ಸಾರಾಂಶ
ಕನ್ನಡಪ್ರಭ ವಾರ್ತೆ ಚಿಕ್ಕೋಡಿ
ಕನ್ನಡ ಭಾಷೆಗೆ ಎಂಟು ಅತ್ಯುನ್ನತ ಜ್ಞಾನಪೀಠ ಪ್ರಶಸ್ತಿಗಳು ಬಂದಿರುವುದು ಹೆಮ್ಮಯ ವಿಷಯ ಎಂದು ಪುರಸಭೆ ಅಧ್ಯಕ್ಷ ವೀಣಾ ಕವಟಗಿಮಠ ಹೇಳಿದರು.ಅವರು ಚಿಕ್ಕೋಡಿ ಸಿಎಲ್‌ಇ ಸಂಸ್ಥೆಯ ಆವರಣದಲ್ಲಿ ಕನ್ನಡ ಸಾಹಿತ್ಯ ಪರಿಷತ್ತು ಹಾಗೂ ಸಾಹಿತ್ಯ ಸೌರಭ ಪ್ರಕಾಶನ ವಡಗೋಲ ಅವರ ಸಹಯೋಗದಲ್ಲಿ ನಡೆದ ರಾಜ್ಯಮಟ್ಟದ ಕವಿಗೋಷ್ಠಿಗೆ ಚಾಲನೆ ನೀಡಿ ಮಾತನಾಡಿ, ಚಿಕ್ಕೋಡಿಯಲ್ಲಿ ರಾಜ್ಯಮಟ್ಟದ ಕವಿಗೋಷ್ಠಿಯನ್ನು ಆಯೋಜಿಸಿದ್ದು ಸಹ ಹೆಮ್ಮೆ ತಂದಿದೆ. ಇಂದಿಲ್ಲಾ ನಾಳೆ ಚಿಕ್ಕೋಡಿ ಜಿಲ್ಲೆಯಾಗುವುದರಲ್ಲಿ ಸಂಶಯವಿಲ್ಲ ಎಂದರು.
ಕುವೆಂಪು,ದ.ರಾ.ಬೇಂದ್ರ,ಶಿವರಾಮ ಕಾರಂತ ಹೀಗೆ ಅನೇಕ ದಿಗ್ಗಜರು ಹಾಕಿಕೊಟ ಹಾದಿಯಲ್ಲಿ ಇಂದಿನ ಯುವ ಕವಿಗಳು ನಡೆಯಬೇಕಾಗಿದೆ ಎಂದರು.ಕಾವ್ಯ ಮನುಷ್ಯನ ಸುತ್ತ ಮುತ್ತಲಿನ ಪರಿಸರದ ಕುರಿತು ಸ್ಪಂದಿಸುವ ಒಂದುಪ್ರಕೀಯೆ,ಅದು ನಿಸರ್ಗ,ಸಮಾಜದ ಸಮಸ್ಯ,ಶೋಷಣೆ,ಮಾನವೀಯತೆಗೆ ಅಕ್ಷರ ರೂಪ ಕೋಡುತ್ತದೆ. 12ನೇ ಶತಮಾನದಲ್ಲಿ ಬಸವಾದಿ ಶಿವಶರಣರು ವಚನ ಸಾಹಿತ್ಯಕ್ಕೆ ನೀಡಿದ ಕೊಡುಗೆ ಅಪಾರ ಅಂದು ನಡೆದ ವಚನ ಕ್ರಾಂತಿ ಇಂದಿಗೂ ಪ್ರಸ್ತುತವಾಗಿದೆ ಎಂದರು.
ಮುಖ್ಯ ಅತಿಥಿಗಳಾಗಿ ಆಗಮಿಸಿದ್ದ ವೈಧ್ಯ ಸಾಹಿತಿ ಡಾ.ದಯಾನಂದ ನೂಲಿ ಮಾತನಾಡಿ, ಕವಿತೆ ಜೀವನಕ್ಕೆ ಅದಮ್ಯ ಶಕ್ತಿ ನೀಡಬೇಕು, ವಾಸ್ತವದ ನೆಲೆಯಲ್ಲಿ ನಿಂತು ನೋಡಬೇಕು ಅಂದಾಗ ಒಂದು ಕವಿತೆ ಪ್ರಾಸಬದ್ಧವಾಗಿ ಬರಲು ಸಾಧ್ಯ. ಕವಿಗಳು ಸಮಾಜದ ಅವಿಭಾಜ್ಯ ಅಂಗ, ಆದ್ದರಿಂದ ಕವಿತೆಗಳಲ್ಲಿ ಗಾಂಭೀರ್ಯತೆ, ಪ್ರಾಸ, ಲಯವೀರಬೇಕೆಂದ ಅವರು, ಯುವ ಕವಿಗಳು ಹೃದಯಾಳಂತರದಲ್ಲಿ ಶರಣ ,ಶರಣೆಯರ ಬಗ್ಗೆ ಇನ್ನೂ ಹೆಚ್ಚಿನ ಕವಿತೆಗಳು ಬರಲಿ ಎಂದು ಆಶಿಸಿದರು.ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷ ಸುರೇರ ಉಕ್ಕಲಿ ಬಸವರಾಜ ಮಿರ್ಜಿ ಪ್ರಾಸ್ತಾವಿಕವಾಗಿ ಮಾತನಾಡಿದರು.ಕವಿಗೋಷ್ಠಿಯಲ್ಲಿ ಪುರಸಭೆ ಅಧ್ಯಕ್ಷರಾಗಿ ಆಯ್ಕೆಯಾದ ವೀಣಾ ಕವಟಗಿಮಠ ಹಾಗೂ ನಿವೃತ್ತ ಶಿಕ್ಷಕ ಚಂದ್ರಶೇಖರ ಅರಭಾಂವಿ ಅವರನ್ನು ಸನ್ಮಾನಿಸಿ ಗೌರವಿಸಲಾಯಿತು.
ಜಯಶ್ರೀ ನಾಗರಳ್ಳಿ, ವಡಗೋಲ ಸೌರಭ ಸಾಹಿತ್ಯ ಪ್ರಕಾಶನ ಅಧ್ಯಕ್ಷ ಶಿವಾನಂದ ಭಾಗಾಯಿ, ಚಂದ್ರಶೇಖರ ಅರಭಾಂವಿ, ವಿ.ಎಸ್. ತುಗಶೆಟ್ಟಿ, ಭಾರತಿ ಕೋರೆ ಸೇರಿದಂತೆ ಅನೇಕ ಜನ ಹಿರಿಯ ಸಾಹಿತಿಗಳು, ಕವಿಗಳು ಇದ್ದರು. ಸರೋಜಿನಿ ಸಮಾಜೆ ಸ್ವಾಗತಿಸಿದರು. ರೋಹಿಣಿ ಮಿರ್ಜಿ ನಿರೂಪಿಸಿದರು. ಲಲಿತಾ ಹಿರೇಮಠ ಆಶಯ ನುಡಿ ಮಾತನಾಡಿದರು. ಬಸವರಾಜ ಹೊನಗೌಡ ವಂದಿಸಿದರು.ಸಾಹಿತ್ಯ ಸಮುದ್ರಾಳಕ್ಕಿಂತ ಆಳವಾಗಿದೆ. ಆದರೆ ಪ್ರಾಸ ಇಲ್ಲದೆ ಕವನ ಆಗಲು ಸಾಧ್ಯವಿಲ್ಲ. ಕವಿತೆ ಬರೆಯುವಾಗ ಪ್ರಾಸ ಫರ್ಪೆಕ್ಟ್ ಆಗಿರಬೇಕು. ಕವಿತೆಗಳಲ್ಲಿ ಭಾವಾರ್ಥ ಇರಬೇಕು ಎಂದರು.ಅಧ್ಯಕ್ಷತೆ ವಹಿಸಿದ್ದ ಸಾಹಿತಿ ಶ್ರೀಪಾದ ಕುಂಬಾರ ಮಾತನಾಡಿ, 42 ವರ್ಷಗಳಲ್ಲಿ ಇತಿಹಾಸದಲ್ಲಿ ಚಿಕ್ಕೋಡಿಯಲ್ಲಿ 3ನೇ ರಾಜ್ಯ ಮಟ್ಟದ ಕವಿಗೋಷ್ಠಿ ನಡೆಯುತ್ತಿರುವುದು ವಿಶೇಷ.
-ಜಗದೀಶ ಕವಟಗಿಮಠ ಉಪಾಧ್ಯಕ್ಷರು ಕರ್ನಾಟಕ ರಾಜ್ಯ ಸಹಕಾರ ಮಹಾಮಂಡಳ