ದೆಹಲಿ ಹೈವೋಲ್ಟೇಜ್ ಮೀಟಿಂಗ್ ಬಗ್ಗೆ ನಮಗೆ ಯಾವುದೇ ಮಾಹಿತಿ ಇಲ್ಲ. ನೀವು ಸಭೆಗೆ ಹೋಗಿರುವವರನ್ನಾದರೂ ಕೇಳಬೇಕು, ಇಲ್ಲವೇ ಸಭೆಯನ್ನು ಕರೆದವರನ್ನಾದರೂ ಕೇಳಬೇಕು. ಇಲ್ಲಿ ದಾವಣಗೆರೆಯಲ್ಲಿ ಇರುವವರಿಗೆ ಆ ಸಭೆ ಬಗ್ಗೆ ಹೇಗೆ ಗೊತ್ತಾಗುತ್ತದೆ ಎಂದು ಚನ್ನಗಿರಿ ಕ್ಷೇತ್ರ ಶಾಸಕ ಬಸವರಾಜ ವಿ.ಶಿವಗಂಗಾ ಪ್ರಶ್ನಿಸಿದ್ದಾರೆ.
- ಹೈಕಮಾಂಡ್ ನೋಟಿಸ್ ನೀಡಿದಾಗಿನಿಂದ ಮಾತನಾಡಿಲ್ಲ, ಮಾತನಾಡಲ್ಲ - - -
ಕನ್ನಡಪ್ರಭ ವಾರ್ತೆ ದಾವಣಗೆರೆದೆಹಲಿ ಹೈವೋಲ್ಟೇಜ್ ಮೀಟಿಂಗ್ ಬಗ್ಗೆ ನಮಗೆ ಯಾವುದೇ ಮಾಹಿತಿ ಇಲ್ಲ. ನೀವು ಸಭೆಗೆ ಹೋಗಿರುವವರನ್ನಾದರೂ ಕೇಳಬೇಕು, ಇಲ್ಲವೇ ಸಭೆಯನ್ನು ಕರೆದವರನ್ನಾದರೂ ಕೇಳಬೇಕು. ಇಲ್ಲಿ ದಾವಣಗೆರೆಯಲ್ಲಿ ಇರುವವರಿಗೆ ಆ ಸಭೆ ಬಗ್ಗೆ ಹೇಗೆ ಗೊತ್ತಾಗುತ್ತದೆ ಎಂದು ಚನ್ನಗಿರಿ ಕ್ಷೇತ್ರ ಶಾಸಕ ಬಸವರಾಜ ವಿ.ಶಿವಗಂಗಾ ಪ್ರಶ್ನಿಸಿದ್ದಾರೆ.
ನಗರದಲ್ಲಿ ಮಂಗಳವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ದೆಹಲಿ ಸಭೆ ಬಗ್ಗೆ ದಯವಿಟ್ಟು ನನಗೆ ಏನೂ ಕೇಳಬೇಡಿ, ನಾನು ಏನನ್ನೂ ಮಾತನಾಡುವುದಿಲ್ಲ. ಯಾವುದನ್ನೂ ಮಾತನಾಡದಂತೆ ಹೈಕಮಾಂಡ್ ಆದೇಶವಿದೆ. ಹಾಗಾಗಿ ನಾವ್ಯಾರೂ ಶಾಸಕರು ಯಾವುದೇ ವಿಚಾರ ಮಾತನಾಡುವುದಿಲ್ಲ ಎಂದರು.ಈಗ ಮಾತನಾಡುವ ಸಮಯವೂ ಅಲ್ಲ. ದೆಹಲಿ ಸಭೆ ಬಗ್ಗೆ ನನಗೆ ಯಾವುದೇ ಮಾಹಿತಿಯೂ ಇಲ್ಲ. ದೆಹಲಿ ಸಭೆ ಬಗ್ಗೆ ನನಗೆ ಕೇಳಿದರೆ ನನ್ನ ಉತ್ತರ ನೋ ಕಾಮೆಂಟ್ಸ್ ಅಷ್ಟೇ. ನಾನು ಎಲ್ಲಿಗೂ ಹೋಗುವುದಿಲ್ಲ. ಇಡೀ ವಾರ ನನ್ನ ಚನ್ನಗಿರಿ ಕ್ಷೇತ್ರದಲ್ಲೇ ಇರುತ್ತೇನೆ. ದೆಹಲಿಗೆ ಹೋದವರು ವೈಯಕ್ತಿಕ ಕೆಲಸಕ್ಕಾಗಿ ಹೋಗಿದ್ದಾರೇನೋ ಗೊತ್ತಿಲ್ಲ. ನನ್ನ ಯಾವುದೇ ಕೆಲಸ ಅಲ್ಲಿ ಇಲ್ಲ ಎಂದು ಅವರು ತಿಳಿಸಿದರು.
ಹೈಕಮಾಂಡ್ ನೋಟೀಸ್ ಕೊಟ್ಟಾಗಿನಿಂದ ನಾನು ಯಾವುದೇ ವಿಚಾರ ಮಾತನಾಡಿಲಿಲ್ಲ. ಈಗಲೂ ಯಾವುದೇ ವಿಚಾರ ಮಾತನಾಡುವುದಿಲ್ಲ. ನನ್ನ ಚನ್ನಗಿರಿ ಕ್ಷೇತ್ರದ ವಿಷಯ ಏನಾದರೂ ಇದ್ದರೆ ಮಾತನಾಡಿ. ನಾನು ಕ್ಷೇತ್ರದಲ್ಲಿ ಇರುವವರು. ದೆಹಲಿ ಸಭೆ ಬಗ್ಗೆ ಯಾವುದೇ ಮಾಹಿತಿ ಬಂದಿಲ್ಲ. ನಾನು ದೆಹಲಿಗೆ ಹೋಗುವುದೂ ಇಲ್ಲ. ದೆಹಲಿ ವಿಚಾರ ಅಲ್ಲಿಗೆ ಹೋದವರನ್ನೇ ಕೇಳಿ ಎಂದು ಸಿಎಂ ಬದಲಾವಣೆ ಕುರಿತ ಪ್ರಶ್ನೆಗೆ ಪ್ರತಿಕ್ರಿಯಿಸಲು ಡಿಸಿಎಂ ಡಿ.ಕೆ.ಶಿವಕುಮಾರ ಆಪ್ತ ಬಳಗದ ಶಾಸಕನೆಂದೇ ಗುರುತಿಸಲ್ಪಟ್ಟ ಬಸವರಾಜ ಶಿವಗಂಗಾ ನಿರಾಕರಿಸಿದರು.- - -
-26ಕೆಡಿವಿಜಿ6: ಬಸವರಾಜ ವಿ. ಶಿವಗಂಗಾ, ಶಾಸಕ. ಚನ್ನಗಿರಿ ಕ್ಷೇತ್ರ.