ಸಾರಾಂಶ
ಹೊಳೆನರಸೀಪುರ ಪಟ್ಟಣದ ಮಾರಾಟ ಮಳಿಗೆಯೂ ಸಾರ್ವಜನಿಕರಿಗೆ ರಾಜ್ಯ ಹಾಪ್‌ಕಮ್ಸ್ ಮಾರಾಟ ನಿಗಮ ಹಣ್ಣುಗಳನ್ನು ನೀಡುವಲ್ಲಿ ಬಹಳಷ್ಟು ಉತ್ತಮ ಸಾಧನೆ ಮಾಡಿದ ಪರಿಣಾಮ ಇಂದು ಹಲವಾರು ವಿಧದ ಗುಣಮಟ್ಟದ ಹಣ್ಣುಗಳು ದೊರೆಯುವ ಜೊತೆಗೆ ತಾಜಾ ಹಣ್ಣುಗಳು ದೊರೆಯುತ್ತಿರುವುದು ವಿಶೇಷ ಎಂದೆ ಹೇಳಬಹುದಾಗಿದೆ. ಆದರೆ ಇಲ್ಲಿನ ಹಾಪ್‌ಕಾಮ್ಸ್ ಮಳಿಗೆಯಲ್ಲಿ ಎಲ್ಲ ವಿಧವಾದ ಹಣ್ಣುಗಳು ದೊರೆಯುತ್ತಿದೆಯಾದರೂ ಹಣ್ಣುಗಳ ಮಾರಾಟದ ನಿಗದಿತ ಬೆಲೆಯ ಪಟ್ಟಿ ಹಾಕದೇ ಮನಬಂದಂತೆ ಬೆಲೆ ನಿಗದಿ ಪಡಿಸಿ, ಗ್ರಾಹಕರನ್ನು ದೋಚಲಾಗುತ್ತಿದೆ.
ಕನ್ನಡಪ್ರಭ ವಾರ್ತೆ ಹೊಳೆನರಸೀಪುರ
ಪಟ್ಟಣದ ಹಾಪ್‌ಕಾಮ್ಸ್ ಹಣ್ಣಿನ ಮಾರಾಟ ಮಳಿಗೆಯಲ್ಲಿನ ಹಣ್ಣುಗಳ ಮಾರಾಟದ ಬೆಲೆ ಪಟ್ಟಿ ಇಲ್ಲದೇ ಜನರನ್ನು ದೋಚಲಾಗುತ್ತಿದೆ ಎಂದು ಸಾರ್ವಜನಿಕರು ದೂರಿದ್ದಾರೆ.ಪಟ್ಟಣದ ಮಾರಾಟ ಮಳಿಗೆಯೂ ಸಾರ್ವಜನಿಕರಿಗೆ ರಾಜ್ಯ ಹಾಪ್‌ಕಮ್ಸ್ ಮಾರಾಟ ನಿಗಮ ಹಣ್ಣುಗಳನ್ನು ನೀಡುವಲ್ಲಿ ಬಹಳಷ್ಟು ಉತ್ತಮ ಸಾಧನೆ ಮಾಡಿದ ಪರಿಣಾಮ ಇಂದು ಹಲವಾರು ವಿಧದ ಗುಣಮಟ್ಟದ ಹಣ್ಣುಗಳು ದೊರೆಯುವ ಜೊತೆಗೆ ತಾಜಾ ಹಣ್ಣುಗಳು ದೊರೆಯುತ್ತಿರುವುದು ವಿಶೇಷ ಎಂದೆ ಹೇಳಬಹುದಾಗಿದೆ. ಆದರೆ ಇಲ್ಲಿನ ಹಾಪ್‌ಕಾಮ್ಸ್ ಮಳಿಗೆಯಲ್ಲಿ ಎಲ್ಲ ವಿಧವಾದ ಹಣ್ಣುಗಳು ದೊರೆಯುತ್ತಿದೆಯಾದರೂ ಹಣ್ಣುಗಳ ಮಾರಾಟದ ನಿಗದಿತ ಬೆಲೆಯ ಪಟ್ಟಿ ಹಾಕದೇ ಮನಬಂದಂತೆ ಬೆಲೆ ನಿಗದಿ ಪಡಿಸಿ, ಗ್ರಾಹಕರನ್ನು ದೋಚಲಾಗುತ್ತಿದೆ.
ಈ ಬಗ್ಗೆ ಗ್ರಾಹಕರು ಬೆಲೆ ಪಟ್ಟಿ ಇಲ್ಲದ ಬಗ್ಗೆ ಆಕ್ಷೇಪ ವ್ಯಕ್ತಪಡಿಸಿದಾಗ ಮಾರಾಟ ಮಳಿಗೆಯಲ್ಲಿನ ಸಿಬ್ಬಂದಿ ಸರಿಯಾಗಿ ಸ್ಪಂದಿಸದೆ ಇರುವುದು ಸಾರ್ವಜನಿಕರ ಆಕ್ರೋಶಕ್ಕೆ ಕಾರಣವಾಗಿದೆ. ಹಣ್ಣುಗಳ ಮಾರಾಟ ಮಳಿಗೆ ಹಾಪ್‌ಕಾಮ್ಸ್‌ಗೇ ಸೇರಿದ್ದಾದರೂ ಸಹ ಈ ಮಳಿಗೆ ಹಾಪ್‌ಕಾಮ್ಸ್ ಎಂಬುದರ ಯಾವುದೇ ನಾಮಫಲಕ ಇಲ್ಲ ಜೊತೆಗೆ ಹಣ್ಣುಗಳ ಬೆಲೆ ಪಟ್ಟಿಯಂತೂ ಇಲ್ಲವೇ ಇಲ್ಲವಾಗಿರುವುದು ಹಲವಾರು ಸಂಶಯಗಳಿಗೆ ಕಾರಣವಾಗಿದೆ.ಈ ಹಾಪ್‌ಕಾಮ್ಸ್ ಮಳಿಗೆಯಲ್ಲಿನ ನ್ಯೂನತೆಯನ್ನು ಸರಿಪಡಿಸಿ ಹಾಪ್‌ಕಾಮ್ಸ್ ನಾಮಫಲಕ ಬೆಲೆ ಪಟ್ಟಿ ಸಾರ್ವಜನಿಕರಿಗೆ ಕಾಣುವಂತೆ ಮಾಡಿ ಹಾಪ್‌ಕಾಮ್ಸ್ ಘನತೆಯನ್ನು ಮತ್ತಷ್ಟು ಹೆಚ್ಚು ಮಾಡುವಲ್ಲಿ ನಿಗಮದ ಅಧಿಕಾರಿಗಳು ಮಾಡಬೇಕಿದೆ.