ತಾಲೂಕಿನ ಖರ್ವಾ ಗ್ರಾಮದ ಶ್ರೀ ದುರ್ಗಾಂಬ ಧಾರ್ಮಿಕ ಹಾಗೂ ಕಲಾ ಪ್ರತಿಷ್ಠಾನ ಹಾಗೂ ಶ್ರೀ ದುರ್ಗಾಂಬ ದೇವಸ್ಥಾನ ವತಿಯಿಂದ ವಾರ್ಷಿಕ ದೀಪೋತ್ಸವ ಹಾಗೂ ಭಜನ ಸಂಧ್ಯಾ ಕಾರ್ಯಕ್ರಮ ಎರಡು ದಿನಗಳ‌ ಕಾಲ ವಿಜೃಂಭಣೆಯಿಂದ ನಡೆಯಿತು.

ವಾರ್ಷಿಕ ದೀಪೋತ್ಸವ, ಭಜನ ಸಂಧ್ಯಾ ಕಾರ್ಯಕ್ರಮ

ಕನ್ನಡಪ್ರಭ ವಾರ್ತೆ ಹೊನ್ನಾವರ

ತಾಲೂಕಿನ ಖರ್ವಾ ಗ್ರಾಮದ ಶ್ರೀ ದುರ್ಗಾಂಬ ಧಾರ್ಮಿಕ ಹಾಗೂ ಕಲಾ ಪ್ರತಿಷ್ಠಾನ ಹಾಗೂ ಶ್ರೀ ದುರ್ಗಾಂಬ ದೇವಸ್ಥಾನ ವತಿಯಿಂದ ವಾರ್ಷಿಕ ದೀಪೋತ್ಸವ ಹಾಗೂ ಭಜನ ಸಂಧ್ಯಾ ಕಾರ್ಯಕ್ರಮ ಎರಡು ದಿನಗಳ‌ ಕಾಲ ವಿಜೃಂಭಣೆಯಿಂದ ನಡೆಯಿತು.

ಪ್ರಥಮ ದಿನದ ಸಭಾ ಕಾರ್ಯಕ್ರಮವನ್ನು ಪಾರಂಪರಿಕ ವೈದ್ಯ ಗೋಪಾಲ ಹೆಗಡೆ ಉದ್ಘಾಟಿಸಿದರು. ಖರ್ವಾ ಗ್ರಾಪಂ ಅಧ್ಯಕ್ಷ ಶ್ರೀಧರ ನಾಯ್ಕ ಅಧ್ಯಕ್ಷತೆ ವಹಿಸಿದ್ದರು. ರಾಘವೇಶ್ವರ ಭಾರತಿ ಸವೇದ ಸಂಸ್ಕೃತ ಮಹಾವಿದ್ಯಾಲಯ ಪ್ರಾಚಾರ್ಯ ಡಾ. ನಾಗಪತಿ ಕೆ. ಭಟ್, ದೂರಸಂಪರ್ಕ ಇಲಾಖೆಯ ನಿವೃತ್ತ ನೌಕರ ಮಂಜುನಾಥ ಎಂ. ಹೆಗಡೆ, ಖರ್ವಾ ವ್ಯವಸಾಯ ಸೇವಾ ಸಹಕಾರಿ ಸಂಘದ ಅಧ್ಯಕ್ಷ ದ್ಯಾವ ಗೌಡ, ದುರ್ಗಾಂಬ ಬೋರ್ ವೆಲ್ ಮಾಲೀಕ ಜಯದತ್ತ, ನಾರಾಯಣ ಎಂ. ಭಟ್ಟ ಮುಲ್ಲೆಮಕ್ಕಿ ಉಪಸ್ಥಿತರಿದ್ದರು. ಉತ್ಸವ ಸಮಿತಿಯ ಅಧ್ಯಕ್ಷರು ಜೀವ ವಿಮಾ ಮುಖ್ಯಸಲಹೆಗಾರ ಜಿ.ಎಂ. ಹೆಗಡೆ ನಿರ್ವಹಿಸಿದರು. ಸಂಸ್ಥೆಯ ಅಧ್ಯಕ್ಷ ಎನ್.ಪಿ. ಯಾಜಿ ಪ್ರಾಸ್ತಾವಿಕ ನುಡಿಗಳನ್ನಾಡಿದರು .

ಇನ್ನು ಸಮಾರೋಪ ಸಮಾರಂಭದಲ್ಲಿ ಮುಖ್ಯ ಅತಿಥಿಗಳಾಗಿದ್ದ ಜಿಲ್ಲಾ ಶಿಕ್ಷಣ ಮತ್ತು ತರಬೇತಿ ಕೇಂದ್ರ ಶಿರಸಿ ಶೈಕ್ಷಣಿಕ ಜಿಲ್ಲೆಯ ಪ್ರಾಚಾರ್ಯ ಎಂ.ಎಸ್. ಹೆಗಡೆ ಯಲಗುಪ್ಪ ಮಾತನಾಡಿ, ನಾವು ಮಕ್ಕಳಿಗೆ ಮೌಲ್ಯಗಳ ಬಗ್ಗೆ ಅರಿವು ಮೂಡಿಸುವ ಅಗತ್ಯ ಇದೆ ಎಂದರು.

ಸರಕಾರಿ ಪದವಿ ಪೂರ್ವ ಕಾಲೇಜು ಅಳ್ಳಂಕಿಯ ಪ್ರಾಚಾರ್ಯ ಡಾ. ಜಿ.ಎಸ್. ಹೆಗಡೆ ಹಡಿನಬಾಳ, ಉದ್ಯಮಿ ಕೃಷ್ಣಮೂರ್ತಿ ಭಟ್ಟ ಶಿವಾನಿ ಮಾತನಾಡಿದರು.

ಶ್ರೀ ದುರ್ಗಾಂಬ ದೇವಸ್ಥಾನದ ಕಾರ್ಯದರ್ಶಿ ವಿಷ್ಣು ಹೆಗಡೆ ಉಪಸ್ಥಿತರಿದ್ದರು. ಈ ಸಂದರ್ಭ ಪ್ರಸಿದ್ಧ ಯಕ್ಷಗಾನ ಭಾಗವತರಾದ ಸುಬ್ರಾಯ ಈಶ್ವರ ಹೆಗಡೆ ಕಪ್ಪೆ ಕೆರೆ, ವೇದಮೂರ್ತಿ ಗಜಾನನ ಮಹಾಬಲೇಶ್ವರ ಭಟ್ಟ ಕಡೆಹಳ್ಳ ಹಾಗೂ ವ್ಯವಸಾಯ ಸೇವಾ ಸಹಕಾರಿ ಸಂಘದ ನಿರ್ದೇಶಕ ಗಜಾನನ ನಾರಾಯಣ ನಾಯ್ಕ ಅವರನ್ನು ಸನ್ಮಾನಿಸಲಾಯಿತು. ಸಾಧಕ ವಿದ್ಯಾರ್ಥಿಗಳನ್ನು ಪುರಸ್ಕರಿಸಲಾಯಿತು.

ನಿವೃತ್ತ ಮುಖ್ಯಾಧ್ಯಾಪಕ ಎಂ.ಟಿ. ಹೆಬ್ಬಾರ್ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು.

ಶಿಕ್ಷಕ ಸಿ.ಆರ್‌. ಹೆಗಡೆ, ಪ್ರದೀಪ್ ಭಟ್ ಖರ್ವಾ ನಿರ್ವಹಿಸಿದರು. ಸಮಿತಿಯ ಸದಸ್ಯ ಜಿ.ಎಸ್. ಹೆಗಡೆ ವಂದಿಸಿದರು. ನಂತರ ನಡೆದ ಸಾಂಸ್ಕೃತಿಕ ಕಾರ್ಯಕ್ರಮದಲ್ಲಿ ವಿವಿಧ ಭಜನಾ ಮಂಡಳಿಗಳಿಂದ ಭಜನಾ ಕಾರ್ಯಕ್ರಮ ನಡೆಯಿತು. ಭಕ್ತಿ ಸಂಗೀತ ಕಾರ್ಯಕ್ರಮದಲ್ಲಿ ಭಾರತಿ ಆರ್. ಹೆಗಡೆ, ಸರೋಜಾ ಎಸ್. ಭಟ್ ಹೆಗ್ಗೆರೆ ಕಾರ್ಯಕ್ರಮ ನೀಡಿದರು. ನಂತರ ಸ್ಥಳೀಯ ಹವ್ಯಾಸಿ ಕಲಾವಿದರಿಂದ ಕಂಸ ವಧೆ ಎಂಬ ಯಕ್ಷಗಾನ ನಡೆದು ಜನಮನರಂಜಿಸಿತು. ಎರಡು ದಿನಗಳ ಕಾರ್ಯಕ್ರಮದಲ್ಲಿ ಊರಿನ ಹಾಗೂ ಪರ ಊರಿನ ಅನೇಕ ಭಕ್ತಾದಿಗಳು ಭಾಗವಹಿಸಿ ದೇವಿಯ ಕೃಪೆಗೆ ಪಾತ್ರರಾದರು.