ಸಾರಾಂಶ
ಎರಡು ದಶಕದ ಕಾಲ ಸಂಸದನಾಗಿ ಆಯ್ಕೆ ಮಾಡಿದ್ದ ದಾವಣಗೆರೆ ಲೋಕಸಭಾ ಕ್ಷೇತ್ರದ ಜನರ ಸೇವೆಯನ್ನು ಅತ್ಯಂತ ಪ್ರಾಮಾಣಿಕವಾಗಿ, ನಿಷ್ಟೆಯಿಂದ ಮಾಡಿದ ಆತ್ಮತೃಪ್ತಿ ಇದೆ ಎಂದು ಕೇಂದ್ರದ ಮಾಜಿ ಸಚಿವ ಡಾ.ಜಿ.ಎಂ.ಸಿದ್ದೇಶ್ವರ ದಾವಣಗೆರೆಯಲ್ಲಿ ಹೇಳಿದ್ದಾರೆ.
- ಚುನಾವಣೆಯಲ್ಲಿ ಸೋತ ಮಾತ್ರಕ್ಕೆ ಕತೆ ಮುಗಿಯಲ್ಲ: ಕೇಂದ್ರ ಮಾಜಿ ಸಚಿವ - - - ಕನ್ನಡಪ್ರಭ ವಾರ್ತೆ, ದಾವಣಗೆರೆ
ಎರಡು ದಶಕದ ಕಾಲ ಸಂಸದನಾಗಿ ಆಯ್ಕೆ ಮಾಡಿದ್ದ ದಾವಣಗೆರೆ ಲೋಕಸಭಾ ಕ್ಷೇತ್ರದ ಜನರ ಸೇವೆಯನ್ನು ಅತ್ಯಂತ ಪ್ರಾಮಾಣಿಕವಾಗಿ, ನಿಷ್ಟೆಯಿಂದ ಮಾಡಿದ ಆತ್ಮತೃಪ್ತಿ ಇದೆ ಎಂದು ಕೇಂದ್ರದ ಮಾಜಿ ಸಚಿವ ಡಾ.ಜಿ.ಎಂ.ಸಿದ್ದೇಶ್ವರ ಹೇಳಿದರು.ನಗರದ ಪಾರ್ವತಮ್ಮ ಶಾಮನೂರು ಶಿವಶಂಕರಪ್ಪ ಕಲ್ಯಾಣ ಮಂಟಪದ ಬಳಿ ಉದ್ಯಮಿ ಬಾಡದ ಆನಂದರಾಜರ ಎಸ್‌ಕೆಡಿ ರಿಯಲ್ ಎಸ್ಟೇಟ್ ಕಚೇರಿ ಉದ್ಘಾಟಿಸಿ ಮಾತನಾಡಿದ ಅವರು, ಕೃಷಿ ಹಾಗೂ ವ್ಯಾಪಾರ ಮಾಡಿ, ದುಡಿದು ಶ್ರೀಮಂತನಾಗಿದ್ದೇನೆ. ತಂದೆಯವರ ಹಾದಿಯಲ್ಲಿ ರಾಜಕೀಯಕ್ಕೆ ಬಂದು, ಪ್ರಾಮಾಣಿಕವಾಗಿ ಜನರ ಸೇವೆ ಮಾಡಿದ ತೃಪ್ತಿ ಇದೆ ಎಂದರು.
ಅಧಿಕಾರವಿದ್ದರೆ ಸರ್ಕಾರದ ಸೌಲಭ್ಯ ಕಲ್ಪಿಸಬಹುದು. ನಾನಂದೂ ನಿರಂತರವಾಗಿ ಜನ ಸೇವೆ ಮಾಡುತ್ತಿದ್ದೇನೆ ಎಂದ ಅವರು, ಅನೇಕರು ಪಕ್ಷದ ಅಭ್ಯರ್ಥಿ ಪರ ಪ್ರಾಮಾಣಿಕವಾಗಿ ಕೆಲಸಮಾಡಿದ್ದಾರೆ. ಹೊಸ ಸಾಹಸಕ್ಕೆ ಮುಂದಾಗಿರುವ ಆನಂದರಾಜ ಯಶಸ್ವಿ ಉದ್ಯಮಿಯಾಗಲಿ ಎಂದು ಸಿದ್ದೇಶ್ವರ ಹಾರೈಸಿದರು.ಬಿಜೆಪಿ ಹಾಗೂ ರಾಜ್ಯ ಅಹಿಂದ ವರ್ಗಗಳ ಮುಖಂಡ ಎನ್.ಆರ್.ಲಕ್ಷ್ಮೀಕಾಂತ, ಜನತಾವಾಣಿ ಸಂಪಾದಕ ಎಂಎಸ್.ವಿಕಾಸ್, ವರದಿಗಾರರ ಕೂಟದ ಅಧ್ಯಕ್ಷ ನಾಗರಾಜ ಎಸ್.ಬಡದಾಳ್ ನಾಗರಾಜ್, ಉದ್ಯಮಿ ಎಂ.ಆನಂದ ಅವರನ್ನು ಸನ್ಮಾನಿಸಲಾಯಿತು.
ಹರಿಹರ ಶಾಸಕ ಬಿ.ಪಿ.ಹರೀಶ, ಬಿಜೆಪಿ ನಿಕಟ ಪೂರ್ವ ಜಿಲ್ಲಾಧ್ಯಕ್ಷ ಎಸ್.ಎಂ.ವೀರೇಶ್ ಹನಗವಾಡಿ, ಬಿ.ಎ ಸ್.ಜಗದೀಶ, ವಿಶ್ವ ಕರವೇ ರಾಜ್ಯಾಧ್ಯಕ್ಷ ಕೆ.ಜಿ.ಯಲ್ಲಪ್ಪ, ಪತ್ರಕರ್ತ ಸಂಜಯ್ ಸೇರಿದಂತೆ ಅನೇಕರು ಬಾಡದ ಆನಂದರಾಜ್‌ಗೆ ಶುಭ ಕೋರಿದರು.- - -
-12ಕೆಡಿವಿಜಿ10:ದಾವಣಗೆರೆಯಲ್ಲಿ ಬಾಡದ ಆನಂಜರಾಜರ ಎಸ್‌ಕೆಡಿ ರಿಯಲ್ ಎಸ್ಟೇಟ್ ಕಚೇರಿಯನ್ನು ಕೇಂದ್ರದ ಮಾಜಿ ಸಚಿವ ಡಾ.ಜಿ.ಎಂ.ಸಿದ್ದೇಶ್ವರ ಉದ್ಘಾಟಿಸಿದರು.