ಶಿಗ್ಗಾಂವಿ ಕ್ಷೇತ್ರದಲ್ಲಿ ಯುವ ನಾಯಕರ ಅವಶ್ಯಕತೆ ಹೆಚ್ಚಿದೆ-ಕಂಬಾಳಿಮಠ

| Published : Jun 14 2024, 01:00 AM IST

ಶಿಗ್ಗಾಂವಿ ಕ್ಷೇತ್ರದಲ್ಲಿ ಯುವ ನಾಯಕರ ಅವಶ್ಯಕತೆ ಹೆಚ್ಚಿದೆ-ಕಂಬಾಳಿಮಠ
Share this Article
  • FB
  • TW
  • Linkdin
  • Email

ಸಾರಾಂಶ

ಶಿಗ್ಗಾಂವಿ ವಿಧಾನಸಭಾ ಕ್ಷೇತ್ರಕ್ಕೆ ಯುವ ನಾಯಕರ ಅವಶ್ಯಕತೆಯು ಹೆಚ್ಚಿದ್ದು, ಆ ದಿಸೇಯಲ್ಲಿ ಕಾಂಗ್ರೆಸ್‌ ಯುವ ಮುಖಂಡ ರಜತ ಉಳ್ಳಾಗಡ್ಡಿಮಠ ಅವರನ್ನು ಬೆಂಬಲಿಸುವದು ಅವಶ್ಯವಾಗಿದೆ ಎಂದು ತಡಸ ವ್ಯವಸಾಯ ಸೇವಾ ಸಹಕಾರಿ ಸಂಘದ ಅಧ್ಯಕ್ಷ ವಿಶ್ವನಾಥಸ್ವಾಮಿ ಕಂಬಾಳಿಮಠ ಹೇಳಿದರು.

ಶಿಗ್ಗಾಂವಿ: ಶಿಗ್ಗಾಂವಿ ವಿಧಾನಸಭಾ ಕ್ಷೇತ್ರಕ್ಕೆ ಯುವ ನಾಯಕರ ಅವಶ್ಯಕತೆಯು ಹೆಚ್ಚಿದ್ದು, ಆ ದಿಸೇಯಲ್ಲಿ ಕಾಂಗ್ರೆಸ್‌ ಯುವ ಮುಖಂಡ ರಜತ ಉಳ್ಳಾಗಡ್ಡಿಮಠ ಅವರನ್ನು ಬೆಂಬಲಿಸುವದು ಅವಶ್ಯವಾಗಿದೆ ಎಂದು ತಡಸ ವ್ಯವಸಾಯ ಸೇವಾ ಸಹಕಾರಿ ಸಂಘದ ಅಧ್ಯಕ್ಷ ವಿಶ್ವನಾಥಸ್ವಾಮಿ ಕಂಬಾಳಿಮಠ ಹೇಳಿದರು.ತಾಲೂಕಿನ ತಡಸ ಗ್ರಾಮದ ವ್ಯವಸಾಯ ಸೇವಾ ಸಹಕಾರಿ ಸಂಘದ ಸಭೆಯಲ್ಲಿ ಮಾತನಾಡಿದ ಅವರು, ಇಂದು ನಾವು ಉಳ್ಳಾಗಡ್ಡಿಮಠ ಅವರಿಗೆ ಸಮಸ್ಯೆಗಳನ್ನು ಹೇಳುವುದು ಮುಖ್ಯವಲ್ಲ, ಅವರನ್ನು ಬೆಂಬಲಿಸಿ ಅವರಿಂದ ಸಮಸ್ಯೆಗಳಿಗೆ ಪರಿಹಾರವನ್ನು ಕಂಡುಕೊಳ್ಳುವದು ಸೂಕ್ತವಾಗಿದೆ. ಆದ್ದರಿಂದ ಶಿಗ್ಗಾಂವಿ ವಿಧಾನಸಭೆಯಲ್ಲಿ ಹೆಚ್ಚಿನ ಪ್ರಮಾಣದಲ್ಲಿ ಯುವಕರ ಪಡೆ ಅವರನ್ನು ಬೆಂಬಲಿಸಲು ಮುಂದಾಗಿದೆ ಎಂದರು.ಮಾಜಿ ಮುಖ್ಯಮಂತ್ರಿಗಳ ಕ್ಷೇತ್ರದ ಹಾಲಿ ಶಾಸಕ ಬಸವರಾಜ ಬೊಮ್ಮಾಯಿ ಅವರು ಹಾವೇರಿ ಲೋಕಸಭಾ ಚುನಾವಣೆಯಲ್ಲಿ ಜಯಗಳಿಸಿ ಕೇಂದ್ರ ರಾಜಕಾರಣಕ್ಕೆ ತೆರಳುತ್ತಿದ್ದಂತೆ ಶಿಗ್ಗಾಂವಿ ವಿಧಾನಸಭಾ ಕ್ಷೇತ್ರದ ಉಪ ಚುನಾವಣೆ ಕಾವು ಹೆಚ್ಚಾಗುತ್ತಿದೆ. ಯುವ ಕಾಂಗ್ರೆಸ್ ಮುಖಂಡ ರಜತ್ ಉಳ್ಳಾಗಡ್ಡಿಮಠ ಮಾತನಾಡಿ, ನಾನೇನು ಪಕ್ಷದ ಟಿಕೆಟ್‌ ಇಟ್ಟುಕೊಂಡು ಬಂದಿಲ್ಲ. ಆದರೆ ಸ್ಥಳೀಯ ಮುಖಂಡರು, ವಿವಿಧ ಸಮಾಜ ಬಾಂಧವರನ್ನು ಭೇಟಿ ಮಾಡಿ ಅವರಿಂದ ಬಂದ ಸಲಹೆ ಸೂಚನೆಯನ್ನು ತೆಗೆದುಕೊಂಡು ಮುಂದಿನ ನಿರ್ಧಾರವನ್ನು ತೆಗೆದುಕೊಳ್ಳುವದರ ಜೊತೆಗೆ ಪಕ್ಷದ ತೀರ್ಮಾನ ಅಂತಿಮವಾಗಿದೆ ಎಂದರು.ಈ ಸಂದರ್ಭದಲ್ಲಿ ಬ್ಲಾಕ್ ಕಾಂಗ್ರೆಸ್ ಮಾಜಿ ಅಧ್ಯಕ್ಷ ಚಂದ್ರಣ್ಣ ನಡುವಿನಮನಿ, ಸಂಘದ ಸದಸ್ಯ ಶೇಖಣ್ಣಾ ನಂಜಪ್ಪನವರ, ಫಕೀರಪ್ಪ ಕುರಬರ, ಗ್ರಾ.ಪಂ. ಮಾಜಿ ಸದಸ್ಯ ಡೀಕಪ್ಪ ಗಬ್ಬೂರ, ಮಣಿಕಂಠ ಕೊರವರ, ಶಿಖಂದರ ಪಲ್ಲೇದ, ಆಲ್ತಾಪ್ ಮದಾರರ್ಶನ್‌ವರ , ಅಬ್ದುಲ್‌ಮುಜೀದ ಮುಲ್ಲಾನವರು, ಫಯಾಜ ಆಹ್ಮಾದ ಪಾಟೀಲ, ಕುನ್ನೂರ ಅಂಜುಮನ್ ಸಮಿತಿ ಮಾಜಿ ಅಧ್ಯಕ್ಷ ಅಸ್ಪಾಕಲಿ ಮತ್ತೇಖಾನ, ಬಸವರಾಜ ಬಾಳಕ್ಕಣ್ಣವರ, ಸಂತೋಷ ಕೊರವರ, ಚಿಮ್ಮು ಹಿರೇಮಠ, ಆಸ್ಲಾಂಮ್ ತಡಸ,ಸೇರಿದಂತೆ ಹಲವರು ಇದ್ದುರು.