ಕೇರಳ ಮತ್ತು ಕರ್ನಾಟಕ ಸಂಪರ್ಕಿಸುವ ಬಂಡೀಪುರಅರಣ್ಯ ಮಾರ್ಗದಲ್ಲಿ ಪರ್ಯಾಯ ಸುರಂಗ ನಿರ್ಮಾಣ ಕಾರ್ಯ ಯಾವುದೇ ರೀತಿಯಲ್ಲೂ ಬೇಡ ಎಂದು ಹಿರಿಯ ಪತ್ರಕರ್ತ ಅಬ್ರಹಾಂ ಡಿ ಸಿಲ್ವ ಹೇಳಿದರು.

ಬಂಡೀಪುರ ಉಳಿಸಿ ಅಭಿಯಾನದಲ್ಲಿ ಪತ್ರಕರ್ತ ಅಬ್ರಹಾಂ ಡಿ ಸಿಲ್ವ ಹೇಳಿಕೆ । ಈ ಮಾರ್ಗವು ಹುಲಿ ಸಂರಕ್ಷಿತ ಪ್ರದೇಶವೆಂದು ಸರ್ಕಾರವೇ ಘೋಷಿಸಿದೆ

ಕನ್ನಡಪ್ರಭ ವಾರ್ತೆ ಚಾಮರಾಜನಗರ

ಕೇರಳ ಮತ್ತು ಕರ್ನಾಟಕ ಸಂಪರ್ಕಿಸುವ ಬಂಡೀಪುರಅರಣ್ಯ ಮಾರ್ಗದಲ್ಲಿ ಪರ್ಯಾಯ ಸುರಂಗ ನಿರ್ಮಾಣ ಕಾರ್ಯ ಯಾವುದೇ ರೀತಿಯಲ್ಲೂ ಬೇಡ ಎಂದು ಹಿರಿಯ ಪತ್ರಕರ್ತ ಅಬ್ರಹಾಂ ಡಿ ಸಿಲ್ವ ಹೇಳಿದರು.

ನಗರದ ಭುವನೇಶ್ವರಿ ವೃತ್ತದಲ್ಲಿ ಸಂಜೀವಿನಿ ಟ್ರಸ್ಟ್, ಹಸಿರು ಪಡೆ ಹಾಗೂ ವಿವಿದ ಸಂಘ ಸಂಸ್ಥೆ ವತಿಯಿಂದ ಹಮ್ಮಿಕೊಂಡಿದ್ದ ಬಂಡೀಪುರ ಉಳಿಸಿ ಅಭಿಯಾನದ ಅಂಗವಾಗಿ ನಡೆದ ಮಾನವ ಸರಪಳಿಯಲ್ಲಿ ಭಾಗವಹಿಸಿ ಅವರು ಮಾತನಾಡಿದರು.

ಕರ್ನಾಟಕ ಮತ್ತು ಕೇರಳವನ್ನು ಸಂಪರ್ಕಿಸುವ ಬಂಡೀಪುರದ ಅರಣ್ಯ ಪ್ರದೇಶದಲ್ಲಿ ರಾತ್ರಿ ಸಂಚಾರ ನಿರ್ಬಂಧ ಮಾಡಿರುವುದರಿಂದ 24 ಗಂಟೆಗಳ ಸಂಚಾರಕ್ಕೆ ಪರ್ಯಾಯ ಸುರಂಗ ನಿರ್ಮಾಣ ಸಾಧ್ಯತೆ ಬಗ್ಗೆ ಕೇಂದ್ರ ಸಚಿವರಾದ ನಿತಿನ್‌ ಗಡ್ಕರಿಯವರು ಅಧ್ಯಯನ ಸಮಿತಿ ರಚಿಸುವುದಕ್ಕೆ ಸಮ್ಮತಿ ನೀಡಿರುವುದನ್ನು ನಾವು ಖಂಡಿಸುತ್ತೇವೆ ಎಂದರು.

ಈ ಮಾರ್ಗವು ಹುಲಿ ಸಂರಕ್ಷಿತ ಪ್ರದೇಶವೆಂದು ಸರ್ಕಾರವೇ ಘೋಷಿಸಿದೆ. ಆದರೂ ಸರ್ಕಾರವೇಇಂತಹ ಪರ್ಯಾಯ ಮಾರ್ಗವನ್ನು ರಚಿಸಲು ಮುಂದಾಗಿರುವುದು ಸರಿಯಲ್ಲ. ಇದರಿಂದ ಮಾನವ ಮತ್ತು ಪ್ರಾಣಿಗಳ ನಡುವೆ ಸಂಘರ್ಷ ಉಂಟಾಗಿ ಪ್ರಾಣಿಗಳು ನಾಡಿನಕಡೆಗೆ ವಲಸೆ ಬರುತ್ತವೆ. ಇದರಿಂದ ಸಾರ್ವಜನಿಕರಿಗೂ ಪ್ರಾಣಿಗಳಿಗೂ ಆಗುವ ಅನಾನುಕೂಲವೇ ಹೆಚ್ಚು ಎಂದರು.

ಅರಣ್ಯನಾಶ, ಶಬ್ದ ಮಾಲಿನ್ಯ, ಅಂತರ್ಜಲ ಕುಸಿತ, ಭೂಕುಸಿತ, ಪ್ರಾಣಿ ಪಕ್ಷಿಗಳ ಸಂಕುಲ ನಾಶ ಇನ್ನು ಅನೇಕ ತೊಂದರೆಗಳ ಸಂಭವ ಸಾಧ್ಯತೆವಿದ್ದು, ಈ ಅವೈಜ್ಞಾನಿಕ ನಡೆಯನ್ನು ವಿರೋಧಿಸುತ್ತೇವೆ ಎಂದರು

ಸಮಾಜ ಸೇವಕಶ್ರೀನಿಧಿ ಕುದರ್ ಮಾತನಾಡಿ, ವನ್ಯಜೀವಿ ಸಂಪತ್ತು ಉಳಿದರೆ ನಾಡು ಉಳಿಯುತ್ತದೆ, ಜಿಲ್ಲೆಯಲ್ಲಿ ಶೇ.52ರಷ್ಟು ವನ್ಯ ಸಂಪತ್ತು ಇದ್ದು, ಶುದ್ದವಾದ ಗಾಳಿ ದೊರುಕುವದೇಶದ 10 ಜಿಲ್ಲೆಗಳಲ್ಲಿ ಚಾಮರಾಜನಗರವು ಒಂದು ಇದನ್ನು ನಾವು ಪ್ರತಿಯೊಬ್ಬರು ಅರಿಯಬೇಕು ಎಂದರು.

ಕಾಡು ಸಮೃದ್ಧವಾಗಿದ್ದರೆ ಮಾತ್ರ ಮಳೆ ಬೆಳೆ ಆಗುವುದು ಹೆಚ್ಚು ಹುಲಿ, ಆನೆಗಳನ್ನು ಹೊಂದಿರುವ ಬಂಡೀಪುರಅರಣ್ಯದಲ್ಲಿಯಾವುದೇರೀತಿಯ ಪರ್ಯಾಯ ಸುರಂಗ ಮಾರ್ಗ ಬೇಡ, ರಾತ್ರಿ ಸಂಚಾರ ನಿರ್ಬಂಧ ಮಾಡಿರುವುದ ಸರಿ, ಸುರಂಗ ಮಾರ್ಗದಿಂದ ಪ್ರಾಣಿಗಳಿಗೆ ಅನಾನುಕೂಲವಾಗಿ ಮಾನವ ಪ್ರಾಣಿ ಸಂಘರ್ಷ ಹೆಚ್ಚುವುದರಜೊತೆ ಪರಿಸರವು ಹಾಳಾಗುತ್ತದೆ ಸಮತೋಲನ ಕಳೆದುಕೊಳ್ಳುವುದರಿಂದ ಈ ಯೋಜನೆ ಬೇಡಎಂದರು.

ಕಾರ್ಯದರ್ಶಿ ಹಸಿರುಪಡೆ ಸಂಸ್ಥಾಪಕ ಸತೀಶ್‌ಕುಮಾರ್, ರೋಟರಿ ಸಿಲ್ಕ್ ಸಿಟಿ ಕಾರ್ಯದರ್ಶಿ ಸಂತೋಷ್, ಸರ್ಕಾರಿ ನಿವೃತ್ತ ನೌಕರರ ಸಂಘದ ಅಧ್ಯಕ್ಷ ನಾಗೇಶ್‌ರವರು, ಹಸಿರುಪಡೆಯ ಅಧ್ಯಕ್ಷರಾದ ಅಕ್ಷತಾಎಸ್‌ಜೈನ್, ಗೌರಿರಾಮಕೃಷ್ಣ, ಜಯಶ್ರೀ, ನಂದಿನಿ, ಜ್ಯೋತಿ ಭಾಗವಹಿಸಿದ್ದರು.

----------8ಸಿಎಚ್‌ಎನ್51ಚಾಮರಾಜನಗರದ ಭುವನೇಶ್ವರಿ ವೃತ್ತದಲ್ಲಿ ಹಮ್ಮಿಕೊಂಡಿದ್ದ ಬಂಡೀಪುರ ಉಳಿಸಿ ಅಭಿಯಾನದ ನಡೆಸಲಾಯಿತು.---------