ಗುರು ವಿರಕ್ತರಲ್ಲಿ ಯಾವುದೇ ಭೇದವಿಲ್ಲ: ಶ್ರೀಶೈಲ ಜಗದ್ಗುರು

| Published : Mar 31 2024, 02:10 AM IST

ಗುರು ವಿರಕ್ತರಲ್ಲಿ ಯಾವುದೇ ಭೇದವಿಲ್ಲ: ಶ್ರೀಶೈಲ ಜಗದ್ಗುರು
Share this Article
  • FB
  • TW
  • Linkdin
  • Email

ಸಾರಾಂಶ

ಕನಮಡಿ ಗ್ರಾಮದಲ್ಲಿ ಶನಿವಾರ ವಿರಕ್ತಮಠದಲ್ಲಿ ಶ್ರೀ ಮುರುಘೇಂದ್ರ ಮಹಾಶಿಯೋಗಿಗಳ ಶತಮಾನೋತ್ಸವ, ಮೂರ್ತಿ ಪ್ರತಿಷ್ಠಾಪನೆ ಮತ್ತು ಕಳಸಾರೋಹಣ ಶ್ರೀಶೈಲ ಜಗದ್ಗುರುಗಳ ನೇತೃತ್ವದಲ್ಲಿ ನಡೆಯಿತು.

ಕನ್ನಡಪ್ರಭ ವಾರ್ತೆ ತಿಕೋಟಾ

ಆಧ್ಯತ್ಮದ ಮೂಲಕ ಸಮಾಜವನ್ನು ಸರಿದಾರಿಗೆ ತರುವಲ್ಲಿ ಶ್ರಮಿಸಿದ ಶ್ರೀ ಗುರು ಮುರುಘೇಂದ್ರ ಶಿವಯೋಗಿಗಳ ತತ್ವಾದರ್ಶಗಳನ್ನು ಪ್ರತಿಯೊಬ್ಬರು ಜೀವನದಲ್ಲಿ ಅಳವಡಿಸಿಕೋಳ್ಳಬೇಕು ಎಂದು ಶ್ರೀಶೈಲ ಪೀಠದ ಡಾ, ಚನ್ನಸಿದ್ಧರಾಮ ಪಂಡಿತರಾಧ್ಯ ಶಿವಾಚಾರ್ಯರು ಹೇಳಿದರು,

ತಾಲೂಕಿನ ಕನಮಡಿ ಗ್ರಾಮದಲ್ಲಿ ಶನಿವಾರ ವಿರಕ್ತಮಠದಲ್ಲಿ ಶ್ರೀ ಮುರುಘೇಂದ್ರ ಮಹಾಶಿಯೋಗಿಗಳ ಶತಮಾನೋತ್ಸವ, ಮೂರ್ತಿ ಪ್ರತಿಷ್ಠಾಪನೆ ಮತ್ತು ಕಳಸಾರೋಹಣ, ಶ್ರೀ ಗುರು ಗಂಗಾಧರೇಶ್ವರ ಲಿಂಗ ಪ್ರತಿಷ್ಠಾಪನೆ, ಶ್ರೀ ಶಾಂತಲಿಂಗ ಮಹಸ್ವಾಮಿಗಳ ಜನ್ಮಶತಮಾನೋತ್ಸವ ಮತ್ತು ವೇದಮೂರ್ತಿ ಲೋಕನಾಥ ಸ್ವಾಮಿಗಳ ವರ್ಧಂತಿ ಮಹೋತ್ಸವ ಮತ್ತು ಗಡಿನಾಡಿನ ಶರಣ ಸಂಪದ ಕಿರುಗ್ರಂಥ ಬಿಡುಗಡೆ ಕಾರ್ಯಕ್ರಮದ ಸಾನ್ನಿಧ್ಯ ವಹಿಸಿ ಮಾತಾನಾಡಿದರು.

ಮಹಾತ್ಮರು, ಸಂತರು, ಶಿವಯೋಗಿಗಳು, ಸಾಧುಗಳು, ಹಿರಿಯರಿಗೆ ನಿಂದನೆ ಮಡಬಾರದು. ನಿಂದನೆ ಮಾಡಿದರೆ ಅದು ನಮಗೆ ತಟ್ಟುತ್ತದೆ. ನಮ್ಮ ಪಾಪದ ಫಲ ಸಿಗುತ್ತದೆ. ನಾವು ಮಹಾತ್ಪುರುಷರ, ಹಿರಿಯರ ಸೇವೆ ಮಾಡಿ ಒಳ್ಳಯ ಫಲ ಪಡೆಯಬೇಕು. ಗುರು ವಿರಕ್ತರಲ್ಲಿ ಯಾವುದೇ ಭೇದವಿಲ್ಲ.ಗುರು ವಿರಕ್ತ ಎರಡು ಒಂದೇ. ಎಲ್ಲರೂ ಧರ್ಮ ಉಳಿಸಿವ ಕಾರ್ಯ ಮಾಡಬೇಕು ಎಂದು ಹೇಳಿದರು.

ಮಹಾರಾಷ್ಟ್ರದ ಅಂಧಾಜೋಗಾಯಿ ಮಠದ ಶಂಬುಲಿಂಗ ಶಿವಾಚಾರ್ಯರು, ತಿಕೋಟಾ ಹಿರೇಮಠದ ಶಿವಬಸವ ಶಿವಾಚಾರ್ಯರು, ಹೊನವಾಡದ ಪ್ರವಚನಕಾರ ಬಾಬುರಾವ ಮಹಾರಾಜ, ಕನ್ನೂರ, ಸಿಂಧೂರ ಹಿರೇಮಠದ ಸೋಮನಾಥ ಶಿವಾಚರ್ಯರು ಆಶೀರ್ವಚನ ನೀಡಿದರು.

ಬೀಳೂರ ಮುರುಘೇಂದ್ರ ಸ್ವಾಮೀಜಿ, ಕನಮಡಿ ವಿರಕ್ತಮಠದ ವಿಜಯಕುಮಾರ ಸ್ವಾಮೀಜಿ ನೇತೃತ್ವ ವಹಿಸಿದ್ದರು. ಬಸವನ ಬಾಗೇವಾಡಿ ಶ್ರೀ ಪದ್ಮರಾಜ ಒಡೆಯರ ಸಂಸ್ಥಾನ ಹಿರೇಮಠದ ಶಿವಪ್ರಕಾಶ ಶಿವಾಚಾರ್ಯರು ಸಮ್ಮುಖ ವಹಿಸಿದ್ದರು. ಭಳ್ಳಂಕಿ ಶಿವಲಿಂಗ ಶಿವಚಾರ್ಯರು, ಕನಮಡಿ ನೀಲಗಂಗಾ ದಾದಾಪೀರ್‌ ದರ್ಗಾದ ಹಜರರ್‌ ಸೈಯದ್‌ ಹೈದರವಲಿ ಖಾದ್ರಿ, ಗುಡ್ಡಾಪುರದ ಗುರುಪಾದೆಶ್ವರ ಶಿವಾಚಾರ್ಯರು, ಸಾಂಗಲಿ ರಾಮಸಿಂಗ ರಜಪೂತ, ಕಲಬುರಗಿ ಶಿವಾನಂದ ಪಾಟೀಲ, ಕೋರಗಾಂವದ ಬಾಬಾಸಾಹೇಬ ಕಾಫೆ, ಕನಮಡಿಯ ಸುಭಾಸಗೌಡ ಪಾಟೀಲ, ಎಂ.ಆರ್. ತುಂಗಳ, ಆಶೋಕ ಅನಂತಪುರ, ಶ್ರೀಶೈಲ ವಿರಕ್ತಮಠ, ಬಸು ದೋಕನಗೊಳ, ಶಿವಪುತ್ರ ಅವಟಿ, ಪ್ರಕಾಶ ಬಿರಾದಾರ, ಭೀಮರಾಯ ಕೊಂಡಿ, ಆಶೋಕ ಶಿರಡೋಣ, ರಾಮು ಚಡಚಣ, ಚನ್ನಯ್ಯ ಮಠಪತಿ ಇದ್ದರು. 100ಕ್ಕೂ ಹೆಚ್ಚು ವಿವಿಧ ಸೇವೆ ಮಾಡಿದ ಭಕ್ತರಿಗೆ ಸನ್ಮಾನ ಮಾಡಲಾಯಿತು. ಭಕ್ತರಿಗೆ ಮಹಾಪ್ರಸಾದ ವಿತರಣೆ ಮಾಡಿದರು.