ನನ್ನ ವಿರುದ್ಧದ ಆರೋಪಗಳಲ್ಲಿ ಹುರುಳಿಲ್ಲ: ಡಾ.ಬಿಲಗುಂದಿ

| Published : Feb 13 2024, 12:47 AM IST

ಸಾರಾಂಶ

ಕೆಲ ಒಳ ಹೊರಗಿನವರು ನನ್ನ ಮೇಲೆ ಅನಗತ್ಯ ಆರೋಪಗಳನ್ನು, ಸುಳ್ಳು ಮಾಹಿತಿಗಳನ್ನು ಹರಡಿಸಲಾಗುತ್ತಿದೆ ಎಂದು ಹೈದ್ರಾಬಾದ್‌ ಕರ್ನಾಟಕ ಶಿಕ್ಷಣ ಸಂಸ್ಥೆಯ ಅಧ್ಯಕ್ಷ ಡಾ. ಭೀಮಾಶಂಕರ ಬಿಲಗುಂದಿ ಅಸಮಧಾನ ವ್ಯಕ್ತಪಡಿಸಿದರು.

ಕನ್ನಡಪ್ರಭ ವಾರ್ತೆ ಬೀದರ್‌:

ಶಿಕ್ಷಣ ಸಂಸ್ಥೆಯ ಕೌನ್ಸಿಲ್‌ ಸದಸ್ಯರಿಗೆ ಪೂರ್ಣಾಧಿಕಾರ ನೀಡಿ ಶಿಕ್ಷಣ ಸಂಸ್ಥೆಗಳ ಅಭಿವೃದ್ಧಿಗೆ ಒತ್ತು ನೀಡಿರುವೆ, ಒಟ್ಟಾರೆ 195ಕೋಟಿ ರು. ಅಭಿವೃದ್ಧಿ ಮಾಡಿದ್ದೇನೆ. 100ಕೋಟಿ ರು.ಗಳ ಆದಾಯದ ಬ್ಯಾಲೆನ್ಸ್‌ ಶೀಟ್‌ ನೀಡಿದ್ದು ಐತಿಹಾಸಿಕ, ಅದಾಗ್ಯೂ ಕೆಲ ಒಳ ಹೊರಗಿನವರು ನನ್ನ ಮೇಲೆ ಅನಗತ್ಯ ಆರೋಪಗಳನ್ನು, ಸುಳ್ಳು ಮಾಹಿತಿಗಳನ್ನು ಹರಡಿಸಲಾಗುತ್ತಿದೆ ಎಂದು ಹೈದ್ರಾಬಾದ್‌ ಕರ್ನಾಟಕ ಶಿಕ್ಷಣ ಸಂಸ್ಥೆಯ ಅಧ್ಯಕ್ಷ ಡಾ. ಭೀಮಾಶಂಕರ ಬಿಲಗುಂದಿ ಅಸಮಧಾನ ವ್ಯಕ್ತಪಡಿಸಿದರು.

ಅವರು ಸೋಮವಾರ ಇಲ್ಲಿನ ಹೈದ್ರಾಬಾದ್‌ ಕರ್ನಾಟಕ ಶಿಕ್ಷಣ ಸಂಸ್ಥೆಯ ಬಿವಿಬಿ ಕಾಲೇಜು ಮೈದಾನದಲ್ಲಿ ಆಯೋಜಿಸಲಾಗಿದ್ದ ಸೈನಿಕ ಶಾಲೆ ಕಟ್ಟಡ ನಿರ್ಮಾಣ ಶಂಕುಸ್ಥಾಪನೆ ಕಾರ್ಯಕ್ರಮದಲ್ಲಿ ಮಾತನಾಡಿ, ನಮ್ಮಲ್ಲಿ ಕುಳಿತುಕೊಳ್ಳುವವರು ನಮ್ಮ ಜೊತೆ ಮಾತನಾಡಿ ಮಾಹಿತಿ ಕಲೆಹಾಕಿ ಅನುಮಾನ ಪರಿಹಾರ ಕಲ್ಪಿಸಿಕೊಳ್ಳಬಹುದು. ಆದರೆ ಹಾಗೇ ಮಾಡದೇ ಪತ್ರಿಕಾ ಮಾಧ್ಯಮಗಳ ಮುಂದೆ ಹೋಗುತ್ತಿರುವದು ಸರಿಯಲ್ಲ ಎಂದರು.

ಈ ಹಿಂದೆ ನಮ್ಮ ಸಂಸ್ಥೆಯ ಕಾಲೇಜುಗಳಿಗೆ 90ಕ್ಕೂ ಹೆಚ್ಚು ಪ್ರವೇಶಾತಿ ಇರುತ್ತಿರಲಿಲ್ಲ. ಈಗ 900ಕ್ಕೂ ಹೆಚ್ಚು ಪ್ರವೇಶಾತಿ ಆಗುತ್ತಿದ್ದು 500ಕ್ಕೂ ಹೆಚ್ಚು ವಿದ್ಯಾರ್ಥಿಗಳಿಗೆ ಪ್ರತಿ ವರ್ಷ ಉದ್ಯೋಗ ಸಿಗುತ್ತಿದೆ. ಈ ಹಿಂದೆ ಅಧಿಕಾರದಲ್ಲಿ ಇದ್ದವರು ಏನು ಅಭಿವೃದ್ಧಿ ಮಾಡಿದ್ದಾರೆ ತಿಳಿಸಲಿ ವಿರೋಧಿಗಳಲ್ಲಿ ಹೊಟ್ಟೆ ಕಿಚ್ಚು ಹೆಚ್ಚಾಗಿದೆ ಎಂದು ಆರೋಪಿಸಿದರು. ನನಗೆ ವಯಕ್ತಿಕ ಹಿತಾಸಕ್ತಿ ಇಲ್ಲ, ಎಲ್ಲವೂ ಕನ್ನಡಿಯಂತಿದೆ:

ನ್ಯಾಯಾಲಯವು 2016ರಲ್ಲಿ ಆದ ಆದೇಶದಂತೆ ಪತ್ರಿಕೆಯಲ್ಲಿ ಜಾಹೀರಾತು, ಮೂರು ಜಿಲ್ಲೆಗಳ ಜಿಲ್ಲಾಧಿಕಾರಿಗಳಿಗೆ ಹಾಗೂ ಸಹಾಯಕ ಆಯುಕ್ತರಿಗೆ ಹಾಗೂ ಸಹಕಾರ ನಿಬಂಧಕರ ಮೇಲ್ವಿಚಾರಣೆಯಲ್ಲಿ ಸದಸ್ಯತ್ವ ನೋಂದಣಿ ಆಗಿದೆ ಹೊರತು ನನ್ನ ಹಿತಾಸಕ್ತಿ ಏನೂ ಇಲ್ಲ ಎಂದು ತಿಳಿಸಿದರು.

ಅಧಿಕಾರ ಬದಲಾಗುವ ಮುನ್ಸೂಚನೆ ನೀಡಿದರೆ ಡಾ. ಬಿಲಗುಂದಿ:

ಕೋವಿಡ್‌ ಸಂಕಷ್ಟದಲ್ಲಿಯೂ ನಿಯಮಿತವಾಗಿ ಸಂಬಳ ನೀಡಲಾಗಿದೆ, ಕೋಟ್ಯಂತರ ರುಪಾಯಿ ಅಭಿವೃದ್ಧಿ ಕಾರ್ಯವನ್ನು ಮಾಡಿದ್ದೇನೆ ಬೀದರ್‌ ಸೈನಿಕ ಶಾಲೆಗೆ 3ಕೋಟಿ ರು.ಗಳನ್ನು ತಕ್ಷಣವೇ ಬಿಡುಗಡೆ ಮಾಡಿ ನನ್ನ ಅವಧಿಯಲ್ಲಿಯೇ ಕಾರ್ಯಾರಂಭ ಮಾಡಿಸುತ್ತೇನೆ ಮುಂದೆ ಬರುವವರು ಅಭಿವೃದ್ಧಿಗೆ ಹೆಗಲು ಕೊಟ್ಟು ನಡೆಯಲಿ ಎಂದು ತಿಳಿಸುವ ಮೂಲಕ ಡಾ. ಭೀಮಾಶಂಕರ ಬಿಲಗುಂದಿ ಅವರು ಮಾರ್ಚ ಅಂತ್ಯದಲ್ಲಿ ನಡೆಯಲಿರುವ ಎಚ್‌ಕೆಇ ಸಂಸ್ಥೆಯ ಚುನಾವಣೆಯಲ್ಲಿ ತಮ್ಮ ಪ್ರಸಕ್ತ ಅಧಿಕಾರಾವಧಿಯ ಅಂತ್ಯದ ಮುನ್ಸೂಚನೆ ನೀಡಿದಂತಿತ್ತು.