ಇಂಡಿ ಜಿಲ್ಲೆಯಾಗುವುದರಲ್ಲಿ ಸಂದೇಹವಿಲ್ಲ

| Published : Feb 20 2024, 01:45 AM IST

ಸಾರಾಂಶ

ಇಂಡಿ ಜಿಲ್ಲೆಯಾಗಿಸುವ ಕನಸು ಕಂಡಿರುವೆ. ಜಿಲ್ಲೆಯಾಗುವ ಎಲ್ಲ ವಾತಾವರಣ ಸೃಷ್ಟಿ ಮಾಡಿದ್ದು, ನಾನು ಸುಮ್ಮನೆ ಮಾತನಾಡುವುದಿಲ್ಲ ಎಂದು ಶಾಸಕ ಯಶವಂತರಾಯಗೌಡ ಪಾಟೀಲ ಹೇಳಿದರು.

ಕನ್ನಡಪ್ರಭ ವಾರ್ತೆ ಇಂಡಿ

ಇಂಡಿ ಜಿಲ್ಲೆಯಾಗಿಸುವ ಕನಸು ಕಂಡಿರುವೆ. ಜಿಲ್ಲೆಯಾಗುವ ಎಲ್ಲ ವಾತಾವರಣ ಸೃಷ್ಟಿ ಮಾಡಿದ್ದು, ನಾನು ಸುಮ್ಮನೆ ಮಾತನಾಡುವುದಿಲ್ಲ ಎಂದು ಶಾಸಕ ಯಶವಂತರಾಯಗೌಡ ಪಾಟೀಲ ಹೇಳಿದರು.

ತಾಲೂಕಿನ ನಾದ ಬಿ.ಕೆ ಗ್ರಾಮದಲ್ಲಿ ಗ್ರಾಮದೇವತೆ ಲಕ್ಷ್ಮೀದೇವಿ ಮಹಾದ್ವಾರ ಲೋಕಾರ್ಪಣೆಗೊಳಿಸಿ ಮಾತನಾಡಿದ ಅವರು, ಜಿಲ್ಲೆಗೆ ಬೇಕಾದ ಮೂಲಸೌಲಭ್ಯಗಳು ಮತಕ್ಷೇತ್ರದಲ್ಲಿರುವುದರಿಂದ ಕ್ಷೇತ್ರದ ವಿಸ್ತೀರ್ಣ, ಜನಸಂಖ್ಯೆ, ರಾಷ್ಟ್ರೀಯ ಹೆದ್ದಾರಿ, ರೈಲು ನಿಲ್ದಾಣ, ಉಪವಿಭಾಗ, ಕೃಷಿ ವಿಜ್ಞಾನ ಕೇಂದ್ರ, ಲಿಂಬೆ ಅಭಿವೃದ್ಧಿ ಮಂಡಳಿ ಹೀಗೆ ಹತ್ತಾರು ಅಂಶಗಳಿಂದ ಇಂಡಿ ಮುಂದೊಂದು ದಿನ ಜಿಲ್ಲೆಯಾಗುವುದರಲ್ಲಿ ಯಾವುದೇ ಸಂದೇಹವಿಲ್ಲ ಎಂಬ ವಿಶ್ವಾಸ ವ್ಯಕ್ತಪಡಿಸಿದರು.

ಭಾರತ ವೈವಿಧ್ಯತೆಯಲ್ಲಿ ಏಕತೆಯನ್ನು ಹೊಂದಿದ ದೇಶವಾಗಿದ್ದು, ಅನೇಕ ಧರ್ಮ, ಆಚಾರ, ವಿಚಾರ, ಸಂಸ್ಕೃತಿಗಳಿರುವ ಶ್ರೀಮಂತ ದೇಶ ಭಾರತ. ಅದರಲ್ಲಿ ವಿಜಯಪುರ ಜಿಲ್ಲೆ ಭಾವೈಕ್ಯತೆಗೆ ಹೆಸರು ಪಡೆದಿದೆ. ಅನೇಕ ಶರಣರು, ಸಂತ ಮಹಾಂತರು ನಡೆದಾಡಿ ವಿಜಯಪುರ ಭಾಗದ ಜನರಿಗೆ ಒಳ್ಳೆಯ ಸಂಸ್ಕಾರ ನೀಡಿದ್ದಾರೆ. ಲಕ್ಷ್ಮೀದೇವಿಯ ಮಹಾದ್ವಾರ ಸಮಾರಂಭದಲ್ಲಿ ತಾಯಂದಿಯರು ಕುಂಭ ಹೊತ್ತು ಮೆರವಣಿಗೆಯಲ್ಲಿ ಭಾಗಿಯಾಗಿರುವುದು ಭಕ್ತಿಯ ಸೇವೆ. ಹೀಗೆ ಜಾತ್ರೆ ಹಬ್ಬ ಹರಿದಿನಗಳು ಆಚರಿಸುವುದರಿಂದ ಜನರಲ್ಲಿ ಸಾಮರಸ್ಯ ಬೆಳೆಯುತ್ತದೆ. ಮಹಾತಾಯಿ ಜಗನ್ಮಾತೆ ಎಲ್ಲರಿಗೂ ಶಾಂತಿ ನೆಮ್ಮದಿ ಕರುಣಿಸಲು ಎಂದು ಪ್ರಾರ್ಥಿಸಿದರು.

ಗೋಳಸಾರ ಮಠದ ಅಭಿನವ ಪುಂಡಲಿಂಗ ಮಹಾಶಿವಯೋಗಿಗಳು, ಶರಬಯ್ಯ ಮಠಪತಿ ಸಾನ್ನಿಧ್ಯ ವಹಿಸಿದರು. ಜಟ್ಟೆಪ್ಪ ರವಳಿ, ಇಲಿಯಾಸ್‌ ಬೋರಾಮಣಿ, ಬಗರಹುಕುಂ ನಾಮನಿರ್ದೇಶನ ಸದಸ್ಯ ಸೋಮಶೇಖರ ಮ್ಯಾಕೇರಿ, ಬ್ಲಾಕ್‌ ಕಾಂಗ್ರೆಸ್‌ ಅಧ್ಯಕ್ಷ ಜಾವೀದ್‌ ಮೋಮಿನ, ಜೀತಪ್ಪ ಕಲ್ಯಾಣಿ, ಮಲ್ಲಣ್ಣಗೌಡ ಪಾಟೀಲ, ಶಿವಯೋಗೆಪ್ಪ ಜೋತಗೊಂಡ, ಸಂತೋಷ ಪರಸೇನವರ, ಶಿವಯೋಗೆಪ್ಪ ಮಾಡ್ಯಾಳ, ಅರವಿಂದ ಯಳಸಂಗಿ, ಶಿವಪ್ಪಗೌಡ ಪಾಟೀಲ, ದಶರಥ ಗೊಂದಳಿ, ಪಿಎಸೈ ಮಂಜುನಾಥ ಹುಕುಂದ, ಪ್ರೊ.ಎಸ್.ಎಂ.ಉಪ್ಪಾರ ಇತರರು ಇದ್ದರು.