ನಮ್ಮ ದೇಶ ಸುರಕ್ಷತೆಯಿಂದ ಇರಬೇಕಾದರೇ ಸೈನಿಕರ ತ್ಯಾಗ, ಬಲಿದಾನವೇ ಕಾರಣ. ಸೈನಿಕರು ನಮಗೆ ಸಂರಕ್ಷಣೆ ನೀಡಿದರೇ. ರೈತ ಅನ್ನದಾತ ಇವರಿಬ್ಬರನ್ನು ಗೌರವಿಸುವುದು ನಮ್ಮ ನಿಮ್ಮೆಲ್ಲರ ಕರ್ತವ್ಯ ಎಂದು ಯಾದಗಿರಿ ಮಾಜಿ ಜಿಪಂ ಸದಸ್ಯರಾದ ಬಸನಗೌಡ ಎಸ್.ಪಾಟೀಲ ಹೇಳಿದರು.

ಕನ್ನಡಪ್ರಭ ವಾರ್ತೆ ದೇವರಹಿಪ್ಪರಗಿ

ನಮ್ಮ ದೇಶ ಸುರಕ್ಷತೆಯಿಂದ ಇರಬೇಕಾದರೇ ಸೈನಿಕರ ತ್ಯಾಗ, ಬಲಿದಾನವೇ ಕಾರಣ. ಸೈನಿಕರು ನಮಗೆ ಸಂರಕ್ಷಣೆ ನೀಡಿದರೇ. ರೈತ ಅನ್ನದಾತ ಇವರಿಬ್ಬರನ್ನು ಗೌರವಿಸುವುದು ನಮ್ಮ ನಿಮ್ಮೆಲ್ಲರ ಕರ್ತವ್ಯ ಎಂದು ಯಾದಗಿರಿ ಮಾಜಿ ಜಿಪಂ ಸದಸ್ಯರಾದ ಬಸನಗೌಡ ಎಸ್.ಪಾಟೀಲ ಹೇಳಿದರು.

ಪಟ್ಟಣದ ಪ್ರವಾಸಿ ಮಂದಿರದಲ್ಲಿ ತಾಲೂಕಿನ ಮಾಜಿ ಸೈನಿಕರಿಗೆ ಹಮ್ಮಿಕೊಂಡ ಸನ್ಮಾನ ಸಮಾರಂಭ ಉದ್ಘಾಟಿಸಿ ಮಾತನಾಡಿದ ಅವರು, ಯುವಕರು ದೇಶಕ್ಕೆ ಸೇವೆ ಸಲ್ಲಿಸುವ ಮೂಲಕ ಜೀವನ ಸಾರ್ಥಕ ಪಡಿಸಿಕೊಳ್ಳಬೇಕು. ದೇಶ ಸೇವೆಯಂತಹ ಪುಣ್ಯ ಕಾರ್ಯ ಮತ್ತೊಂದಿಲ್ಲ. ಇಂದಿನ ಯುವಕರು ದೇಶಕ್ಕೆ ಸಲ್ಲಿಸುವ ಸೇವೆ ಅಮೂಲ್ಯವಾಗಿರುತ್ತದೆ. ಕಾರ್ಗಿಲ್ ಸಮಯದಲ್ಲಿ ಪಾಕಿಸ್ತಾನದ ವಿರುದ್ಧ ಜಯಗಳಿಸಲು ಶ್ರಮಿಸಿದ ನಮ್ಮ ಯೋಧರ ಪರಾಕ್ರಮ ಮೆಚ್ಚುವಂತಹದ್ದು ಜೊತೆಗೆ ಆ ಸಮಯದಲ್ಲಿ ವೀರ ಮರಣ ಹೊಂದಿದ ಯೋಧರಿಗೆ ಇಂದು ನಮನ ಸಲ್ಲಿಸುವುದು ನಮ್ಮೆಲ್ಲರ ಆದ್ಯ ಕರ್ತವ್ಯ ಎಂದರು.

ತಾಲೂಕು ಮಾಜಿ ಸೈನಿಕರ ಸಂಘದ ಅಧ್ಯಕ್ಷರಾದ ರಾಮಪ್ಪ ಎಲ್.ಕೆ ಮಾತನಾಡಿ, ಮಾಜಿ ಜಿಲ್ಲಾ ಪಂಚಾಯಿತಿ ಅಧ್ಯಕ್ಷರಾದ ಬಸನಗೌಡ ಎಸ್. ಪಾಟೀಲ(ಯಡಿಯಾಪುರ) ಅವರು ಸಮಾಜ ಸೇವೆಯ ಜೊತೆ ಮಾಜಿ ಸೈನಿಕರಿಗೆ ಸನ್ಮಾನಿಸುವ ಮೂಲಕ ಒಳ್ಳೆಯ ಕಾರ್ಯ ಮಾಡುತ್ತಿದ್ದಾರೆ ಎಂದು ಹೇಳಿದರು.

ಈ ವೇಳೆ ತಾಲೂಕಿನ ನಿವೃತ್ತ ಸೈನಿಕರಿಗೆ ಸನ್ಮಾನಿಸಿ, ಗೌರವಿಸಲಾಯಿತು. ಮುಖಂಡರಾದ ಶ್ರೀಧರ ನಾಡಗೌಡ,ಕೆ. ಶ್ರೀನಿವಾಸರಾವ್, ಮಾಜಿ ಸೈನಿಕರುಗಳಾದ ಬಸವರಾಜ ಕುಂಬಾರ, ಮಲ್ಲಪ್ಪ ಗುಡಿಮನಿ, ಗಿರಿಮಲ್ಲಪ್ಪ ಕುಂಬಾರ, ಶರಣಯ್ಯ ಗಣಾಚಾರಿ, ದರೇಶ ಗೌಡ ಪಾಟೀಲ, ಯಮುನಪ್ಪ ಡೋಣೂರ, ಎಂ. ಪೈಗಂಬರ್, ಎಸ್.ಆರ್.ಗಲಗಲಿ, ರಿಯಾಜ ಹಡಗಲಿ, ಗುರಣ್ಣ ಖೈನೂರ, ಮಲ್ಲಪ್ಪ ಬನಗೊಂಡ, ಬಸವರಾಜ ಶಂಕರ. ಕೊಂಡಗೂಳಿ ಸೇರಿದಂತೆ ತಾಲೂಕಿನ ಮಾಜಿ ಸೈನಿಕರು, ಪಟ್ಟಣದ ಪ್ರಮುಖರು, ಗಣ್ಯರು ಹಾಗೂ ಇತರರು ಉಪಸ್ಥಿತರಿದ್ದರು.

ದೇವರಹಿಪ್ಪರಗಿ ಮತಕ್ಷೇತ್ರದ ಬ.ಸಾಲವಾಡಗಿ ನಾನು ಹುಟ್ಟಿದ ಊರು ಇಲ್ಲಿ ನಮ್ಮದೆ ಆದ ಅಭಿಮಾನಿ ಬಳಗ, ಸಂಬಂಧಿಕರು ಹಾಗೂ ಸ್ನೇಹಿತರು ಇದ್ದಾರೆ. ನಿಸ್ವಾರ್ಥದಿಂದ ನಾನು ಕ್ಷೇತ್ರದಲ್ಲಿ ಸೇವೆ ಮಾಡುತ್ತಿದ್ದು. ಬಡ ಜನತೆಗಾಗಿ ನನ್ನ ಸಮಾಜಸೇವೆ ನಿರಂತರವಾಗಿ ಇರಲಿದೆ. ಬರುವಂತಹ ದಿನಗಳಲ್ಲಿ ಪಕ್ಷ ಗುರುತಿಸಿ ಟಿಕೆಟ್ ನೀಡಿದರೆ ಸ್ಪರ್ಧಿಸಲು ಸಿದ್ಧನಿದ್ದೇನೆ.

ಬಸನಗೌಡ ಎಸ್. ಪಾಟೀಲ(ಯಡಿಯಾಪುರ), ಮಾಜಿ ಜಿಪಂ ಅಧ್ಯಕ್ಷರು ಹಾಗೂ ಬಿಜೆಪಿ ಮುಖಂಡರು ಬ.ಸಾಲವಾಡಗಿ