ಸಾರಾಂಶ
ಕನ್ನಡಪ್ರಭ ವಾರ್ತೆ ವಿರಾಜಪೇಟೆ
ವಿದ್ಯಾ ಸಂಸ್ಥೆಗಳ ನಡುವೆ ಪರಸ್ಪರ ಬಾಂಧವ್ಯ ಮೂಡಿದಾಗ ಮಾತ್ರ ವಿದ್ಯಾರ್ಥಿಗಳ ಮಾತ್ರವಲ್ಲದೆ ಸಂಸ್ಥೆಯ ಸರ್ವತೋಮುಖ ಪ್ರಗತಿ ಸಾಧ್ಯ ಎಂದು ವಿರಾಜಪೇಟೆಯ ಸೆಂಟ್ ಆನ್ಸ್ ಪದವಿ ಕಾಲೇಜಿನ ವ್ಯವಸ್ಥಾಪಕ ಹಾಗೂ ಪದವಿ ಪೂರ್ವ ಕಾಲೇಜಿನ ಪ್ರಾಂಶುಪಾಲ ರೆ. ಫಾ. ಮದಲೈ ಮುತ್ತು ರವರು ಅಭಿಪ್ರಾಯಪಟ್ಟರು.ಕಾಲೇಜಿನಲ್ಲಿ ಜಿಲ್ಲೆಯ ಪದವಿಪೂರ್ವ ಕಾಲೇಜು ವಿದ್ಯಾರ್ಥಿಗಳಿಗೆ ಆಯೋಜಿಸಲಾಗಿದ್ದ ಎಕೋಸ್ ಆಫ್ ದಿ ಅರ್ಥ್ ಧ್ಯೇಯದಡಿಯಲ್ಲಿ ಆನ್ಸ್ ಫೆಸ್ಟ್ 2k25 ನ್ನು ಉದ್ಘಾಟಿಸಿ ಮಾತನಾಡಿದರು.
ವಿದ್ಯಾ ಸಂಸ್ಥೆಗಳು ಕಾರ್ಯಕ್ರಮವನ್ನು ಆಯೋಜಿಸಿ ಮತ್ತೊಂದು ವಿದ್ಯಾ ಸಂಸ್ಥೆಯ ವಿದ್ಯಾರ್ಥಿಗಳನ್ನು ಪರಸ್ಪರ ಆಹ್ವಾನಿಸಿ ಶೈಕ್ಷಣಿಕ ಕಾರ್ಯಕ್ರಮಗಳನ್ನು ಆಯೋಜಿಸುವುದರಿಂದ ಸಂಸ್ಥೆಗಳ ನಡುವೆ ಪರಸ್ಪರ ಸಹಕಾರ, ಬಾಂಧವ್ಯ ಬೆಳೆಯುತ್ತದೆ ಎಂದರು.ಶಿಕ್ಷಣ ವಿದ್ಯಾರ್ಥಿ ಕೇಂದ್ರೀತ
ಇಂದಿನ ಶಿಕ್ಷಣವು ವಿದ್ಯಾರ್ಥಿ ಕೇಂದ್ರೀತವಾಗಿದ್ದು ನಮ್ಮ ವಿದ್ಯಾ ಸಂಸ್ಥೆಯು ಮೌಲ್ಯ ಧಾರಿತ ಶಿಕ್ಷಣಕ್ಕೆ ಮನ್ನಣೆಯನ್ನು ನೀಡುತ್ತಿದೆ ಎಂದರು.ವಿದ್ಯಾಸಂಸ್ಥೆಯ ಪ್ರಗತಿಯಲ್ಲಿ ವಿದ್ಯಾರ್ಥಿಗಳ ಪಾತ್ರ ಅಪಾರ ಎಂದು ಹೇಳಿದರು.
ಕಾರ್ಯಕ್ರಮಕ್ಕೆ ಆಗಮಿಸಿದ ಸರ್ವ ವಿದ್ಯಾರ್ಥಿಗಳಿಗೆ ಶುಭವನ್ನು ಕೋರಿದರು. ಪದವಿ ಕಾಲೇಜಿನ ಪ್ರಾಂಶುಪಾಲೆ ತೃಪ್ತಿ ಬೋಪಣ್ಣ ರವರು ಪ್ರಾಸ್ತಾವಿಕವಾಗಿ ಮಾತನಾಡಿ, ಆನ್ಸ್ ಫೆಸ್ಟ್ 2k25 ಆರಂಭವಾಗಿದೆ ಎಂದು ಘೋಷಿಸಿದರು. ಉದ್ಘಾಟನಾ ಸಮಾರಂಭದ ಬಳಿಕ ನಿಗದಿಪಡಿಸಿದ ತರಗತಿಗಳಲ್ಲಿ ವಿದ್ಯಾರ್ಥಿಗಳಿಗೆ ವಿವಿಧ ಸ್ಪರ್ಧೆಗಳನ್ನು ಆಯೋಜಿಸಲಾಗಿತ್ತು. ಜಿಲ್ಲೆಯ ವಿವಿಧಡೆಗಳಿಂದ ಆಗಮಿಸಿದ ಪದವಿ ಪೂರ್ವ ಕಾಲೇಜಿನ ವಿದ್ಯಾರ್ಥಿಗಳು ಸ್ಪರ್ಧೆಗಳಲ್ಲಿ ಉತ್ಸಾಹದಿಂದ ಭಾಗವಹಿಸಿದರು. ಅಂತಿಮವಾಗಿ ಪೊನ್ನಂಪೇಟೆಯ ಕೂರ್ಗ್ ಇನ್ಸ್ಟಿಟ್ಯೂಟ್ ಪದವಿ ಪೂರ್ವ ಕಾಲೇಜು ಸಮಗ್ರ ಪ್ರಶಸ್ತಿಯನ್ನು ಪಡೆದು ಓವರಾಲ್ ಚಾಂಪಿಯನ್ಸ್ ಪಟ್ಟವನ್ನು ಪಡೆಯಿತು. ಮಡಿಕೇರಿಯ ಸಂತ ಮೈಕಲರ ಪದವಿ ಪೂರ್ವ ಕಾಲೇಜು ರನ್ನರ್ಸ್ ಟ್ರೋಫಿಯನ್ನು ಪಡೆದುಕೊಂಡರು. ಸಂಜೆ ನಡೆದ ಸಮಾರೋಪ ಸಮಾರಂಭದಲ್ಲಿ ಮುಖ್ಯ ಅತಿಥಿಗಳಾಗಿ ನಟಿ ಹಾಗು ಗಾಯಕಿ ಬಟ್ಟಿಯಂಡ ಲಿಖಿತಾ ಪಾಲ್ಗೊಂಡಿದ್ದರು.ಗಮನಾರ್ಹ ವಿಚಾರ:
ಕಾಲೇಜಿನ ಪ್ರಾಂಶುಪಾಲೆ ತೃಪ್ತಿ ಬೋಪಣ್ಣ ರವರು ಮಾತನಾಡುತ್ತಾ ವಿದ್ಯಾರ್ಥಿಗಳು ಉತ್ಸಾಹದಿಂದ ಸ್ಪರ್ಧೆಗಳಲ್ಲಿ ಪಾಲ್ಗೊಂಡಿದ್ದು ಗಮನಾರ್ಹ ವಿಚಾರವಾಗಿದೆ. ಪಠ್ಯದ ಜೊತೆಗೆ ಪಠ್ಯೇತರ ಚಟುವಟಿಕೆಗಳಿಗೂ ಕೂಡ ವಿದ್ಯಾರ್ಥಿಗಳು ಗಮನವನ್ನು ನೀಡಿ ಎಂದು ಹೇಳಿದರು.ಪದವಿ ಕಾಲೇಜಿನ ವ್ಯವಸ್ಥಾಪಕ ರೆ. ಫಾ. ಮದಲೈ ಮುತ್ತು ಅಧ್ಯಕ್ಷತೆ ವಹಿಸಿದ್ದರು. ಕಾರ್ಯಕ್ರಮವು ಸಂಪೂರ್ಣವಾಗಿ ಯಶಸ್ವಿಯಾಗಿದ್ದು ವಿದ್ಯಾರ್ಥಿಗಳು ಭಾಗವಹಿಸುವುದರ ಮೂಲಕ ಒಂದು ಉತ್ತಮ ಅನುಭವವನ್ನು ಪಡೆದಿರುತ್ತಾರೆ. ಶಿಸ್ತನ್ನು ಮೈಗೂಡಿಸುವುದರ ಮೂಲಕ ಪೋಷಕರಿಗೂ ಹಾಗೂ ಸಂಸ್ಥೆಗೂ ಹೆಸರನ್ನು ತನ್ನಿ ಎಂದರು. ವಿವಿಧ ಸ್ಪರ್ಧೆಗಳಲ್ಲಿ ವಿಜೇತರಾದ ವಿದ್ಯಾರ್ಥಿಗಳಿಗೆ ಅತಿಥಿಗಳು ಬಹುಮಾನವನ್ನು ವಿತರಿಸಿದರು. ವೇದಿಕೆಯಲ್ಲಿ ಸಂತ ಅನ್ನಮ್ಮ ವಿದ್ಯಾ ಸಂಸ್ಥೆಗಳ ವ್ಯವಸ್ಥಾಪಕ ಹಾಗೂ ಪ್ರಧಾನ ಗುರುಗಳಾದ ರೆ. ಫಾ. ಜೇಮ್ಸ್ ಡೊಮಿನಿಕ್, ಸಹಾಯಕ ಗುರುಗಳಾದ ಫಾ. ಅಭಿಲಾಶ್, ಕಾಲೇಜಿನ ಐಕ್ಯೂ ಎಸಿ ಸಂಚಾಲಕಿ ಹೇಮ ಬಿ. ಡಿ., ಪ್ರಾಧ್ಯಾಪಕ ಅರ್ಜುನ್, ವಿದ್ಯಾರ್ಥಿ ಸಂಘದ ನಾಯಕ ಕೃಷ್ಣ ಶಾಸ್ತ್ರಿ ಉಪಸ್ಥಿತರಿದ್ದರು.
ಈ ಸಂದರ್ಭದಲ್ಲಿ ಸೆಂಟ್ ಆನ್ಸ್ ಪದವಿ ಕಾಲೇಜುವಿನ ಉಪನ್ಯಾಸಕರು, ವಿವಿಧ ಕಾಲೇಜುಗಳ ಉಪನ್ಯಾಸಕರು, ವಿದ್ಯಾರ್ಥಿಗಳು ಹಾಜರಿದ್ದರು.ಪ್ರಶಸ್ತಿ ವಿಜೇತ ತಂಡಗಳ ವಿವರ :
ಒಟ್ಟು ಹತ್ತು ಬಗೆಯ ಸ್ಪರ್ಧೆಗಳನ್ನು ಆಯೋಜಿಸಲಾಗಿದ್ದು ಅದರಲ್ಲಿ ಪೊನ್ನಂಪೇಟೆಯ ಕೂರ್ಗ್ ಇನ್ಸ್ಟಿಟ್ಯೂಟ್ ಪಿಯು ಕಾಲೇಜು ಚಾಂಪಿಯನ್ ಆಗಿ ಹೊರ ಹೊಮ್ಮಿ ಸಮಗ್ರ ಪ್ರಶಸ್ತಿಯ ಜೊತೆಗೆ ಟ್ರೋಫಿ, 15,555 ರು. ನಗದು ಬಹುಮಾನ ಹಾಗೂ ಪ್ರಶಸ್ತಿ ಪತ್ರಗಳನ್ನು ಪಡೆದುಕೊಂಡಿತು. ಮಡಿಕೇರಿಯ ಸಂತ ಮೈಕಲರ ಪಿ ಯು ಕಾಲೇಜು ರನ್ನರ್ಸ್ ಆಗಿ ಹೊರಹೊಮ್ಮಿ 11,111 ರು. ನಗದು, ಟ್ರೋಫಿ ಹಾಗೂ ಪ್ರಶಸ್ತಿ ಪತ್ರಗಳನ್ನು ಪಡೆದುಕೊಂಡಿತು. ವೈಯುಕ್ತಿಕ ಸ್ಪರ್ಧೆಗಳಲ್ಲಿ ಟ್ರಸರ್ ಹಂಟ್ ನಲ್ಲಿ ಸಿದ್ದಾಪುರ ದ ಸೆಂಟ್ ಆನ್ಸ್ ಪಿ ಯು ಕಾಲೇಜು ವಿಜೇತ, ಪೆನ್ಸಿಲ್ ಸ್ಕೆಚ್ ನಲ್ಲಿ ಕೂರ್ಗ್ ಇನ್ಸ್ಟಿಟ್ಯೂಟ್ ಕಾಲೇಜು (ಪ್ರ )ಕುಶಾಲನಗರ ವಿವೇಕಾನಂದ ಪಿ ಯು ಕಾಲೇಜು (ದ್ವಿ ), ರಾಂಪ್ ವಾಕ್ ನಲ್ಲಿ ಕೂರ್ಗ್ ಇನ್ಸ್ಟಿಟ್ಯೂಟ್ ಕಾಲೇಜು (ಪ್ರ ) ವಿರಾಜಪೇಟೆ ಸಂತ ಅನ್ನಮ್ಮ ಪಿ ಯು ಕಾಲೇಜು (ದ್ವಿ ), ಗೇಮಿಂಗ್ ನಲ್ಲಿ ಮಡಿಕೇರಿ ಸಂತ ಮೈಕಲರ ಕಾಲೇಜು (ಪ್ರ ) ಕಾವೇರಿ ಕಾಲೇಜು ವಿರಾಜಪೇಟೆ (ದ್ವಿ ), ಬೆಸ್ಟ್ ಔಟ್ ಓಫ್ ವೇಸ್ಟ್ ನಲ್ಲಿ ಕೂರ್ಗ್ ಇನ್ಸ್ಟಿಟ್ಯೂಟ್ ಕಾಲೇಜು (ಪ್ರ )ಮಡಿಕೇರಿ ಸಂತ ಮೈಕಲರ ಕಾಲೇಜು (ದ್ವಿ ), ಹಗ್ಗಜಗ್ಗಾಟ ಸ್ಪರ್ಧೆಯಲ್ಲಿ ಸಿದ್ದಾಪುರ ಸಂತ ಅನ್ನಮ್ಮ ಕಾಲೇಜು (ಪ್ರ ) ಸಂತ ಮೈಕಲರ ಕಾಲೇಜು (ದ್ವಿ ), ರೀಲ್ ಮೇಕಿಂಗ್ ನಲ್ಲಿ ವಿವೇಕಾನಂದ ಪಿ ಯು ಕಾಲೇಜು (ಪ್ರ )ಕೂರ್ಗ್ ಇನ್ಸ್ಟಿಟ್ಯೂಟ್ ಕಾಲೇಜು (ದ್ವಿ ), ಕ್ವಿಜ್ ನಲ್ಲಿ ಗೋಣಿಕೊಪ್ಪಲು ಕಾಲ್ಸ್ ಕಾಲೇಜು (ಪ್ರ )ಕೂರ್ಗ್ ಇನ್ಸ್ಟಿಟ್ಯೂಟ್ ಕಾಲೇಜು (ದ್ವಿ ), ಸ್ಪೆಲ್ ಬಿ ನಲ್ಲಿ ಕಾಲ್ಸ್ ಕಾಲೇಜು (ಪ್ರ )ಕೂರ್ಗ್ ಇನ್ಸ್ಟಿಟ್ಯೂಟ್ ಕಾಲೇಜು (ದ್ವಿ ), ಫೇಸ್ ಪೈಂಟಿಂಗ್ ನಲ್ಲಿ ವಿರಾಜಪೇಟೆ ಸಂತ ಅನ್ನಮ್ಮ ಪಿ ಯು ಕಾಲೇಜು (ಪ್ರ )ಕೂರ್ಗ್ ಇನ್ಸ್ಟಿಟ್ಯೂಟ್ ಕಾಲೇಜು (ದ್ವಿ )ಬಹುಮಾನವನ್ನು ಪಡೆದುಕೊಂಡಿತು. ವಿಜೇತ ತಂಡಗಳಿಗೆ ಪ್ರಶಸ್ತಿ ಪತ್ರ, ಟ್ರೋಫಿಗಳನ್ನು ವಿತರಿಸಲಾಯಿತು.;Resize=(128,128))
;Resize=(128,128))