹೇಳುತ್ತಾರೆ. ಇನ್ನೊಬ್ಬ ಜೆಡಿಎಸ್ ಶಾಸಕರು ಕೆಲಸ ಸಿಗೋಲ್ಲ ಎನ್ನುತ್ತಾರೆ, ನಾನು ಬಿಜೆಪಿ ಸರ್ಕಾರ ಇದ್ದಾಗ, ಮುಖ್ಯಮಂತ್ರಿಗಳಾಗಿದ್ದ ಯಡಿಯೂರಪ್ಪ, ಬೊಮ್ಮಾಯಿ ಹತ್ರ ಹೋಗುತ್ತಿದ್ದೆ ಕ್ಷೇತ್ರದ ಅಭಿವೃದ್ದಿಗೆ ಅನುದಾನ ಕೇಳಿದರೆ ಕೊಡುತ್ತಾರೆ, ಕೇಳದೇ ಇದ್ರೆ ಕೊಡ್ತಾರಾ ಎಂದು ಹೇಳಿದರು.ಎಂಎಲ್ಸಿ ಅನಿಲ್‌ಕುಮಾರ್, ಮಾಜಿ ಸಭಾಪತಿ ವಿ.ಆರ್.ಸುದರ್ಶನ್, ಜಿಪಂ ಮಾಜಿ ಅಧ್ಯಕ್ಷೆ ರತ್ನಮ್ಮ ನಂಜೇಗೌಡ ಇದ್ದರು.