ಕುದೂರು: ಪ್ರಕೃತಿಗಿಂತ ದೊಡ್ಡ ವೈದ್ಯ ಮತ್ತೊಬ್ಬರಿಲ್ಲ. ಏಕೆಂದರೆ ಪ್ರಕೃತಿಯಲ್ಲಿ ಗುಣವಾಗದ ಕಾಯಿಲೆಗಳು ಯಾವುದು ಇಲ್ಲ. ಈ ನೆಲದ ಪ್ರತಿ ಗಿಡಮರವೂ ಕೂಡಾ ಒಂದೊಂದು ಔಷಧಗುಣಗಳನ್ನು ಹೊಂದಿರುತ್ತದೆ. ಅದರ ಅರಿವನ್ನು ಮೂಡಿಸುವ ಕೆಲಸ ಆಗಬೇಕಾಗಿದೆ ಎಂದು ಪಾರಂಪರಿಕ ವೈದ್ಯ ಪರಿಷತ್‌ ರಾಜ್ಯಾಧ್ಯಕ್ಷ ಜಿ.ಮಹದೇವಯ್ಯ ತಿಳಿಸಿದರು

ಕುದೂರು: ಪ್ರಕೃತಿಗಿಂತ ದೊಡ್ಡ ವೈದ್ಯ ಮತ್ತೊಬ್ಬರಿಲ್ಲ. ಏಕೆಂದರೆ ಪ್ರಕೃತಿಯಲ್ಲಿ ಗುಣವಾಗದ ಕಾಯಿಲೆಗಳು ಯಾವುದು ಇಲ್ಲ. ಈ ನೆಲದ ಪ್ರತಿ ಗಿಡಮರವೂ ಕೂಡಾ ಒಂದೊಂದು ಔಷಧಗುಣಗಳನ್ನು ಹೊಂದಿರುತ್ತದೆ. ಅದರ ಅರಿವನ್ನು ಮೂಡಿಸುವ ಕೆಲಸ ಆಗಬೇಕಾಗಿದೆ ಎಂದು ಪಾರಂಪರಿಕ ವೈದ್ಯ ಪರಿಷತ್‌ ರಾಜ್ಯಾಧ್ಯಕ್ಷ ಜಿ.ಮಹದೇವಯ್ಯ ತಿಳಿಸಿದರು.

ಗ್ರಾಮದಲ್ಲಿ ಜಿಲ್ಲಾ ಪಾರಂಪರಿಕ ವೈದ್ಯ ಪರಿಷತ್ತು ವತಿಯಿಂದ ಧನ್ವಂತ್ರಿ ಜಯಂತಿ ಪ್ರಯುಕ್ತ ಉಚಿತ ಆರೋಗ್ಯ ತಪಾಸಣಾ ಶಿಬಿರದಲ್ಲಿ ಮಾತನಾಡಿದ ಅವರು, ಕಾಡಲ್ಲಿರುವ ಗಿಡಮರಗಳು ರೋಗ ಬಂದಾಗ ಅವುಗಳು ಹೇಗೆ ಅದನ್ನು ಎದುರಿಸಿ ಬೆಳೆಯುತ್ತವೆ. ಕಾಡುಪ್ರಾಣಿಗಳು ಕಾಯಿಲೆ ಬಂದಾಗ ಹೇಗೆ ಔಷಧ ಪಡೆಯುತ್ತವೆ ಎಂಬೆಲ್ಲಾ ಕುತೂಹಲಭರಿತ ವಿಷಯಗಳನ್ನು ತಿಳಿಯುತ್ತಾ ಹೋದರೆ ಪ್ರಕೃತಿಯ ಮಹತ್ವ ಅರ್ಥವಾಗುತ್ತದೆ. ಪ್ರಾಣಿ ಮತ್ತು ಸಸ್ಯ ಪ್ರಪಂಚದಲ್ಲಿ ಹಾಗೂ ಕಾಡಿನ ಸಂಪರ್ಕವಿರುವ ಜನರು ತಮಗೆ ತಾವೇ ವೈದ್ಯರಾಗಿ ರೋಗಳನ್ನು ಹೇಗೆ ವಾಸಿ ಮಾಡಿಕೊಳ್ಳುತ್ತಾರೆ ಎಂಬದನ್ನು ತಿಳಿದುಕೊಳ್ಳಬಹುದು ಎಂದರು.

ಚೌಡೇಶ್ವರಿ ದೇವಾಲಯದ ಪ್ರಧಾನ ಅರ್ಚಕ ಶಿವರಾಂ ಮಾತನಾಡಿ, ಪಾರಂಪರಿಕ ವೈದ್ಯದ ಮಹತ್ವವನ್ನು ಮಕ್ಕಳಿಗೆ ಚಿಕ್ಕಂದಿನಿಂದಲೇ ತಿಳಿಸಿ ಪ್ರಕೃತಿಯನ್ನು ಪ್ರೀತಿಸುವುದು ಕಲಿಸಬೇಕಾಗಿದೆ. ಅದಕ್ಕಿರುವ ಏಕೈಕ ಸ್ಥಳವೆಂದರೆ ಅದು ಶಾಲೆ. ಶಾಲೆಯ ಪಠ್ಯಗಳಲ್ಲಿ ಔಷಧಿ ಸಸ್ಯಗಳ ಕುರಿತು ಪರಿಚಯಿಸುವ ಕೆಲಸವಾಗಬೇಕು ಎಂದರು.

ಈ ಸಂದರ್ಭದಲ್ಲಿ ಮೂಳೆ ಮತ್ತು ಸ್ನಾಯುಗಳಿಗೆ ಸಂಬಂಧಿಸಿದ ಸಮಸ್ಯೆಗಳಿಗೆ ಸ್ಥಳದಲ್ಲೇ ಪರಿಹಾರ ನೀಡಿ ಚಿಕಿತ್ಸೆ ಮಾಡಿ ಕಳಿಸಲಾಯಿತು. ಪಾರಂಪರಿಕ ವೈದ್ಯರಾದ ಮೋಹನ್ ಸ್ವಾಮಿ, ಬ್ರಿಜ್ವಿತ ಯಾದವ್, ಡಾ. ಹರ್ಷಿತ, ಮೊದಲಕೋಟೆ ಕೃಷ್ಣಪ್ಪ, ಆಂಜನಪ್ಪ, ಪ್ರಸಾದ್, ಕೃಷ್ಣಮೂರ್ತಿ, ಹರ್ಷ ಮತ್ತಿತರರು ಭಾಗವಹಿಸಿದ್ದರು.

(ಫೋಟೋ ಸಿಂಗಲ್‌ ಕಾಲಂ ಬಳಸಬಹುದು)

17ಕೆಆರ್ ಎಂಎನ್ 4.ಜೆಪಿಜಿ

ಕುದೂರು ಗ್ರಾಮದಲ್ಲಿ ಪಾರಂಪರಿಕ ವೈದ್ಯ ಪರಿಷತ್ತಿನಿಂದ ಧನ್ವಂತ್ರಿ ಜಯಂತಿ ಮತ್ತು ಉಚಿತ ಆರೋಗ್ಯ ತಪಾಸಣಾ ಶಿಬಿರ.