ದುಡಿಯುವ ಬಂಡವಾಳಕ್ಕೆ ಕೊರತೆ ಇಲ್ಲ : ಹರೀಶ್‌

| Published : Apr 08 2024, 01:05 AM IST

ಸಾರಾಂಶ

ಸಂಘದ ಸದಸ್ಯರುಗಳಿಗೆ ಎಲ್ಲಾ ವಿಧದ ಸಾಲಗಳನ್ನು ನೀಡಲಾಗುತ್ತಿದ್ದು ಸಂಘದಲ್ಲಿ ದುಡಿಯುವ ಬಂಡವಾಳಕ್ಕೆ ಕೊರತೆ ಇಲ್ಲ ಎಂದು ನಗರದ ಗಾಯತ್ರಿ ಪತ್ತಿನ ಸಹಕಾರ ಸಂಘದ ಅಧ್ಯಕ್ಷ ಕೆ ಹರೀಶ್ ಹೇಳಿದರು.

ಕನ್ನಡಪ್ರಭ ವಾರ್ತೆ ಅರಸೀಕೆರೆ

ಸಂಘದ ಸದಸ್ಯರುಗಳಿಗೆ ಎಲ್ಲಾ ವಿಧದ ಸಾಲಗಳನ್ನು ನೀಡಲಾಗುತ್ತಿದ್ದು ಸಂಘದಲ್ಲಿ ದುಡಿಯುವ ಬಂಡವಾಳಕ್ಕೆ ಕೊರತೆ ಇಲ್ಲ ಎಂದು ನಗರದ ಗಾಯತ್ರಿ ಪತ್ತಿನ ಸಹಕಾರ ಸಂಘದ ಅಧ್ಯಕ್ಷ ಕೆ ಹರೀಶ್ ಹೇಳಿದರು.

ನಗರದ ಶ್ರೀರಾಮ ಮಂದಿರ ಆವರಣದಲ್ಲಿ ಆಯೋಜಿಸಿದ್ದ ನೂತನ ಆಡಳಿತ ಮಂಡಳಿ ಅಧಿಕಾರ ಸ್ವೀಕಾರ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು ಕಳೆದ ಬಾರಿ ತಮ್ಮ ಅವಧಿಯಲ್ಲಿ ಸಹಕಾರ ನೀಡಿದ ಮಾಜಿ ನಿರ್ದೇಶಕರುಗಳಿಗೆ ಕೃತಜ್ಞತೆ ಹೇಳುವುದು ಹಾಗೂ ನೂತನ ನಿರ್ದೇಶಕರುಗಳಿಗೆ ಅಭಿನಂದಿಸುವ ಒಂದು ಸಂಪ್ರದಾಯವನ್ನು ನಾವು ನಡೆಸಿಕೊಂಡು ಬಂದಿದ್ದೇವೆ ಅದರಂತೆ ಇಂದು ಈ ಕಾರ್ಯಕ್ರಮ ಆಯೋಜಿಸಲಾಗಿದೆ, ಸದಸ್ಯರುಗಳು ನಿರ್ದೇಶಕರು ನನ್ನನ್ನು ಮರು ಆಯ್ಕೆ ಮಾಡಿದ್ದಾರೆ. ಸಂಘವನ್ನು ಪ್ರಗತಿ ಪಥದಲ್ಲಿ ಕೊಂಡೊಯ್ಯುತ್ತಿದ್ದು ಪ್ರತಿ ವರ್ಷ ಹೆಚ್ಚಿನ ಲಾಭದಲ್ಲಿಯೇ ನಡೆಯುತ್ತಿದೆ ಸಾಲಗಾರರು ಸ್ಪಂದಿಸುತ್ತಿದ್ದಾರೆ ನಮ್ಮ ನಿರೀಕ್ಷೆಗಿಂತಲೂ ಮುಂಚಿತವಾಗಿ ಸಾಲವನ್ನು ತೀರುವಳಿ ಮಾಡುತ್ತಿದ್ದು ನಮಗೆ ಇನ್ನು ಹೆಚ್ಚಿನ ಸೇವೆ ನೀಡಲು ಸ್ಪೂರ್ತಿದಾಯಕರಾಗಿದ್ದಾರೆ ಎಂದ ಅವರು ದುಡಿಯುವ ಬಂಡವಾಳಕ್ಕಾಗಿ ಶೇರು ಹೆಚ್ಚಿಸುವ ಅಗತ್ಯವಿಲ್ಲ ನಮ್ಮಲ್ಲಿ ದುಡಿಯೋ ಬಂಡವಾಳಕ್ಕೆ ಕೊರತೆ ಇಲ್ಲ ಎಲ್ಲಾ ವಿಧದ ಸಾಲಗಳನ್ನು ನೀಡುತ್ತಿದ್ದೇವೆ ಇದೇ ವರ್ಷದಲ್ಲಿ ಸಂಘ ರಜತ ಮಹೋತ್ಸವವ ಆಚರಿಸಿಕೊಳ್ಳುತ್ತಿದ್ದು ಈ ಒಂದು ಕಾರ್ಯಕ್ರಮವನ್ನು ಅರ್ಥಪೂರ್ಣವಾಗಿ ಮಾಡಬೇಕೆಂಬ ಆಕಾಂಕ್ಷೆ ನಮ್ಮದಾಗಿದೆ ಸಮಾರಂಭವನ್ನು ಹೇಗೆ ರೂಪಿಸಬೇಕು ಎಂಬ ಬಗ್ಗೆ ಕಾರ್ಯಕಾರಿ ಸಮಿತಿ ಸಭೆಯಲ್ಲಿ ಚರ್ಚಿಸಿ ತೀರ್ಮಾನ ಕೈಗೊಳ್ಳಲಾಗುವುದು ಎಂದರು. ನಿರ್ದೇಶಕ ಸುರೇಶ್ ಇನ್ನು ಹೆಚ್ಚಿನ ತಾಂತ್ರಿಕತೆಯನ್ನು ಅಳವಡಿಸಿಕೊಳ್ಳಬೇಕೆಂದು ಸಲಹೆ ನೀಡಿದರು,

ಸಂಘದ ಉಪಾಧ್ಯಕ್ಷ ಹೆಚ್ ವಿ ಗೋಪಾಲ್ ಸಹಕಾರ ಸಂಸ್ಥೆ ಉದಯ ಮತ್ತು ಅದರ ಉದ್ದೇಶ ಹಾಗೂ ನಿರ್ವಹಣೆ ಕುರಿತಂತೆ ಹೆಚ್ಚಿನ ಮಾಹಿತಿಯನ್ನು ನೀಡಿದರು, ನಿರ್ದೇಶಕ ಟಿ ಆರ್ ಕೃಷ್ಣಮೂರ್ತಿ ತಮ್ಮನ್ನು ಆಯ್ಕೆ ಮಾಡಿದ ಸದಸ್ಯರುಗಳಿಗೆ ಅಭಿನಂದನೆ ಹೇಳಿದರು.

ನಿರ್ದೇಶಕ ಮುರಳಿ ಶೇರುದಾರರಿಂದ ಹೆಚ್ಚು ಷೇರುಗಳನ್ನು ಪಡೆಯುವ ಮೂಲಕ ಬಂಡವಾಳವನ್ನು ವೃದ್ಧಿಸಿಕೊಳ್ಳಬೇಕು ಮತ್ತು ಇನ್ನೂ ವಿವಿಧ ಸಾಲಗಳ ನೀಡಿಕೆಗೆ ನಾವು ಮುಂದಾಗ ಬೇಕೆಂದು ಅವರು ಸಲಹೆ ನೀಡಿದರು. ಮಾಜಿ ಉಪಾಧ್ಯಕ್ಷ ,ರವಿಶಂಕರ್ , ಗಿರೀಶ್, ನಾಗೇಂದ್ರ, ಪ್ರಕಾಶ್, ಅಶ್ವಿನಿ, ಲಕ್ಷ್ಮಿ, ವಾಣಿ,ಗೋಪಾಲ್ ವ್ಯವಸ್ಥಾಪಕ ಮಂಜುನಾಥ್ ಉಪಸ್ಥಿತರಿದ್ದರು.