ಸಾರಾಂಶ
ಹಾವೇರಿ: ಸಂಗೀತದ ಸಾಧನೆಗೆ ಜಾತಿ ಭೇದವಿಲ್ಲ, ಭಿನ್ನತೆ ಇಲ್ಲ. ಜಗತ್ತು ಸೃಷ್ಟಿಯಾದಗಿನಿಂದಲೂ ಸಂಗೀತವು ಹುಟ್ಟಿಗೊಂಡಿದೆ ಎಂದು ಹೊಸರಿತ್ತಿಯ ಗುದ್ದಲೇಶ್ವರ ಮಠದ ಶಿವಯೋಗೇಶ್ವರ ಸ್ವಾಮೀಜಿ ಹೇಳಿದರು. ತಾಲೂಕಿನ ಹೊಸರಿತ್ತಿಯ ಶ್ರೀ ಗುರು ಗುದ್ದಲಿ ಶಿವಯೋಗೀಶ್ವರ ಮಹಾಸ್ವಾಮಿಗಳ ಮಠದ ವತಿಯಿಂದ ಶರನ್ನವರಾತ್ರಿಯ ದುರ್ಗಾಷ್ಟಮಿ ಅಂಗವಾಗಿ ಏರ್ಪಡಿಸಿದ್ದ ೧೨೪ನೇ ವರ್ಷದ ಸಂಗೀತೋತ್ಸವ ಕಾರ್ಯಕ್ರಮವನ್ನು ಉದ್ಘಾಟಿಸಿ ಆರ್ಶೀವಚನ ನೀಡಿದರು.ಧಾರ್ಮಿಕ, ಸಾಮಾಜಿಕ, ಶೈಕ್ಷಣಿಕ, ಸಾಂಸ್ಕೃತಿಕ ಹೀಗೆ ಹಲವಾರು ಕ್ಷೇತ್ರದ ಪ್ರತಿಭೆಗಳಿಗೆ ಪ್ರೋತ್ಸಾಹ ನೀಡುತ್ತಾ ಬಂದಿರುವ ಶ್ರೀಮಠವು ಕಳೆದ ೧೨೪ ವರ್ಷಗಳಿಂದ ನಾಡಿನ ಹಲವಾರು ಸಂಗೀತಗಾರರನ್ನು ಕರೆಯಿಸಿ ಸಂಗೀತ ಕಾರ್ಯಕ್ರಮವನ್ನು ನಡೆಸುತ್ತಾ ಬರಲಾಗಿದೆ. ಸಂಗೀತವು ಕೇವಲ ಮನರಂಜನೆಯಲ್ಲ, ಅಲೌಕಿಕ ಅನುಭುತಿಯ ಸಂವೇದನಾ ಕ್ರಿಯೆಯಾಗಿದೆ. ಸಂಗೀತ ಕಲೆಯು ಪ್ರತಿಯೊಂದು ಜೀವರಾಶಿಗಳನ್ನು ತನ್ನತ್ತ ಸೆಳೆದುಕೊಳ್ಳುವ ಶಕ್ತಿ ಇದೆ ಎಂದರು.ಈ ಸಂದರ್ಭದಲ್ಲಿ ಮುಖ್ಯ ಅತಿಥಿಗಳಾಗಿ ಸಿದ್ದರಾಜ ಕಲಕೋಟಿ, ನರೇಶ್ ಮಂತಟ್ಟಿ, ಪತ್ರಕರ್ತ ನಿಂಗಪ್ಪ ಚಾವಡಿ ಭಾಗವಹಿಸಿದ್ದರು. ಕಾರ್ಯಕ್ರಮದಲ್ಲಿ ರಾಜ್ಯದ ಬೇರೆ ಬೇರೆ ಕಡೆಯಿಂದ ಹಲವಾರು ಸಂಗೀತ ದಿಗ್ಗಜರು ಆಗಮಿಸಿ ಸಂಗೀತ ಸೇವೆಯನ್ನ ನೀಡಿದರು. ಕಾರ್ಯಕ್ರಮದಲ್ಲಿ ಪ್ರಮುಖರಾದ ಸಿದ್ದರಾಮ್ ಶೆಟ್ಟಿಶೆಟ್ಟರ್ ಮುತ್ತಣ್ಣ ಮಠದ, ಚನ್ನವೀರ ಸ್ವಾಮಿ ಹಾವೇರಿಮಠ, ಗಿರೀಶ ಅಂಕಲಕೋಟಿ ಮುಂತಾದ ಪ್ರಮುಖರು ಭಾಗವಹಿಸಿದ್ದರು. ಮಹೇಶ್ ಪಟ್ಟಣಶೆಟ್ಟಿ ನಿರೂಪಿಸಿದರು.