ಸಾಧನೆಗೆ ವಯಸ್ಸು ಸೇರಿದಂತೆ ಯಾವುದೇ ಮಿತಿ ಇಲ್ಲ. ಸಣ್ಣವರಾಗಲಿ ದೊಡ್ಡವರಾಗಲಿ ತಮ್ಮ ಪಾತ್ರವನ್ನು ಸಂಪೂರ್ಣವಾಗಿ ನಿಭಾಯಿಸಿದಾಗಲೇ ನಿಜವಾದ ಯಶಸ್ಸು ಸಿಗುತ್ತದೆ ಎಂದು ಬಿಂದು ಗಣಪತಿ ಹೇಳಿದರು.

ಕನ್ನಡಪ್ರಭ ವಾರ್ತೆ ನಾಪೋಕ್ಲುಸಾಧನೆಗೆ ವಯಸ್ಸು ಸೇರಿದಂತೆ ಯಾವುದೇ ಮಿತಿ ಇಲ್ಲ. ಸಣ್ಣವರಾಗಲಿ ದೊಡ್ಡವರಾಗಲಿ ತಮ್ಮ ಪಾತ್ರವನ್ನು ಸಂಪೂರ್ಣವಾಗಿ ನಿಭಾಯಿಸಿದಾಗಲೇ ನಿಜವಾದ ಯಶಸ್ಸು ಸಿಗುತ್ತದೆ ಎಂದು ಲಯನ್ಸ್ ಕ್ಲಬ್ ನ ಪ್ರಾಂತೀಯ ಅಧ್ಯಕ್ಷೆ ಬಿಂದು ಗಣಪತಿ ಹೇಳಿದರು. ಇಲ್ಲಿನ ಕೊಡವ ಸಮಾಜದಲ್ಲಿ ಲಯನ್ಸ್ ಕ್ಲಬ್ ಮತ್ತು ಲಿಯೋ ಕ್ಲಬ್ ವತಿಯಿಂದ ಆಯೋಜಿಸಲಾಗಿದ್ದ ಲಯನ್ಸ್ ಕ್ಲಬ್ ನ ಪ್ರಾಂತೀಯ ಅಧ್ಯಕ್ಷೆ ಭೇಟಿ ಸಮಾರಂಭದಲ್ಲಿ ಪಾಲ್ಗೊಂಡು ಅವರು ಮಾತನಾಡಿದರು.ಪ್ರೇರಣೆ ವ್ಯಕ್ತಿಯನ್ನು ಮುಂದುವರಿಯಲು ಸಹಾಯಮಾಡುತ್ತದೆ. ಶಕ್ತಿ ವ್ಯಕ್ತಿಯನ್ನು ಬೆಳೆಸಲು ಸಹಾಯ ಮಾಡುತ್ತದೆ. ಸದಾ ಮುಂದುವರೆಯಿರಿ ಸದಾ ಬೆಳೆಯಿರಿ ಎನ್ನುವುದು ಕ್ಲಬ್ ನ ಆಶಯವಾಗಿದೆ. ಸಾಮಾಜಿಕ ವ್ಯವಸ್ಥೆಯಲ್ಲಿ ಏನಾದರೂ ಮಾಡುವಾಗ ನಿಮ್ಮ ಶಕ್ತಿಯನ್ನು ಸಂಪೂರ್ಣವಾಗಿ ಬಳಸಿ ಸಮಾಜದಲ್ಲಿ ಬದಲಾವಣೆ ತರಲು ಪ್ರಯತ್ನಿಸಿ ನಿಮ್ಮಕೆಲಸದಲ್ಲಿ ನಿಷ್ಠೆ ಇರಲಿ ಎಂದರು .ಲಯನ್ಸ್ ಸದಸ್ಯರು ಅಂತರಾಷ್ಟ್ರೀಯ ಒಕ್ಕೂಟವನ್ನು ಬಲಪಡಿಸುವ ನಿಟ್ಟಿನಲ್ಲಿ ಬದ್ಧರಾಗಿರುತ್ತೇವೆ ಎಂದು ಈ ಸಂದರ್ಭದಲ್ಲಿ ಪ್ರತಿಜ್ಞೆ ಕೈಗೊಳ್ಳಬೇಕಿದೆ ಎಂದರು. ಲಯನ್ಸ್ ಜೋನ್ ಅಧ್ಯಕ್ಷ ಕೋಟೆರ ಡಾ. ಪಂಚಮಿ ತಿಮ್ಮಯ್ಯ, ಲಯನ್ಸ್ ಹಿರಿಯ ಸದಸ್ಯ ಕುಂಡಿಯೊಳ೦ಡ ಗಣೇಶ್ ಮುತ್ತಪ್ಪ ತಮ್ಮ ಅನಿಸಿಕೆ ವ್ಯಕ್ತಪಡಿಸಿ ಮಾತನಾಡಿದರು.ನಾಪೋಕ್ಲು ಲಯನ್ಸ್ ಕ್ಲಬ್ ಅಧ್ಯಕ್ಷ ಮಾದೆಯಂಡ ಬಿ ಕುಟ್ಟಪ್ಪ ಅವರ ಅಧ್ಯಕ್ಷತೆಯಲ್ಲಿ ಜರುಗಿದ ಕಾರ್ಯಕ್ರಮದಲ್ಲಿ ಹಿರಿಯ ಸದಸ್ಯರನ್ನು ಸನ್ಮಾನಿಸಿದ ಗೌರವಿಸಲಾಯಿತು. ಹಾಗೂ ನೂತನ ಸದಸ್ಯರಾಗಿ ಮುನ್ನಿಕೃಷ್ಣ ಅವರಿಗೆ ಲಯನ್ಸ್ ಕ್ಲಬ್ ನ ಪ್ರಾಂತೀಯ ಅಧ್ಯಕ್ಷೆ ಬಿಂದು ಗಣಪತಿ ಪ್ರಮಾಣವಚನ ಬೋಧಿಸಿ ಕ್ಲಬ್ಬಿಗೆ ಸೇರ್ಪಡೆಗೊಳಿಸಿದರು .ಈ ಸಮಾರಂಭದಲ್ಲಿ ಕಾರ್ಯದರ್ಶಿ ಬನ್ಸಿ ಭೀಮಯ್ಯ , ಖಜಾಂಚಿ ಅಪ್ಪಚೆಟೋಳಂಡ ವಸಂತ ಮುತ್ತಪ್ಪ, ಲಿಯೋ ಕ್ಲಬ್ ಅಧ್ಯಕ್ಷೆ ಕನ್ನಿಕಾ, ಕಾರ್ಯದರ್ಶಿ ಧೃವ್ ದೇವಯ್ಯ , ಖಜಾಂಚಿ ಅನನ್ಯ ಉಪಸ್ಥಿತರಿದ್ದರು. ಚೈಯಂಡ ಕಸ್ತೂರಿ ಪ್ರಾರ್ಥಿಸಿ ಕನ್ನಂಬೀರ ಸುಧಿ ತಿಮಯ್ಯ ಧ್ವಜ ವಂದನೆ ನೆರವೇರಿಸಿದರು . ಬಿದ್ದಾಟತಂಡ ಮೇರಿ ಚಿಟ್ಟಿಯಪ್ಪ ಹಾಗೂ ಕುಂಡಿಯೊಳ೦ಡ ರೇಖಾ ಪೊನ್ನಣ ಅತಿಥಿಗಳ ಪರಿಚಯ ಮಾಡಿದರು.