ಸಾರಾಂಶ
ಕುರುಬ ಸಮುದಾಯವನ್ನು ಪರಿಶಿಷ್ಟ ಪಂಗಡಕ್ಕೆ ಸೇರ್ಪಡೆ ಮಾಡಲು ಕೇಂದ್ರಕ್ಕೆ ಶಿಫಾರಸು ಬಗ್ಗೆ ಎಸ್‌ಟಿ ಸಮುದಾಯ ಆತಂಕಪಡುವ ಅಗತ್ಯವಿಲ್ಲ ಎಂದು ಕಾಗಿನೆಲೆ ಪೀಠದ ಹೊಸದುರ್ಗ ಶಾಖಾ ಮಠದ ಶ್ರೀ ಈಶ್ವರಾನಂದ ಪುರಿ ಸ್ವಾಮೀಜಿ ನುಡಿದಿದ್ದಾರೆ.
- ಧರ್ಮ ಹಿಂದೂ, ಜಾತಿ ಕುರುಬ ಅಂತಲೇ ಬರೆಸಲು ಸಲಹೆ - - -
ದಾವಣಗೆರೆ: ಕುರುಬ ಸಮುದಾಯವನ್ನು ಪರಿಶಿಷ್ಟ ಪಂಗಡಕ್ಕೆ ಸೇರ್ಪಡೆ ಮಾಡಲು ಕೇಂದ್ರಕ್ಕೆ ಶಿಫಾರಸು ಬಗ್ಗೆ ಎಸ್‌ಟಿ ಸಮುದಾಯ ಆತಂಕಪಡುವ ಅಗತ್ಯವಿಲ್ಲ ಎಂದು ಕಾಗಿನೆಲೆ ಪೀಠದ ಹೊಸದುರ್ಗ ಶಾಖಾ ಮಠದ ಶ್ರೀ ಈಶ್ವರಾನಂದ ಪುರಿ ಸ್ವಾಮೀಜಿ ನುಡಿದರು.ತಾಲೂಕಿನ ಜರೇಕಟ್ಟೆ ಗ್ರಾಮದ ಛತ್ರಪತಿ ಶಿವಾಜಿ ಮಹಾರಾಜರ ಸಮುದಾಯ ಭವನದಲ್ಲಿ ಗುರುವಾರ ಮುದಹದಡಿ ಗ್ರಾಮದ ರಾಜ್ಯಮಟ್ಟದ ಕೃಷಿ ಪ್ರಶಸ್ತಿ ಪುರಸ್ಕೃತ ಪ್ರಗತಿಪರ ರೈತರಾಗಿದ್ದ ದಿವಂಗತ ಬಿ.ದಿಳ್ಯಪ್ಪನವರ ಕೈಲಾಸ ಸಮಾರಾಧನೆ ಕಾರ್ಯಕ್ರಮದ ಸಾನ್ನಿಧ್ಯ ವಹಿಸಿ ಅವರು ಮಾತನಾಡಿದರು.
ಪರಿಶಿಷ್ಟ ಪಂಗಡದ ಮೀಸಲಾತಿಗೆ ಅರ್ಹತೆ ಹೊಂದಿ, ಮೀಸಲಾತಿ ನೀಡಿದರೆ ಈಗಿರುವ ಮೀಸಲಾತಿಯನ್ನು ಹೆಚ್ಚಿಸಿಕೊಂಡೇ ಕುರುಬ ಸಮುದಾಯವನ್ನು ಪರಿಶಿಷ್ಟ ಪಂಗಡಕ್ಕೆ ಸೇರ್ಪಡೆ ಮಾಡಲಾಗುತ್ತದೆ. ಹಾಗಾಗಿ ಆತಂಕ ಬೇಡ. ರಾಜ್ಯಾದ್ಯಂತ ಸಮೀಕ್ಷೆಯಲ್ಲಿ ಕುರುಬ ಸಮಾಜ ಬಾಂಧವರು ಧರ್ಮದ ಕಾಲಂನಲ್ಲಿ ಹಿಂದೂ, ಜಾತಿ ಕಾಲಂನಲ್ಲಿ ಕುರುಬ ಅಂತಲೇ ಬರೆಸಬೇಕು. ಸಮಾಜದ ವಿದ್ಯಾರ್ಥಿ, ಯುವಜನರು, ಹಿರಿಯರು ಜನಜಾಗೃತಿ ಮೂಡಿಸಬೇಕು ಎಂದರು. ಹದಡಿ ಚಂದ್ರಗಿರಿ ಮಠದ ಶ್ರೀ ಮುರುಳಿಧರ ಸ್ವಾಮೀಜಿ ಮಾತನಾಡಿ, ಕೃಷಿಕ ಹಾಗೂ ಅವಿಭಕ್ತ ಕುಟುಂಬದವರಾಗಿದ್ದ ದಿಳ್ಯಪ್ಪ ಯಾವಾಗಲೂ ಹೋರಾಟ ಮನೋಭಾವ ಮೈಗೂಡಿಸಿಕೊಂಡಿದ್ದರು. ಎಂತಹ ಹೋರಾಟಗಳಿದ್ದರೂ ಪಾಲ್ಗೊಳ್ಳುತ್ತಿದ್ದರು ಎಂದು ಸ್ಮರಿಸಿದರು.ರೈತ ಮುಖಂಡ ತೇಜಸ್ವಿ ಪಟೇಲ್ ಮಾತನಾಡಿದರು. ನಾಯಕ ಸಮಾಜ ಮುಖಂಡ ಕುಕ್ಕವಾಡದ ಕೆ.ಎಂ. ಮಂಜುನಾಥ, ಕುರುಬ ಸಮಾಜದ ಮುಖಂಡರಾದ ಬಿ.ಎಂ.ಸತೀಶ ಕೊಳೇನಹಳ್ಳಿ. ಎಂ.ಬಿ.ದ್ಯಾಮಣ್ಣ ಯಲ್ಲಪ್ಪ. ಸಿದ್ದನಮಠದ ಯುಗಧರ್ಮ ರಾಮಣ್ಣ, ದೂಡಾ ಅಧ್ಯಕ್ಷ ದಿನೇಶ ಕೆ. ಶೆಟ್ಟಿ. ತ್ಯಾವಣಿಗೆ ಹಾಲಪ್ಪ, ಎಚ್.ಜಿ.ಸಂಗಪ್ಪ ಪೈಲ್ವಾನ್, ಅಜ್ಜಪ್ಪ, ಎಸ್.ನಿಂಗಪ್ಪ, ವಿರೂಪಾಕ್ಷಪ್ಪ, ಹನುಮಂತಪ್ಪ, ವೀರಣ್ಣ, ಕೆಂಚಣ್ಣ ಬಟ್ಲಕಟ್ಟೆ, ಸಿದ್ದಪ್ಪ, ಮಂಜಪ್ಪ, ಹದಡಿ ಮಹಾಂತೇಶ, ಬಿ.ದಿಳ್ಯಪ್ಪನವರ ಸಹೋದರರು. ಬಂಧು-ಬಳಗ, ಗ್ರಾಮಸ್ಥರು ಇದ್ದರು.
- - --18ಕೆಡಿವಿಜಿ7, 8:
ಬಿ.ದಿಳ್ಯಪ್ಪ ಕೈಲಾಸ ಸಮಾರಾಧನೆ ಸಮಾರಂಭವನ್ನು ಗಣ್ಯರು ಉದ್ಘಾಟಿಸಿದರು.;Resize=(128,128))