ಇಂದಿನ ವಿದ್ಯಾರ್ಥಿಗಳಿಗೆ ಸೃಜನಾತ್ಮಕ ಕೌಶಲ್ಯ ಮತ್ತು ಗುಣಾತ್ಮಕ ಶಿಕ್ಷಣದ ಅವಶ್ಯಕತೆ ಇದೆ. ವಿಜಯಪುರ ಕ.ರಾ.ಅ.ಮ.ವಿವಿಗೆ ಬೇಕಾಗುವ ಮೂಲಸೌಕರ್ಯ ಮತ್ತು ಸೌಲಭ್ಯ ಒದಗಿಸಿ ಕೊಡುವಲ್ಲಿ ಉನ್ನತ ಶಿಕ್ಷಣ ಸಚಿವರ ಜತೆ ಹಾಗೂ ಸದನದಲ್ಲಿ ಪ್ರಸ್ತಾಪಿಸಿದ್ದೇನೆಂದು ವಿಧಾನ ಪರಿಷತ್ ಸದಸ್ಯ ಹಣಮಂತ ಆರ್. ನಿರಾಣಿ ಹೇಳಿದರು.

ಕನ್ನಡಭ ವಾರ್ತೆ ಮುಧೋಳ

ಇಂದಿನ ವಿದ್ಯಾರ್ಥಿಗಳಿಗೆ ಸೃಜನಾತ್ಮಕ ಕೌಶಲ್ಯ ಮತ್ತು ಗುಣಾತ್ಮಕ ಶಿಕ್ಷಣದ ಅವಶ್ಯಕತೆ ಇದೆ. ವಿಜಯಪುರ ಕ.ರಾ.ಅ.ಮ.ವಿವಿಗೆ ಬೇಕಾಗುವ ಮೂಲಸೌಕರ್ಯ ಮತ್ತು ಸೌಲಭ್ಯ ಒದಗಿಸಿ ಕೊಡುವಲ್ಲಿ ಉನ್ನತ ಶಿಕ್ಷಣ ಸಚಿವರ ಜತೆ ಹಾಗೂ ಸದನದಲ್ಲಿ ಪ್ರಸ್ತಾಪಿಸಿದ್ದೇನೆಂದು ವಿಧಾನ ಪರಿಷತ್ ಸದಸ್ಯ ಹಣಮಂತ ಆರ್. ನಿರಾಣಿ ಹೇಳಿದರು.

ಕ.ರಾ.ಅ.ಮ.ವಿ.ವಿ. ವಿಜಯಪುರ ಹಾಗೂ ಬಾಗಲಕೋಟೆ ಬಿವ್ಹಿವ್ಹಿ ಸಂಘದ ದಾನಮ್ಮದೇವಿ ಮಹಿಳಾ ಮಹಾವಿದ್ಯಾಲಯ ಮುಧೋಳ ಇವರ ಸಹಯೋಗದಲ್ಲಿ ಮುಧೋ‍ಳ ಬಿವ್ಹಿವ್ಹಿಎಸ್ ಕ್ಯಾಂಪಸ್ ನಲ್ಲಿ ಆಯೋಜಿಸಲಾಗಿರುವ ಅಂತರ ಮಹಿಳಾ ಮಹಾವಿದ್ಯಾಲಯಗಳ ಮೂರು ದಿನಗಳ ಯುವಜನೋತ್ಸವ 2025-26ರ 20ನೇ ಶಕ್ತಿ ಸಂಭ್ರಮದ ಭಾನುವಾರ ನಡೆದ ಸಮಾರೋಪ ಸಮಾರಂಭದಲ್ಲಿ ಮುಖ್ಯ ಅತಿಥಿಸ್ಥಾನ ವಹಿಸಿ ಮಾತನಾಡಿ, ಕರ್ನಾಟಕದಲ್ಲಿರುವ ವಿಜಯಪುರದ ಏಕೈಕ ಮಹಿಳಾ ವಿಶ್ವವಿದ್ಯಾಲಯಕ್ಕೆ ವಿಶೇಷ ಅನುದಾನ ನೀಡಬೇಕೆಂದು ವೇದಿಕೆ ಮೂಲಕ ಸರ್ಕಾರಕ್ಕೆ ಒತ್ತಾಯಿಸುತ್ತೇನೆ. ವಿಶ್ವವಿದ್ಯಾಲಯಕ್ಕೆ ಯಾವುದೇ ರೀತಿಯ ಕೊರತೆ ಆಗದಂತೆ ನೋಡಿಕೊಳ್ಳುವುದು ಸರ್ಕಾರದ ಆಧ್ಯ ಕರ್ತವ್ಯವಾಗಿದೆ ಎಂದರು.ಪ್ರತಿಯೊರ್ವ ವಿದ್ಯಾರ್ಥಿನಿಯರು ಶಿಕ್ಷಣದ ಜೊತೆ ವಿಶೇಷ ಕೌಶಲ್ಯ ತರಬೇತಿ ಪಡೆದುಕೊಂಡು ಸ್ವಾವಲಂಬಿ ಬದುಕು ಸಾಧಿಸಬೇಕು, ಕೇಂದ್ರ ಮತ್ತು ರಾಜ್ಯ ಸರ್ಕಾರ ಮಹಿಳೆಯರಿಗೆ ಎಲ್ಲ ಕ್ಷೇತ್ರಗಳಲ್ಲಿ ಶೇ.50ರಷ್ಟು ಮೀಸಲಾತಿ ಕಲ್ಪಿಸಿದೆ ಮತ್ತು ಸ್ವಯಂ ಉದ್ಯೋಗ ಮಾಡಲು ಸಬ್ಸಿಡಿ ಸಾಲ ನೀಡುತ್ತದೆ ಇಂತಹ ಅವಕಾಶಗಳನ್ನು ವಿದ್ಯಾರ್ಥಿನಿಯರು ಸದುಪಯೋಗ ಮಾಡಿಕೊಳ್ಳಬೇಕು. ಪರೀಕ್ಷೆಯಲ್ಲಿ ಅತೀ ಹೆಚ್ಚು ಅಂಕ ಪಡೆಯುವುದರ ಜತೆಗೆ ತಮ್ಮಲ್ಲಡಗಿರುವ ವಿಶೇಷ ಕೌಶಲ್ಯ ಬಳಸಿಕೊಂಡು ವ್ಯಕ್ತಿತ್ವ ರೂಪಿಸಿಕೊಳ್ಳಬೇಕು. ಈ ನಿಟ್ಟಿನಲ್ಲಿ ವಿಶ್ವವಿದ್ಯಾಲಯಗಳು ತಮ್ಮ ಕರ್ತವ್ಯ ನಿರ್ವಹಿಸಬೇಕೆಂದರು.

ಕ.ರಾ.ಅ.ಮ.ವಿ.ವಿ. ವಿಜಯಪುರ ವಿಶ್ರಾಂತ ಕುಲಪತಿ ಪ್ರೊ.ಗೀತಾ ಬಾಲಿ ಮಾತನಾಡಿ, ವಿದ್ಯಾರ್ಥಿನಿಯರು ತಮ್ಮಲ್ಲಿನ ಅಗಾಧ ಶಕ್ತಿ ಮತ್ತು ಸಾಮರ್ಥ್ಯದ ಸದ್ಬಳಕೆ ಮಾಡಿಕೊಂಡು ಸಮಾಜದಲ್ಲಿ ಸ್ಥಾನಮಾನ ಗಿಟ್ಟಿಸಿಕೊಳ್ಳಬೇಕೆಂದರು.

ಕ.ರಾ.ಅ.ಮ.ವಿ.ವಿ. ವಿಜಯಪುರ ಕುಲಪತಿ ಪ್ರೊ.ವಿಜಯಾ ಕೋರಿಶೆಟ್ಟಿ, ಡೀನ್ ಹಾಗೂ ಶಿಕ್ಷಣ ನಿಕಾಯ ಪ್ರೊ.ಹೂವಣ್ಣ ಸಕ್ಪಾಲ್ ಅವರು ಸಾಂದರ್ಭಿಕವಾಗಿ ಮಾತನಾಡಿದರು.

ಕ.ರಾ.ಅ.ಮ.ವಿ.ವಿ. ವಿಜಯಪುರ ಗ್ರಂಥಾಲಯ ಹಾಗೂ ಮಾಹಿತಿ ವಿಜ್ಞಾನ ವಿಭಾಗದ ಮುಖ್ಯಸ್ಥ ಪ್ರೊ.ಪಿ.ಜಿ.ತಡಸದ ಬಹುಮಾನ ವಿತರಣೆ ಕಾರ್ಯಕ್ರಮ ನಡೆಸಿಕೊಟ್ಟರು. ಪ್ರೊ.ಎಂ.ಎಸ್.ಗಡ್ಡಿ ಸ್ಮರಣಿಕೆ ವಿತರಣೆ ಕಾರ್ಯಕ್ರಮ ನಡೆಸಿಕೊಟ್ಟರು. ದಾನಮ್ಮದೇವಿ ಮಹಿಳಾ ಕಾಲೇಜಿನ ಪ್ರಾಚಾರ್ಯ ಪ್ರೊ.ಎಂ.ಎಂ. ಹಿರೇಮಠ ಸ್ವಾಗತಿಸಿದರು. ಪ್ರೊ.ಬಿ.ಎನ್. ಬಾರಕೇರ ಪರಿಚಯಿಸಿದರು, ಪ್ರೊ.ಜಿ.ಎ. ಮೇತ್ರಿ ಮತ್ತು ಪ್ರೊ.ಸೌರಭ ಜಿಗಬಡ್ಡಿ ನಿರೂಪಿಸಿದರು.ಕ.ರಾ.ಅ.ಮ.ವಿ.ವಿ. ವಿಜಯಪುರ ವಿದ್ಯಾರ್ಥಿನಿ ಕ್ಷೇಮಪಾಲನ ನಿರ್ದೇಶಕಿ ಪ್ರೋ.ಜ್ಯೋತಿ ಉಪಾಧ್ಯೆ ವಂದಿಸಿದರು. ಮಧು ಕುಂಬಾರ ಸಂಗಡಿಗರು ಪ್ರಾರ್ಥಿಸಿದರು. ಸುರೇಖಾ ದಳವಾಯಿ ಸಂಗಡಿಗರು ಮಹಿಳಾ ಗೀತೆ ಹಾಡಿದರು.

ಮೂರು ದಿನಗಳ ಉಟೋಪಚಾರದ ವ್ಯವಸ್ಥೆ ಮಾಡಿದ್ದ ಸಂಜಯ ಲಕ್ಷ್ಮಣ ತಳೇವಾಡ ಹಾಗೂ ಆಶಾದೇವಿ ಜಗದೀಶ ಗುಡಗುಂಟಿ ಸೇರಿದಂತೆ ಗಣ್ಯಮಾನ್ಯರಿಗೆ ಸತ್ಕರಿಸಲಾಯಿತು.

----

ಯುವಜನೋತ್ಸವದ ಫಲಿತಾಂಶ

ಒಟ್ಟಾರೆ (ಓವರ್ ಆಲ್) ಚಾಂಪಿಯನ್‌ಶಿಪ್

ವಿಜೇತರು: ಎಸ್‌ಜೆಎಂವಿಎಸ್ ಕಲಾ, ವಾಣಿಜ್ಯ ಮಹಿಳಾ ಮಹಾವಿದ್ಯಾಲಯ-ಹುಬ್ಬಳ್ಳಿ

ರನ್ನರ್‌ ಅಪ್‌: ರನ್ನರ್ ಅಪ್ -ಗೋದುತಾಯಿ ದೊಡ್ಡಪ್ಪ ಅಪ್ಪ ಮಹಿಳಾ ಪದವಿ ಮಹಾವಿದ್ಯಾಲಯ-ಕಲಬುರ್ಗಿ

ಈವೆಂಟ್‌ವಾರು ಚಾಂಪಿಯನ್‌ಶಿಪ್-

1.ಸಂಗೀತ ಸ್ಪರ್ಧೆ -

ವಿಜೇತರು: ಎಸ್‌ಜೆಎಂವಿಎಸ್ ಕಲಾ, ವಾಣಿಜ್ಯ ಮಹಿಳಾ ಮಹಾವಿದ್ಯಾಲಯ-ಹುಬ್ಬಳ್ಳಿ

ರನ್ನರ್ ಅಪ್- ಗೋದುತಾಯಿ ದೊಡ್ಡಪ್ಪ ಅಪ್ಪ ಮಹಿಳಾ ಪದವಿ ಮಹಾವಿದ್ಯಾಲಯ-ಕಲಬುರ್ಗಿ

2.ನೃತ್ಯ ಸ್ಪರ್ಧೆ -

ವಿಜೇತರು: ಎಸ್‌ಜೆಎಂವಿಎಸ್ ಬಿಬಿಎ ಮಹಿಳಾ ಮಹಾವಿದ್ಯಾಲಯ-ಹುಬ್ಬಳ್ಳಿ

ರನ್ನರ್ ಅಪ್: ಎಸ್‌ಜೆಎಂವಿಎಸ್ ಕಲಾ, ವಾಣಿಜ್ಯ ಮಹಿಳಾ ಮಹಾವಿದ್ಯಾಲಯ-ಹುಬ್ಬಳ್ಳಿ

3.ಸಾಹಿತ್ಯ ಸ್ಪರ್ಧೆ -

ವಿಜೇತರು: ಗೋದುತಾಯಿ ದೊಡ್ಡಪ್ಪ ಅಪ್ಪ ಮಹಿಳಾ ಪದವಿ ಮಹಾವಿದ್ಯಾಲಯ-ಕಲಬುರ್ಗಿ

ರನ್ನರ್ ಅಪ್- ಕೆಎಸ್ಎಡಬ್ಲುಯು, ವಿಜಯಪುರ

ರಂಗಭೂಮಿ ಸ್ಪರ್ಧೆ -

ರನ್ನರ್ ಅಪ್ - ಶ್ರೀಮತಿ ವೀರಮ್ಮಗಂಗಸಿರಿ ಮಹಿಳಾ ಕಾಲೇಜು ಕಲಬುರ್ಗಿ

ವಿನ್ನರ್ - ಎಸ್‌ಜೆಎಂವಿಎಸ್ ಕಲಾ, ವಾಣಿಜ್ಯ ಮಹಿಳಾ ಮಹಾವಿದ್ಯಾಲಯ-ಹುಬ್ಬಳ್ಳಿ.

ಲಲಿತಕಲೆಗಳು ಸ್ಪರ್ಧೆ

ವಿಜೇತರು: ಎಸ್‌ಜೆಎಂವಿಎಸ್ ಕಲಾ, ವಾಣಿಜ್ಯ ಮಹಿಳಾ ಮಹಾವಿದ್ಯಾಲಯ-ಹುಬ್ಬಳ್ಳಿ

ರನ್ನರ್ ಅಪ್ - ಎಸ್‌ಜೆಎಂವಿಎಸ್ ಬಿಬಿಎ ಮಹಿಳಾ ಮಹಾವಿದ್ಯಾಲಯ-ಹುಬ್ಬಳ್ಳಿ

ಸಾಂಸ್ಕೃತಿಕ ಮೆರವಣಿಗೆ ಸ್ಪರ್ಧೆ

ಪ್ರಥಮ:ಎಸ್‌ಜೆಎಂವಿಎಸ್ ಬಿಬಿಎ ಮಹಿಳಾ ಮಹಾವಿದ್ಯಾಲಯ ಹುಬ್ಬಳ್ಳಿ

ದ್ವಿತೀಯ- ಶ್ರೀಮತಿ ವೀರಮ್ಮಗಂಗಸಿರಿ ಮಹಿಳಾ ಕಾಲೇಜು ಕಲಬುರ್ಗಿ

ತೃತೀಯ: ಎಸ್‌ಜೆಎಂವಿಎಸ್ ಕಲಾ, ವಾಣಿಜ್ಯ ಮಹಿಳಾ ಮಹಾವಿದ್ಯಾಲಯ ಹುಬ್ಬಳ್ಳಿ