ಪ್ರಥಮ ದರ್ಜೆ ಕಾಲೇಜುಗಳ ಅಧ್ಯಾಪಕರಪ್ರಾದೇಶಿಕ ಮಟ್ಟದ ಸಾಮರ್ಥ್ಯ ನಿರ್ಮಾಣ ಕಾರ್ಯಕ್ರಮದಲ್ಲಿ ನಿರಂಜನ್ಕನ್ನಡಪ್ರಭ ವಾರ್ತೆ ಚಿತ್ರದುರ್ಗ
ವಿಶ್ವವಿದ್ಯಾಲಯಗಳ ಪಠ್ಯಕ್ರಮಗಳು ಏಕಶಿಸ್ತಿಯ ಅಧ್ಯಯನವಾಗಿರದೆ ಬಹುಶಿಸ್ತೀಯ ಅಧ್ಯಯನಗಳನ್ನು ಅಳವಡಿಸಿಕೊಳ್ಳುವ ಮೂಲಕ ಕಲಿಕೆ ವಿಸ್ತಾರಗೊಂಡು ಎಲ್ಲ ತರಹದ ಶಿಕ್ಷಣಣ ಕೌಶಲ್ಯಗಳನ್ನು ಕಲಿಸಬೇಕಾಗಿದೆ ಕರ್ನಾಟಕ ರಾಜ್ಯ ಉನ್ನತ ಶಿಕ್ಷಣ ಪರಿಷತ್ತಿನ ಉಪಾಧ್ಯಕ್ಷ ಪ್ರೊ.ಎಸ್.ಆರ್ ನಿರಂಜನ್ ಹೇಳಿದರು.ನಗರದ ಎಸ್‌ಜೆಎಂ ದಂತ ಮಹಾವಿದ್ಯಾಲಯ ಸಭಾಂಗಣದಲ್ಲಿ ಚಿತ್ರದುರ್ಗ ಮತ್ತು ದಾವಣಗೆರೆ ಜಿಲ್ಲೆಯ ಸರ್ಕಾರಿ, ಅನುದಾನಿತ, ಅನುದಾನ ರಹಿತ ಪ್ರಥಮ ದರ್ಜೆ ಕಾಲೇಜುಗಳ ಅಧ್ಯಾಪಕರಿಗೆ ಆಯೋಜಿಸಿದ್ದ ಒಂದುದಿನದ ಪ್ರಾದೇಶಿಕ ಮಟ್ಟದ ಸಾಮರ್ಥ್ಯ ನಿರ್ಮಾಣ ಕಾರ್ಯಾಗಾರವನ್ನು ಉದ್ಘಾಟಿಸಿ ಮಾತನಾಡಿದ ಅವರು ಪ್ರಾಥಮಿಕ ಶಿಕ್ಷಣದಿಂದ ವಿಶ್ವವಿದ್ಯಾಲಯ, ಕಾಲೇಜುಗಳ ವರೆಗೂ ಎಲ್ಲ ಪಠ್ಯಕ್ರಮಗಳನ್ನು ಸಂಶೋಧನೆ ಅಧ್ಯಯನಗಳ ಮೂಲಕ ಪಠ್ಯವನ್ನಾಗಿಸಬೇಕಾಗಿದೆ. ಹಾಗಾದಾಗ ಮಾತ್ರ ಅಧ್ಯಯನ ಪೂರೈಸುವ ಪದವೀಧರರು ಈ ಜಗತ್ತನ್ನು ಅರ್ಥಮಾಡಿಕೊಳ್ಳಲು ಸಾಧ್ಯ ಎಂದರು.
ಈ ದೇಶದ ಬಡತನದ ನಿವಾರಣೆಗೆ 2035ರ ತನಕ ಅಹಾರ ಭದ್ರತೆಯನ್ನು ಕಾಪಾಡಿಕೊಳ್ಳಲು ತಂತ್ರಜ್ಞಾನ ಅಭಿವೃದ್ಧಿಪಡಿಸಲಾಗಿದೆ. ಅದರೆ ನಾವು ವಿದ್ಯಾರ್ಥಿಗಳಿಗೆ ಪರಿಣಾಮಕಾರಿಯದ ಶಿಕ್ಷಣ ಕಲಿಸಲು ಹಿಂದೆ ಬಿದ್ದಿದ್ದೇವೆ. ಶಿಕ್ಷಕರು ವಿದ್ಯಾರ್ಥಿಗಳಿಗೆ ಕಲಿಸುವ ತರಗತಿಗಳು ಯಾಂತ್ರಿಕವಾಗಿರದೆ ಸೃಜನಶೀಲವಾಗಿರಬೇಕು. ಕೌಶ್ಯಲಗಳನ್ನು ಒಳಗೊಂಡಿರಬೇಕು ಹಾಗೂ ಬಹು ಶಿಸ್ತೀಯ ಅಧ್ಯಯನಗಳು ಅಳಡಿಸಿಕೊಳ್ಳಬೇಕಾಗಿದೆ ಎಂದರು.ಶ್ರೀ ಜಗದ್ಗುರು ಮುರುಘರಾಜೇಂದ್ರ ಬೃಹನ್ಮಠ ಹಾಗೂ ಎಸ್‌ಜೆಎಂ ವಿದ್ಯಾಪೀಠ ಆಡಳಿತ ಮಂಡಳಿ ಸದಸ್ಯ ಡಾ.ಬಸವಕುಮಾರ ಸ್ವಾಮಿಗಳು ಮಾತನಾಡಿ, ಪ್ರಸ್ತುತ ಶಿಕ್ಷಣದಲ್ಲಿ ಬಹುಶಿಸ್ತೀಯ ಅಧ್ಯಯನ ಮತ್ತು ಅಂತರ ಶಿಸ್ತೀಯ ಅಧ್ಯಯನ ಒಳಪಡಬೇಕು. ಈ ನಿಟ್ಟಿನಲ್ಲಿ ವಿಶ್ವವಿದ್ಯಾಲಯಗಳ ಜವಾಬ್ದಾರಿ ಬಹಳ ಮುಖ್ಯ. ಕಲಿಕೆಯ ಸನ್ನಿವೇಶ, ಸಂದರ್ಭಗಳನ್ನು ಅನುಸರಿಸಿ ಶಿಕ್ಷಣವನ್ನು ಸೃಷ್ಟಿ ಮಾಡಬೇಕಾಗಿದೆ ಅದರ ಜವಾಬ್ದಾರಿ ಅಧ್ಯಾಪಕರ ಮೇಲಿದೆ ಎಂದರು.
ಎಸ್‌ಜೆಎಂ ವಿಶ್ವವಿದ್ಯಾಲಯದ ಕುಲಪತಿ ಪ್ರೊ.ಕೆ.ಬಿ ಗುಡಸಿ ಅವರು, ಕಲಿಕೆಯ ಅಧ್ಯಯನಗಳು ಯಾವ ರೀತಿಯಲ್ಲಿ ಕೌಶಲ್ಯಗಳನ್ನು ಒಳಗೊಂಡಿರಬೇಕು. ಅವುಗಳನ್ನು ಪರಿಣಾಮಕಾರಿಯಾಗಿ ತಲುಪಿಸುವ ಮಾರ್ಗದ ಕುರಿತು ಮಾತನಾಡಿದರು.
ಶಿವಮೊಗ್ಗ ಕಾಲೇಜು ಶಿಕ್ಷಣ ಇಲಾಖೆ ಪ್ರಾದೇಶಿಕ ಜಂಟಿ ನಿರ್ದೇಶಕ ಪ್ರೊ.ಹೆಚ್ ಕೇಶವ ಕಾರ್ಯಾಗಾರದ ಅಧ್ಯಕ್ಷತೆ ವಹಿಸಿದ್ದರು.ಗೋಷ್ಟಿ-1ರಲ್ಲಿ ಸಂಪನ್ಮೂಲ ವ್ಯಕ್ತಿಗಳಾಗಿ ಭಾಗವಹಿಸಿದ್ದ ಕಾರ್ಪೋರೇಟ್ ತರಬೇತಿದಾರ ಮತ್ತು ಶೈಕ್ಷಣಿಕ ತಜ್ಞ ಮಹೇಶ್ ಮಾಸಾಳ್, ವಿಸ್ತಾರ್ ಜಿಂದಗಿ ಅವರು ವಿದ್ಯಾರ್ಥಿಗಳ ಕಲಿಕೆಗಾಗಿ ಮೌಲ್ಯಮಾಪನ ಮತ್ತು ಮೌಲ್ಯಮಾಪನ ತಂತ್ರಗಳು ಕುರಿತು ಮಾತನಾಡಿದರು.
ಎಸ್‌ಜೆಎಂ ವಿಶ್ವವಿದ್ಯಾಲಯ ಕುಲಸಚಿವ ಡಾ.ಗಣಾಚಾರಿ, ಡಾ.ಸಿ.ಟಿ ಜಯಣ್ಣ ಪ್ರೊ.ಎಂ.ಎಸ್ ಪರಮೇಶ್ವರ್ ಐಕ್ಯೂಎಸ್ಸಿ ಸಂಚಾಲಕ ವೇದಿಕೆಯಲ್ಲಿದ್ದರು. ಡಾ.ನವೀನ್ ವಿ.ಸ್ವಾಗತಿಸಿದರು. ಎಸ್‌ಜೆಎಂ ಕಲಾ ಮತ್ತು ವಾಣಿಜ್ಯ ಕಾಲೇಜಿನ ಪ್ರಾಂಶುಪಾಲ ಡಾ.ಎಲ್.ಈಶ್ವರಪ್ಪ ವಂದಿಸಿದರು. ಬಿ.ವೈ ಶ್ವೇತ ನಿರೂಪಿಸಿದರು.